ಕಣೇಕಲ್ ಮಹೆಬೂಬ್‍ಸಾಬ್‍ಗೆ ಟಿಕೆಟ್ ನೀಡಲು ಒತ್ತಾಯ
ಬಳ್ಳಾರಿ 10: ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕಣೇಕಲ್ ಮೆಹಬೂಬ್‍ಸಾಬ್ ಅವರಿಗೆ 9ನೇ ವಾರ್ಡ್‍ಗೆ ಟಿಕೆಟ್ ನೀಡಬೇಕು ಎಂದು ಯುವ ಮುಖಂಡ ಅಜೀಜ್ ಕಣೇಕಲ್ ಅವರು ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು ಈಗಾಗಲೇ ಚುನಾವಣೆಗೆ ಸ್ಪರ್ಧೆ ಬಯಸಿ 11ಜನ ಟಿಕೇಟ್ ಆಕಾಂಕ್ಷಿಗಳು ಪಕ್ಷದ ವರೀಷ್ಠರಿಗೆ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಇಬ್ಬರು ಮಾತ್ರ ವಾರ್ಡ್ ನವರಿದ್ದು, ಉಳಿದವರು ಬೇರೆ ವಾರ್ಡ್‍ಗೆ ಸೇರಿದವರಾಗಿದ್ದಾರೆ. ಹಿರಿತನ ಆಧಾರದ ಮೇಲೆ, ಪಕ್ಷಕ್ಕಾಗಿ ಸಾಕμÀ್ಟು ಶ್ರಮಿಸಿ ಜನಮನ್ನಣೆ ಪಡೆದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕಣೇಕಲ್ ಮಹೆಬೂಬ್ ಸಾಬ್ ಅವರಿಗೆ ಈ ಬಾರಿ ಟಿಕೇಟ್ ನೀಡಿದರೆ ದಾಖಲೆ ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ಪಕ್ಷದ ವರೀಷ್ಠರು ಇದನ್ನು ಗಂಭೀರವಾಗಿ ಪರಿಗಣಿಸಿ ಟಿಕೇಟ್ ನೀಡಬೇಕು ಎಂದು ಒತ್ತಾಯಿಸಿದರು.
ಬೇರೆ ವಾರ್ಡ್‍ಗೆ ಸಂಬಂಧಿಸಿದವರಿಗೆ ಮಣೆ ಹಾಕಬಾರದು. ಹಿರಿತನ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸಿದ ಹಾಗೂ ಪಕ್ಷದ ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿದ ನಮ್ಮ ನಾಯಕರನ್ನು ಗುರುತಿಸಿ ಪಕ್ಷದ ವರೀಷ್ಟರು ಈ ಬಾರಿ ಟಿಕೇಟ್ ನೀಡಬೇಕು ಎಂದು ಒತ್ತಾಯಿಸಿದರು. ಕಳೆದ 1998-2001ರ ಅವಧಿಯಲ್ಲಿ ಬಳ್ಳಾರಿ ನಗರಸಭೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ, ಈ ಹಿಂದೆ ಹೊಸಪೇಟೆ ಕ್ಷೇತ್ರದ ಚುನಾವಣೆಯಲ್ಲಿ ಕಮಲಾಪೂರ ಪಟ್ಟಣದ ಉಸ್ತುವಾರಿಯನ್ನು ನೀಡಲಾಗಿತ್ತು, ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಸಚಿವ ಆನಂದ್ ಸಿಂಗ್ ಕಾಂಗ್ರೆಸ್ ನಿಂದ ಬಿಜೆಪಿಗೆ ಜಿಗಿದಾಗ ಎದುರಾದ ಉಪ ಚುನಾವಣೆಯಲ್ಲೂ ಕ್ಷೇತ್ರದ ಚುನಾವಣೆ ವೀಕ್ಷಕರಾಗಿ ಕೆಲಸ ನಿರ್ವಹಿಸಿದ್ದಾರೆ, ಈಗಾಗಲೇ 9ನೇ ವಾರ್ಡ್‍ನಲ್ಲಿ ಜನ ಸಂಪರ್ಕ ಕಚೇರಿಯನ್ನು ಪ್ರಾರಂಭಿಸಿ ಜನರ ಸಮಸ್ಯೆಗಳನ್ನು ಆಲಿಸಲು ಮುಂದಾಗಿದ್ದಾರೆ. ಇಲ್ಲಿವರೆಗೂ ವಾರ್ಡ್‍ಗೆ ಯಾವುದೇ ಅಭ್ಯರ್ಥಿ ಅಂತಿಮವಾಗಿಲ್ಲ, ಪಕ್ಷದ ವರೀಷ್ಠರು ಪಕ್ಷಕ್ಕಾಗಿ ಮಾಡಿದ ಇವರ ಸೇವೆಯನ್ನು ಗುರಿತಿಸಿ ವರೀಷ್ಠರು ಟಿಕೇಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲಾಧ್ಯಕ್ಷ ಹಾಗೂ ಟಿಕೇಟ್ ಆಕಾಂಕ್ಷಿ ಕಣೇಕಲ್ ಮಹೆಬೂಬ್‍ಸಾಬ್ ಅವರು ಮಾತನಾಡಿ 9ನೇ ವಾರ್ಡ್‍ಗೆ ನಾನು ಟಿಕೇಟ್ ಆಕಾಂಕ್ಷಿಯಾಗಿರುವೆ, ಪಕ್ಷದ ವರೀಷ್ಠರು ಪಕ್ಷಕ್ಕಾಗಿ ದುಡಿದ ನಮ್ಮ ಸೇವೆ ಗುರುತಿಸಿ ಟಿಕೇಟ್ ನೀಡುವ ವಿಶ್ವಾಸವಿದೆ. ಈಗಾಗಲೇ 11ಜನ ಟಿಕೇಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ನಾನು ಸೇರಿ ಇಬ್ಬರು ಮಾತ್ರ ವಾರ್ಡ್‍ನವರಾಗಿದ್ದಾರೆ. ಉಳಿದವರು ಬೇರೇ ವಾರ್ಡ್ ನವರಾಗಿದ್ದು, ಪಕ್ಷದ ನಾಯಕರು ನಮ್ಮ ಸೇವೆಯನ್ನು ಗುರುತಿಸಿ ನನಗೆ ಟಿಕೇಟ್ ನೀಡಬೇಕು ಎಂದು ಮನವಿ ಮಾಡಿದರು. ದೇಶಕ್ಕೆ ಅನ್ನ ನೀಡುವ ರೈತ ಭೂಮಿಯಲ್ಲಿ ಬೀಜ ಬಿತ್ತಿ ಫಲ ನೀಡುವವರೆಗೆ ಹೇಗೆ ಕಾಯುತ್ತಾನೊ ಅದೇ ರೀತಿ ಪಕ್ಷಕ್ಕಾಗಿ ಸಾಕಷ್ಟು ದುಡಿದ ನನಗೆ ಫಲದೊರೆಯುವ ವಿಶ್ವಾಸವಿದೆ. ಈಗಾಗಲೇ ಪಕ್ಷದ ವರೀಷ್ಠರಿಗೆ ಅರ್ಜಿ ಸಲ್ಲಿಸಿದ್ದು, ಟಿಕೇಟ್ ದೊರೆಯುವ ವಿಶ್ವಾಸವಿದೆ ಎಂದರು.