ಇಂಡಿ

ಪುರಸಭೆಯಲ್ಲಿ ಅವ್ಯವಹಾರ ಕೂಡಲೇ ತನಿಖೆ ನಡೆಸುವಂತೆ ಒತ್ತಾಯ

ಪುರಸಭೆಯಲ್ಲಿ ಅವ್ಯವಹಾರ ಕೂಡಲೇ ತನಿಖೆ ನಡೆಸುವಂತೆ ಒತ್ತಾಯ
ಇಂಡಿ 04: ಪುರಸಭೆ ಸದಸ್ಯರು ಬುಧವಾರ ಪುರಸಭೆ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟಿಸಿದರು.

ಇಂಡಿ17:  ಪುರಸಭೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು ಕೂಡಲೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಉಪಾಧ್ಯಕ್ಷ ಇಸ್ಮಾಯಿಲ್ ಅರಬ ಮತ್ತು ಕೆಲ ಪುರಸಭೆ ಸದಸ್ಯರು ಪುರಸಭೆಗೆ ಬೀಗ ಜಡಿದು ಬುಧವಾರವೂ ಪ್ರತಿಭಟನೆ ನಡೆಸಿದರು. 

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಪುರಸಭೆಯ ಯೋಜನಾ ಅಧಿಕಾರಿ ರಾಜಶೇಖರ ಡಂಬಳ್ ಆಗಮಿಸಿ ಪ್ರತಿಭಟನಾ ನಿರತ ಸದಸ್ಯರಿಗೆ ಪುರಸಭೆಯಲ್ಲಿ ಆದ ಅವ್ಯವಹರದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬೆನ್ನಲ್ಲೆ ಸದಸ್ಯರು ಪ್ರತಿಭಟನೆ ಕೈ ಬಿಟ್ಟರು. 

ಜೆಸಿಬಿ ಯಂತ್ರ, ಬ್ಲೀಚಿಂಗ್ ಪೌಡರ್, ಮುಕ್ತಿ ವಾಹನ ಖರೀದಿ ಸೇರಿದಂತೆ ಇನ್ನಿತರ ಖರೀದಿಗಳಲ್ಲಿ ಅವ್ಯವಹಾರವಾಗಿದೆ ಎಂದು 10 ಕ್ಕಿಂತ ಹೆಚ್ಚು ಸದಸ್ಯರು ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಮಂಗಳವಾರವೇ ಪ್ರತಿಭಟನೆ ಆರಂಭಿಸಿದ್ದರು. 

ಬುಧವಾರವೂ ಪ್ರತಿಭಟನೆ ಮುಂದುವರೆದು ಕೊನೆಗೆ ಜಿಲ್ಲಾ ಯೋಜನಾ ಅಧಿಕಾರಿಗಳ ಭರವಸೆಯ ಮೇರೆಗೆ ಸದಸ್ಯರು ಪ್ರತಿಭಟನೆ ಕೈಬಿಟ್ಟರು. 

ಯೋಜನಾ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಬಿ.ವೈ. ಸುರಪೂರ, ಪುರಸಭೆಯ ಮುಖ್ಯಾಧಿಕಾರಿ ಲಕ್ಷ್ಮೇಶ, ತಹಸೀಲ್ದಾರ ಆರ್‌.ಎಸ್‌. ರೇವಡಿಗಾರ, ಭೀಮನಗೌಡ ಪಾಟೀಲ, ವಿಜಯಕುಮಾರ ಮೂರಮನ್, ಅನೀಲಗೌಡ ಬಿರಾದಾರ, ದೇವೆಂದ್ರ ಕುಂಬಾರ, ಬುದ್ದುಗೌಡ ಪಾಟೀಲ, ತಿಪ್ಪಣ್ಣ ಉಟಗಿ, ಯಲ್ಲಪ್ಪ ಹದರಿ, ಪಿಂಟು ರಾಠೋಡ, ಯಲ್ಲಪ್ಪ ಹದರಿ, ಮತ್ತಿತರರು ಇದ್ದರು. 

ಸುದ್ದಿ ಓದಿ