ಚಿಕ್ಕೋಡಿ

ಕೆರೆಗಳ ಕಾಮಗಾರಿ ಶೀಘ್ರದಲ್ಲೆ ಮುಗಿಸುವಂತೆ ಸೂಚನೆ

ಕೆರೆಗಳ ಕಾಮಗಾರಿ ಶೀಘ್ರದಲ್ಲೆ ಮುಗಿಸುವಂತೆ ಸೂಚನೆ

ಚಿಕ್ಕೋಡಿ 17: ನರೇಗಾದಡಿಯಲ್ಲಿ ನಿರ್ಮಾಣ ಮಾಡುತ್ತಿರುವ ನೂತನ ಕೆರೆಗಳ ಕಾಮಗಾರಿಯನ್ನು ಶೀಘ್ರದಲ್ಲೆ ಮುಗಿಸುವಂತೆ ಪಿಡಿಓಗಳಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ ಎಚ್ ಸೂಚನೆ ನೀಡಿದರು. ತಾಲೂಕಿನ ಕರೋಶಿ, ಮುಗಳಿ ಸೇರಿದಂತೆ ಒಟ್ಟು 16 ಗ್ರಾಮ ಪಂಚಾಯತಿಗಳಲ್ಲಿ ನೂತನ  ಕೆರೆ ನಿರ್ಮಾಣ ಕಾಮಗಾರಿ ವಿಕ್ಷಣೆ ಮಾಡಿ ಮಾತನಾಡಿದರು. ದುಡಿಯುತ್ತಿರುವ ಕಾಯಕ ಸಂಘದ ಕಾಯಕ ಬಂಧುಗಳಿಗೆ ವೇತನವನ್ನು ಕೂಡಲೇ ಪಾವತಿಸಬೇಕು. ರೈತ ಕ್ರೀಯಾ ಯೋಜನೆಯಲ್ಲಿ ಬಂದತಹ ಕಾಮಗಾರಿಗಳನ್ನು ಶೀಘ್ರವಾಗಿ ಪ್ರಾರಂಭಿಸುವಂತೆ ಪಿಡಿಓಗಳಿಗೆ ಖಡಕ್ಕಾಗಿ ಎಚ್ಚರಿಕೆ ನೀಡಿದರು.ಇದೀಗ ಪಟ್ಟಣಕ್ಕೆ ಗುಳೆ ಹೋಗುವದನ್ನು ತಡೆಗಟ್ಟುವ ನಿಟ್ಟಿನಲ್ಲಿ ದುಡಿಯೋಣ ಬಾ ಎಂಬ ಆಭಿಯಾನ ರಾಜ್ಯ ಸರಕಾರ  ಪ್ರಾರಂಭಿಸಿz ಇದರ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.  ಎಲ್ಲಾ ಗ್ರಾಮ ಪಂಚಾಯತಿಗಳು  ಕೂಲಿ ಕಾರ್ಮಿಕರಿಗೆ ಕೂಲಿ ಕೆಲಸ ನೀಡಬೇಕು.ನರೇಗಾದ ಕೆಲಸ ಮಾಡುವ ಕಾರ್ಮಿಕರಿಗೆ ಪ್ರಥಮ ಚಿಕಿತ್ಸೆ,ಕುಡಿಯುವ ನೀರು,ನೆರಳಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು. ಮಾಡದೆ ಇರುವವರು ವಿರುದ್ದ ಕಠಿಣ ಕ್ರಮ ಜರಗಿಸುವದಾಗಿ ಎಚ್ಚರಿಕೆ ನೀಡಿದರು. ಹೊಸ ಕೆರೆ ನಿರ್ಮಾಣಗಳಿಂದ ಅಂತರಜಲಮಟ್ಟ  ಹೆಚ್ಚಾಗಲಿದೆ.ರೈತರಿಗೆ, ಪ್ರಾಣಿ-ಪಕ್ಷಿಗಳ ಜೀವ ಸಂಕುಲಕ್ಕೆ ಸಹಕಾರಿಯಾಗುತ್ತದೆ ಎಂದರು.ಈ ಸಂದರ್ಭದಲ್ಲಿ  ಪ್ರಭಾರಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಯುಕೇಶಕುಮಾರ,ನರೇಗಾ ಸಹಾಯಕ ನಿರ್ದೇಶಕ ಶಿವಾನಂದ ಶಿರಗಾಂವೆ, ಐಇಸಿ ಸಂಯೋಜಕ ರಂಜೀತ ಕಾಂಬಳೆ, ತಾಂತ್ರಿಕ ಸಹಾಯಕ ಹಾಗೂ ಗ್ರಾಮ ಪಂಚಾಯತಿಗಳ ಪಿಡಿಓಗಳು ಹಾಜರಿದ್ದರು.

ಸುದ್ದಿ ಓದಿ