ಭಾರತೀಯ ಸಂಸ್ಕೃತಿ ಆಚಾರ-ವಿಚಾರಗಳ ಪ್ರತೀಕ : ಕೆ ಚಿದಾನಂದ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ.ಆ.22 : ಭಾರತೀಯ ಸಂಸ್ಕೃತಿಯು ಆಚಾರ ವಿಚಾರಗಳ ಪ್ರತೀಕ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ವಿಜಯನಗರ ಜಿಲ್ಲಾ ನಿರ್ದೇಶಕ ಚಿದಾನಂದ. ಕೆ ತಿಳಿಸಿದರು.
ತಾಲೂಕಿನ ಕಡಲಬಾಳು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾತೃಶ್ರೀ ಜ್ಞಾನವಿಕಾಸ ಕೇಂದ್ರದ ವತಿಯಿಂದ ಆಯೋಜಿಸಲಾದ ಸಂಸ್ಕೃತಿ-ಸಂಸ್ಕಾರ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅಋಢರಢದ ಋಢಣತಢಃಣಡಿದಢರಢದ. ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಛಿೊಥಗಿದೆ ಜಗದ ಉಳಿವಿಗೆ ಹೆಣ್ಣೇ ಕಾರಣ ಎಂದರು.
ದೇಶ-ವಿದೇಶಗಳ ಹೋಲಿಕೆಯಲ್ಲಿ ಭಾರತೀಯ ಸಂಸ್ಕೃತಿಗೆ ಮೊದಲನೇ ಸ್ಥಾಃಢಎದಫ.ಭಾರತೀಯರಾಗಿ ಸಂಸ್ಕೃತಿ ಸಂಪ್ರದಾಯವನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ಸರ್ವತೋಮುಖ ಅಭಿವೃದ್ಧಿಗೆ ಹೆಣ್ಣೇ ಕಾರಣ ಹೆಣ್ಣಿಗೆ ಯಾವುದೇ ವಿಚಾರ ತಿಳಿದ ಕೂಡಲೇ ಅದನ್ನು ಕುಟುಂಬದಲ್ಲಿ ಅಳವಡಿಸಿಕೊಳ್ಳುತ್ತಾರೆ. ಹಾಗಾಗಿ ಮಹಿಳೆಯರ ಸಬಲೀಕರಣಕ್ಕಾಗಿ ಮಾತೃಶ್ರೀ ಹೇಮಾವತಿ ಹೆಗ್ಗಡೆ ಅವರು ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ 300000 ಮಹಿಳೆಯರು ಕೇಂದ್ರದಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದ್ದಾರೆ ಎಂದರು.
ಸಂಪನ್ಮೂಲ ವ್ಯಕ್ತಿ ಶ್ರೀಗುರು ಶಿವ ಶಾಂತವೀರ ಪ್ರೌಢಶಾಲಾ ಶಿಕ್ಷಕ ಜಗನ್ನಾಥ್ ಮಾತನಾಡಿ ಮಕ್ಕಳಿಗೆ ನೈತಿಕ ಕಥೆಗಳನ್ನು ಹೇಳಿ ಮಕ್ಕಳನ್ನು ಪ್ರಜ್ಞಾವಂತರನ್ನಾಗಿ ಮಾಡುವಂತೆ ತಿಳಿಸಿದರು.
ಕಡಲ ಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಮೇಶ್ ಮಾತನಾಡಿ ಯೋಜನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾಹಿತಿದಾರರಾಗಿ ಪ್ರಜ್ಞಾವಂತ ಮಹಿಳೆಯ ರಾಗಿ ಕುಟುಂಬದ ಸರ್ವತೋಮುಖ ಅಭಿವೃದ್ಧಿ ಹೊಂದಿದೆ ಎಂದರು.
ಈ ಸಂಧರ್ಭದಲ್ಲಿ ಸಾವಿತ್ರಿ, ಶಿಕ್ಷಕಿ ಮಂಜುಳಾ, ರಮೇಶ್, ತಾಲೂಕು ಯೋಜನಾಧಿಕಾರಿ ಸಂಜೀವಗೌಡ ಇದ್ದರು.ಜ್ಞಾನವಿಕಾಸ ಸಮನ್ವಯಧಿಕಾರಿ ರೋಷನ್ ಬೀ ಸ್ವಾಗತಿಸಿದರೆ,ಕೇಂದ್ರದ ಸದಸ್ಯೆ ಸುಮಾ ನಿರೂಪಿಸಿದರು, ರತ್ನಮ್ಮ ವಂದಿಸಿದರು.