ಕೇಸಾಪುರ ಸಿದ್ದಾರ್ಥ್ ಪಬ್ಲಿಕ್ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ
ಮುದ್ದೇಬಿಹಾಳ 16: ಸಿದ್ದಾರ್ಥ್ ಪಬ್ಲಿಕ್ ಶಾಲೆ ಕೇಸಾಪುರದಲ್ಲಿ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ ಬೃಹತ್ ರೀತಿಯ ಮೈದಾನದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಎಂದು ಬರೆಯಲಾಗಿತ್ತು.
ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ಸರಸ್ವತಿ ಖಾನಾಪುರ ಶಾಲೆಯ ಕಾರ್ಯದರ್ಶಿ ರಾಮಣ್ಣ ಖಾನಾಪುರ ಮುಖ್ಯ ಅತಿಥಿಗಳಾಗಿ ನಿವೃತ್ತ ಸೈನ್ಯಾಧಿಕಾರಿಗಳಾದ ನಾಲತವಾಡದ ಪಿ ಜಿ ಬಿರಾದರ ಹಾಗೂ ಪರ್ವತಗೌಡ ತಾತರೆಡ್ಡಿ ಆಗಮಿಸಿದ್ದರು. ಶಾಲೆಯ ಪ್ರಾಂಶುಪಾಲ ಮಾರುತಿ ರುದ್ರಾಪುರ ಮತ್ತು ಉಪ ಪ್ರಾಂಶುಪಾಲ ಶ್ರುತಿ ರುದ್ರಾಪುರ ಉಪಸ್ಥಿತರಿದ್ದರು.
ಧ್ವಜಾರೋಹಣ ಕಾರ್ಯಕ್ರಮವನ್ನು ಶಾಲೆಯ ಅಧ್ಯಕ್ಷ ಸರಸ್ವತಿ ಖಾನಾಪುರ ನೆರವೇರಿಸಿದರು. ಪಿ ಜಿ ಬಿರಾದರ ಮಾತನಾಡಿ ದೇಶದ ರಕ್ಷಣೆಯನ್ನು ಮಾಡದಿದ್ದರೆ ಯಾವುದೇ ಜಾತಿ, ಧರ್ಮ, ಜನಾಂಗ ಉಳಿಯುವುದಿಲ್ಲ ಎಂದು ಮಕ್ಕಳಿಗೆ ಹಿತನುಡಿಗಳನ್ನು ಹೇಳಿದರು. ನಂತರ ಶಾಲೆಯ ಕಾರ್ಯದರ್ಶಿ ರಾಮಣ್ಣ ಖಾನಾಪುರರವರು ದೇಶದ ಪ್ರತಿಯೊಂದು ಕುಟುಂಬಗಳು ತಮ್ಮ ಮಕ್ಕಳನ್ನು ಸೈನ್ಯದಲ್ಲಿ ಸೇರಿಸಿ ಭಾರತಾಂಬೆಯ ರಕ್ಷಣೆ ನಮ್ಮ ಗುರಿ ಆಗಿರಬೇಕು ಎಂದು ಹೇಳಿದರು. ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ನಂತರ ಮಕ್ಕಳಿಂದ ದೇಶಭಕ್ತಿ ಗೀತೆಗಳು ಮತ್ತು ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಂತರ ಎಲ್ಲಾ ಮಕ್ಕಳಿಗೂ ಸಿಹಿಯನ್ನು ಹಂಚಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.