ಹಗರಿಬೊಮ್ಮನಹಳ್ಳಿ

ಸಪ್ತ ರೋಗಗಳನ್ನು ತಡೆಗಟ್ಟುವ ಇಂದ್ರ ಧನುಷ್ 3.0 ಲಸಿಕಾ ಅಭಿಯಾನಕ್ಕೆ ಚಾಲನೆ

ಸಪ್ತ ರೋಗಗಳನ್ನು ತಡೆಗಟ್ಟುವ ಇಂದ್ರ ಧನುಷ್ 3.0 ಲಸಿಕಾ ಅಭಿಯಾನಕ್ಕೆ ಚಾಲನೆ

ಹಗರಿಬೊಮ್ಮನಹಳ್ಳಿ 22: ಪಟ್ಟಣದ ಕೊಟ್ಟೂರು ವೃತ್ತದಲ್ಲಿ ಸಪ್ತ ರೋಗಗಳನ್ನು ತಡೆಗಟ್ಟುವ ಇಂದ್ರ ಧನುಷ್ 3.0ಗೆ ತಾಲೂಕು ವೈಧ್ಯಾಧಿಕಾರಿ ಡಾ. ಶಿವರಾಜ ಸೋಮವಾರ ಚಾಲನೆ ನೀಡಿದರು.

ಚಾಲನೆ ನೀಡಿ ಮಾತನಾಡಿ 2ವರ್ಷದೊಳಗಿನ ಮಕ್ಕಳ ಹಾಗೂ ಗರ್ಭೀಣಿಯರಿಗೆ ಸಪ್ತರೋಗಗಳಿಂದ ಸುರಕ್ಷತೆಯನ್ನು ವಹಿಸಿಕೊಳ್ಳುವ ನಿಟ್ಟಿನಲ್ಲಿ ಇಂದ್ರ ಧನುಷ್ ಲಸಿಕೆಯು ಕಾರ್ಯ ನಿರ್ವಹಿಸುತ್ತದೆ, ಈವರೆಗೂ ಲಸಿಕೆ ತಲುಪದ ಪ್ರದೇಶಗಳಿಗೆ ಫೆಬ್ರುವರಿ22ರಿಂದ ಮಾರ್ಚ22ರವರೆಗೆಈ ಅಬೀಯಾನ ಅನುಷ್ಠಾನಗೊಳಿಸಲಾಗಿದೆ. ಡಿಫ್ತಿರಿಯಾ, ವೂಫಿಂಗ್ ಕಾಪ್, ಟೆಟಾನಸ್, ಟ್ಯುಬರ್ ಕ್ಯುಲೋಸಿಸ್, ಪೋಲಿಯೋ, ಮಿಸಲ್ಸ್, ಹೆಪಟೈಟಸ್ ಬಿ ಕಾಯಿಲೆಗೆ ಇದರಲ್ಲಿ ಲಸಿಕೆ ನೀಡಲಾಗುವುದು. ಒಟ್ಟಾರೆ ತಾಲೂಕಿನಲ್ಲಿ ಮಾಡಿದ ಸರ್ವೆ ಕಾರ್ಯದಲ್ಲಿ 558 ಮಕ್ಕಳು ಹಾಗೂ 45 ಗರ್ಭೀಣಿಯರನ್ನು ಗುರುತಿಸಲಾಗಿದೆ ಅವರ ಮನೆಗಳಿಗೆ ಭೇಟಿ ನೀಡಿ ಲಸಿಕೆಯನ್ನು ಹಾಕಲಾಗುವುದು ಎಂದು ತಿಳಿಸಿದರು.

ತಾಲೂಕಾಸ್ಪತ್ರೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಭಾವಹಿಸಿದ್ದರು.

ಸುದ್ದಿ ಓದಿ