ಇಂಗಳಗೇರಿ ಗ್ರಾಮ ಪಂಚಾಯತ ಚುನಾವಣೆ ಶೇ. 79 ಮತದಾನ
ತಾಳಿಕೋಟಿ: ಅವಧಿ ಮುಕ್ತಾಯಗೊಂಡಿರುವ ಇಂಗಳಗೇರಿ ಗ್ರಾಮ ಪಂಚಾಯತಿಗೆ ಶನಿವಾರ (25-02-2023) ಸಾರ್ವತ್ರಿಕ ಚುನಾವಣೆ ನಡೆದಿದ್ದು ಶೇ. 79 ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಬಿ.ಎಸ್. ಲಮಾಣಿ ತಿಳಿಸಿದ್ದಾರೆ.
ಇಂಗಳಗೇರಿ ಗ್ರಾಮ ಪಂಚಾಯತನ ಒಟ್ಟು 15 ಸದಸ್ಯರನ್ನು ಆಯ್ಕೆ ಮಾಡಲು ಈ ಚುನಾವಣೆ ಜರುಗಿತು ಈ ಗ್ರಾಮ ಪಂಚಾಯತ ವ್ಯಾಪ್ತಿಗೆ ಇಂಗಳಗೇರಿಯ 5 ಸ್ಥಾನಗಳು ಒಳಗೊಂಡು ಗುಡ್ನಾಳ ಗ್ರಾಮದ 4 ಸ್ಥಾನಗಳಿಗೆ, ಜಮ್ಮಲದಿನ್ನಿಯ 03 ಹಾಗೂ ದೇವರ ಹುಲಗಬಾಳ ಮತಕ್ಷೇತ್ರದ 03, ಸ್ಥಾನಗಳಿಗಾಗಿ ಚುನಾವಣೆ ನಡೆಯಿತು.
ಬೆಳಿಗ್ಗೆ 7-00 ಗಂಟೆಯಿಂದ ಸಾಯಂಕಾಲ 5-00 ಗಂಟೆಯವರೆಗೆ ನಡೆದ ಮತದಾನದಲ್ಲಿ ಕ್ರಮವಾಗಿ ಇಂಗಳಗೇರಿಯಲ್ಲಿ ಶೇ. 85 ಗುಡ್ನಾಳದಲ್ಲಿ ಶೇ. 75 ಜಮ್ಮಲದಿನ್ನಿಯಲ್ಲಿ ಶೇ. 76 ಮತ್ತು ದೇವರ ಹುಲಗಬಾಳದಲ್ಲಿ ಶೇ. 69 ಮತದಾನವಾಗಿದೆ ಎಂದು ತಿಳಿದುಬಂದಿದೆ.
ಮತದಾನದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಿರುವಂತೆ ನೋಡಿಕೊಳ್ಳಲು ಬಿಗಿ ಪೊಲೀಸ್ ಬಂದೋಬಸ್ತಿ ಏರ್ಪಡಿಸಲಾಗಿತ್ತು.
ಯಾವುದೇ ಅಹಿತಕರ ಘಟನೆಗಳು ಆದ ವರದಿಯೂ ಬಂದಿಲ್ಲ. ಮತದಾನ ಸಂಪೂರ್ಣ ಶಾಂತಯುತವಾಗಿ ನಡೆದಿದೆ. ಫಲಿತಾಂಶ ಫೆ. 28ರಂದು ಹೊರಬರಲಿದೆ.
ಚುನಾವಣಾಧಿಕಾರಿಯಾಗಿ ಬಿ.ಎಸ್. ಲಮಾಣಿ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ವಿನೋದ ಝಿಂಗಾಡೆ ಕಾರ್ಯ ನಿರ್ವಹಿಸಿದರು