ಲೇಖನಗಳು

ಸ್ವತಂತ್ರ: ಸ್ವಾತಂತ್ರ್ಯ ಮತ್ತು ಆಧ್ಯಾತ್ಮಿಕ ಭಾರತೀಯ ರಾಷ್ಟ್ರೀಯವಾದ

ಸ್ವತಂತ್ರ: ಸ್ವಾತಂತ್ರ್ಯ ಮತ್ತು ಆಧ್ಯಾತ್ಮಿಕ ಭಾರತೀಯ ರಾಷ್ಟ್ರೀಯವಾದ

ಈ ಜಗದ ಸುಂದರ ಅಪೂರ್ವ ಆಗಾಧ ಸೃಷ್ಟಿ ಮನುಜ. ಸಕಲ ಜೀವವೈವಿಧ್ಯತೆಯಲ್ಲಿ ವಿಶೇಷವಾದ ಮನುಜ ಹಾಗೂ ಆತನಮೇಧಾಶಕ್ತಿಯ ಅನ್ವೇಷಣೆ ಜೊತೆಗೆ 'ಆಲೋಚನಾ' ಪರತೆ 'ಜ್ಞಾನ'ದ ಬೇರುಗಳ ಬಂಗಾರದ ಭಂಡಾರವನ್ನೇ ಸೃಷ್ಟಿಸಿದೆ.ಆದಾಗ್ಯೂ ಸಂಗ್ರಹಿಸಿದ ಜ್ಞಾನ, ವಿಜ್ಞಾನವಾಗಿಜೀವ ವಿಜ್ಞಾನ, ಭೌತ ವಿಜ್ಞಾನ ಮತ್ತು ಸಮಾಜ ವಿಜ್ಞಾನಗಳೆಂದು ಕವಲೊಡೆದು ವ್ಯವಸ್ಥಿತ ರೆಂಬೆ-ಕೊಂಬೆಗಳಾಗಿ ಕಾಡು ಮನುಜನನ್ನು ನಾಡು ಮನುಷ್ಯನನ್ನಾಗಿ ಮಾಡುತ್ತಲಿರುವುದು ಲಿಪಿ ಎಂಬ ಅರಿವು.

ಒಂಟಿ ಜೀವತ್ವದಿಂದ ಜಂಟಿ ಸಾಂಘಿಕ ಮನುಜನ ಬದುಕು ಸಮಾಜ ನಿಮರ್ಿಸಿ ನಾಗರಿಕತೆಯನ್ನು ನಿಮರ್ಿಸಿತು. ಜಗತ್ತಿನ ಪ್ರಾಚೀನ ನಾಗರಿಕತೆಗಳಾದ ಈಜಿಪ್ತ, ಮೇಸೊಪೋಟೆಮಿಯಾ, ಗ್ರೀಸ್, ರೋಮ್, ಚೀನಾ, ಭಾರತದ ಗಂಗಾನದಿಯ ಬಯಲಿನ ಹರಪ್ಪಾ-ಮೆಹೆಂಜೋದಾರೋ ನಗರವಾಸಿತ್ವ, ನಡೆ-ನುಡಿ ವಿಭಿನ್ನ 'ರಾಜಪ್ರಭುತ್ವಗಳ ಉದಯಕ್ಕೆ ನಾಂದಿಹಾಡಿತು. ಮನುಕುಲದ ಸಮಾಜದಲ್ಲಿ 'ರಾಜ್ಯ ಉಗಮಕ್ಕೆ ಮೂಲಕಾರಣಆತನ 'ಮನ' ಮನದಲ್ಲಿಯಧನಾತ್ಮಕ ಮತ್ತು ಋಣಾತ್ಮಕ ಮನದ ಆಸೆ-ಆಕಾಂಕ್ಷೆಗಳು, ಬೇಡಿಕೆಗಳು.ಅಸಮಾನ ನೈಸಗರ್ಿಕ ಸಂಪನ್ಮೂಲ ಮತ್ತು ಸಂಪತ್ತಿನ ಭೌತಿಕ ಮತ್ತು ಬೌದ್ಧಿಕ ಹಂಚಿಕೆಗಳು, ಬೇಕು-ಬಯಕೆಗಳ ಈಡೇರಿಕೆಗಾಗಿ ನಗರ-ನಾಗರಿಕ ನಡತೆಯು ದ್ವೇಷಾಸೂಯೆ, ಕ್ರೌರ್ಯ ಕೊಲೆ, ಸುಲಿಗೆಗೆ ಕಾರಣವಾಗಿ ಸಮಾಜದ ಸುಖಃ-ಶಾಂತಿ-ನೆಮ್ಮದಿಗೆ ಭಂಗತರತೊಡಗಿತು.ಮನುಜನ ಈ ಧನಾತ್ಮಕ,ಋಣಾತ್ಮಕ ಮನೋಭಾವನೆ ನಿಗ್ರಹಿಸಿ ದುಷ್ಟ ವೃತ್ತಿ-ಪ್ರವೃತ್ತಿಯನ್ನುಶಿಕ್ಷಿಸಿ ಮುಖ್ಯವಾಗಿ ಶಿಷ್ಟ ವೃತ್ತಿ-ಪ್ರವೃತ್ತಿ ರಕ್ಷಿಸಿ, ಪ್ರಪಂಚವನ್ನು ಸಂರಕ್ಷಿಸಲುರಾಜ್ಯವು 'ಕಾನೂನು' ಮತ್ತು 'ಶಿಕ್ಷೆ ಎಂಬ ಅಸ್ತ್ರವನ್ನು ಬಳಸಿತು.

ಇದೇ ದಿಸೆಯಲ್ಲಿ ಎಲ್ಲಾ ನಾಗರಿಕತೆಯ ನಗರ-ರಾಜ್ಯ, ಗಣರಾಜ್ಯಗಳಲ್ಲೂ ರಾಜ ಪ್ರಭುತ್ವದ ಭಿನ್ನ-ವಿಭಿನ್ನ ಪ್ರಯೋಗಗಳು ನಡೆದವು.ಅದರಲ್ಲಿಗ್ರೀಕ್ ನಾಗರಿಕತೆಯಅಥೆನ್ಸ್ ಮತ್ತು ಸ್ಪಾಟರ್ಾದ ನಗರ-ರಾಜ್ಯಗಳ 'ಅರಸೊತ್ತಿಗೆ' ಮತ್ತು 'ಪ್ರಜಾಪ್ರಭುತ್ವ ಮಾದರಿಗಳು ಅತ್ಯುತ್ತಮ ನಿದರ್ಶನಗಳಾಗಿವೆ. ನಂತರರೋಮನ್ನರ ಪ್ರಾತಿನಿಧಿಕ ಪ್ರಜಾಪ್ರಭುತ್ವ ಜನಪ್ರಿಯವಾಯಿತು. ಗಮನಾರ್ಹಅಂಶವೆಂದರೆ, ಭಾರತೀಯ ಸಂಸ್ಕಾರ, ಸಂಸ್ಕೃತಿ ಅನುಲಕ್ಷಿಸಿದರೆ, ವೇದೋಪನಿಷತ್ ಮತ್ತು ಮಹಾಕಾವ್ಯಗಳ ಪೂರ್ವ ಕಾಲದಿಂದಲೂ ರಾಜ್ಯ, ಪ್ರಜಾಪ್ರಭುತ್ವ ರೂಢಿಯಲ್ಲಿತ್ತು. ಆದರೆ, ಇಲ್ಲಿರಾಜ, ಅಧಿಕಾರ ಮತ್ತು ಪ್ರಜಾಜೀವನಕ್ಕೆ ಧರ್ಮದ ಬಂಧನವಿತ್ತು. ಪ್ರಾಚೀನ ಭಾರತದಛಪ್ಪನ್ (56) ದೇಶಗಳು ಬುಡಕಟ್ಟು ಜನಾಂಗಗಳ ರಾಜ್ಯ, ಒಕ್ಕೂಟ ರಾಜ್ಯಗಳು, ಪಟ್ಟಣದ ರಾಜ್ಯಗಳು ಹಾಗೂ ರಾಜ್ಯಪ್ರಭುತ್ವ ಹೀಗೆ ವಿವಿಧ ಪ್ರಕಾರದ ರಾಜ್ಯಗಳನ್ನು ಹೊಂದಿತ್ತು. ಪ್ರಸ್ತುತ ಅವರ್ಾಚಿನ ಭುವಿಯಎಲ್ಲ ಭೂಭಾಗವು ಒಂದಿಲ್ಲೊಂದು ರಾಜ್ಯಾಡಳಿತಕ್ಕೆ ಒಳಪಟ್ಟಿದ್ದರಿಂದಲೇ ಸಮಾಜವೂ ಕಿಂಚಿತ್ತಾದರೂ, ಸುಭಿಕ್ಷೆ ಹೊಂದುತ್ತಿದೆ. ಈ ಹಿನ್ನಲೆ-ಮುನ್ನೆಲೆಯಲ್ಲಿ ವಿಶ್ವದ ಭೂಗ್ರಹದಲ್ಲಿ ಭರತ ಖಂಡವೆಂದು ಗುರುತಿಸಿಕೊಂಡ ಭಾರತವು ಸ್ವತಂತ್ರ ಮತ್ತು ಸ್ವಾತಂತ್ರ್ಯ ಪರಿಕಲ್ಪನೆಗೆ ವಿಶಿಷ್ಟ ಅರ್ಥ ಕಲ್ಪಿಸಿದೆ. ಅದುವೇ, ಮನುಷ್ಯಧರ್ಮ, ಆಧ್ಯಾತ್ಮಿಕತೆ ಆಧರಿಸಿದ ಸಮಾಜ ಮತ್ತುಅಖಂಡ ಭಾರತದರಾಷ್ಟ್ರೀಯವಾದ.

ಪರಿವರ್ತನೆ ಜಗದ ನಿಯಮವಾದರೆ, ಪರಿವರ್ತನೆಯಲ್ಲಿ ಪ್ರಬಲ ಪ್ರಭಾವ ಹೊಂದಿದ್ದು ಮನುಜನ ಮನ. ಪ್ರತಿನಿತ್ಯ ಪ್ರತಿಜೀವಿ ತನ್ನ ಮತ್ತುತನ್ನವರ ಬಾಳಬದುಕಿಗಾಗಿ ಸಂಘರ್ಷ ಸಹಕಾರ ಮಾಡುತ್ತವೆ. ಪ್ರತಿಜೀವನದಲ್ಲೂ ನಡೆವಹುಡುಗಾಟ-ಹೋರಾಟ-ಕಾದಾಟ ಸಹಜ, ಅವಶ್ಯಕ ಮತ್ತು ಅನಿವಾರ್ಯ. ಗಮನಾರ್ಹ ಅಂಶವೆಂದರೆ ಇಲ್ಲಿ ಮನುಜನ ಮನೋಬಲದ ನಡೆ-ನುಡಿಯ ನಿರ್ಣಯಗಳು ಪೂರ್ಣ ಪ್ರಕೃತಿಯ ಸ್ಥಿತಿ-ಗತಿಯನ್ನು ಸರ್ವಕಾಲಕ್ಕೂ ಪ್ರಭಾವಿಸಿ ಕಾರಣ-ಪರಿಣಾಮನ್ನುಂಟು ಮಾಡುತ್ತದೆ. ಆದ್ದರಿಂದ ಮನುಜನ ಮನದ ವಿಚಾರ ಲಹರಿಯೂ ರಾಜ್ಯದ ಆಡಳಿತ ಯಂತ್ರವಾದ ಸಕರ್ಾರದ ಪ್ರಥಮಾಂಗವಾದ ಶಾಸಕಾಂಗದಲ್ಲಿ ಶಾಸನ ರಚನಾ ಪ್ರಕ್ರಿಯೆಯಲ್ಲಿ 'ಕಾನೂನಾ'ಗಿ ಅಂಗೀಕಾರ ಪಡೆದಲ್ಲಿ ಅದರ ನಿಯಂತ್ರಣ ಸಮಾಜ ಎಲ್ಲರೂ-ಎಲ್ಲವೂ ಒಳಪಡುವುದು.  ಈ ಕಾನೂನುಗಳ ಸಂಕಲನವೇ  ಸಂವಿಧಾನ. ಸಂವಿಧಾನದ ರಾಜ್ಯದ ಮೂಲಭೂತ ಶಾಸನ. ಈ ಸಂವಿಧಾನ ಮತ್ತು ಕಾನೂನುಗಳ ರಚನೆ-ತಿದ್ದು-ರದ್ದು ಕಾರ್ಯಕಲಾಪಗಳು ನಡೆಯುವ ಪ್ರಾಂಗಣವೇ ಶಾಸಕಾಂಗ. ಫ್ರೆಂಚ್ಪದಕ ಚಿಡಿಟಠಡಿ, ಅಥರ್ಾತ್ ಸಭಾಂಗಣದಲ್ಲಿ ಚಚರ್ಿಸು, ಸಮಾಲೋಚಿಸು, ನಿರ್ಣಯಿಸು ಎಂದು. ಇದರ ಕನ್ನಡಿಕರಣವೇ ಸಂಸತ್ತು.

'ಸಂಘಟನೆ' ಮತ್ತು 'ಹೋರಾಟ' ಪ್ರಭುತ್ವದ ಬಿಂಬ ಮತ್ತು ಪ್ರತಿಬಿಂಬ. ಭಾರತ ಸರ್ವಕಾಲಕ್ಕೂ ಪರಿಕೀಯರ ದಾಳಿಗೆ 'ತುತ್ತಾದ' ದೇಶ. ಅದರಲ್ಲೂ ಆರ್ಯರ ಆಗಮನ, ಮುಸ್ಲಿಂಮರ ಆಕ್ರಮಣ ಮತ್ತುಯುರೋಪಿಯನ್ನರ 'ತಂತ್ರ-'ಕುತಂತ್ರಗಳ ಸಂಕ್ರಮಣವುದ್ರಾವಿಡ-ಆರ್ಯರ ಜೀವನಶೈಲಿಯನ್ನು ಗಾಢವಾಗಿ ಪ್ರಭಾವಿಸಿ ಹಿಂದೂ, ಬೌದ್ಧ, ಜೈನ, ಲಿಂಗಾಯತ, ಸಿಖ್, ಮೊದಲಾದಧರ್ಮ, ಮತ, ಪಂಥ, ಸಂಪ್ರದಾಯ, ಪರಂಪರೆ ಜೀವನಾ ವಿಧಾನದ ಶೈಲಿ, ಕ್ರಮ ಹಾಗೂ ವೇಳಾಪಟ್ಟಿಯನ್ನು ಅಸ್ಥಿರಪಡಿಸತೊಡಗಿದವು. ಈ ಸಂದರ್ಭದಲ್ಲಿಯ ಮಾನವನ ಮೆದುಳಿನ ಬೌದ್ಧಿಕ ಬುದ್ಧಿಬಲವು ವೃದ್ಧಿಸುತ್ತ ವಿಜ್ಞಾನ-ತಂತ್ರಜ್ಞಾನದ ಅವಿಷ್ಕಾರಗಳು, ವಿವಿಧ  ವಿಷಯಗಳು ಭೌತಿಕಜೀವನವನ್ನು ನಿಯಂತ್ರಿಸುತ್ತಿವೆ. ಆದರೆ ಈ ಮಂತ್ರ, ತಂತ್ರ ಹಾಗೂ ಯಂತ್ರೋಪಕರಣದ ಸಾಧನಗಳು ಮನುಷ್ಯತ್ವದ ಸಾಧನೆಗೆ ಸವಾಲಾಗುತ್ತಿರುವುದು ವಿಪಯರ್ಾಸದ ಸಂಗತಿ.  

ಭಾರತೀಯರ ಮೂಲಸ್ವಭಾವವಾದ 'ಸಾಮರಸ್ಯತೆ' 'ಭಾವೈಕ್ಯತೆ' ಹಾಗೂ 'ಸಹಿಷ್ಣುತೆಯ' ಸರಳ ಸಹಜ ಸಹಜೀವನ ದುರ್ಗಮವಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ಈ ನೇತ್ಯಾತ್ಮಕತೆಯನ್ನು ಧನಾತ್ಮಕವಾಗಿ ಪರಿವತರ್ಿಸಿ, ಸುಂದರ ಸಮಾಜದ ನಿಮರ್ಾಣ ಮಾಡುವಲ್ಲಿ ಪ್ರಭುತ್ವದ 'ಸಂಸತ್ತು'  ಪ್ರಜಾಧಿಕಾರದದೇಗುಲವಾಗಿದೆ. ಸ್ವಾತಂತ್ರ್ಯ ಬಹುಮುಖ್ಯ ಲ್ಯಾಟಿನ್ ಭಾಷೆಯಪದವಾದ ಲೀಬರ್ ಮುಕ್ತ, ಅನಿಬರ್ಿಂಧಿತ, ಅಡೆತಡೆರಹಿತ ಎಂಬ ಅರ್ಥಕೊಡುತ್ತದೆ. ಆದರೆ ಸ್ವೆಚ್ಛೆಯನ್ನು ಮಾನ್ಯ ಮಾಡುವುದಿಲ್ಲ. ಲಿಬರ್ಟಿ, ಫ್ರೀಡಂ ಮತ್ತು ಇಚಿಡಿಪೆಂಡೆನ್ಸ ಅನ್ನು ಕ್ರಮವಾಗಿ ವೈಯಕ್ತಿಕ, ಸಾಮಾಜಿಕ ಮತ್ತು ರಾಜಕೀಯ ಆಶೋತ್ತರಗಳಿಗೆ ಪೂರಕವಾಗಿ ಸುಧಾರಣೆಯ ನಿಟ್ಟಿನಲ್ಲಿ ಪರ್ಯಾಯಅರ್ಥ ನೀಡಲಾಗುತ್ತದೆ.

ಜಂಭುದ್ವೀಪವೂ ಭರತಖಂಡವೆಂದು ಗುತರ್ಿಸಲ್ಪಟ್ಟು ಹಿಂದೂಸ್ಥಾನವೆಂದು ಕರೆಯಲ್ಪಟ್ಟು ಇಂಡಿಯಾ ಆದ ಚರಿತ್ರೆ ರೋಚಕವಾಗಿದೆ. ಭಾರತದಲ್ಲಿಯ ಆಂಗ್ಲರ ಆಗಮನವು ಅಲ್ಪಸಂಖ್ಯಾತ ಅಲ್ಪಮತಿಯರ ದಾಸ್ಯಕ್ಕೆ ಕಾರಣವಾದರೆ, ಬಹುಸಂಖ್ಯಾತರ ಮುಕ್ತಿಗೆ ರಹದಾರಿಯಾದದ್ದೂ ವಿಶೇಷ. ಬ್ರಿಟಿಷ್ರಿಂದ ಸ್ವಾತಂತ್ರ್ಯ ಪಡೆಯುವುದರ ಜೊತೆ-ಜೊತೆಗೆ ಸಶಕ್ತ ರಾಷ್ಟ್ರ ನಿಮರ್ಿಸಲು ಮಂದಗಾಮಿ, ತೀವ್ರಗಾಮಿ ಮತ್ತು ಕ್ರಾಂತಿಕಾರ ವಿಧದ ಸ್ವಾತಂತ್ರ್ಯ ಹೋರಾಟಗಾರರು, ದೇಶಭಕ್ತರು ಪ್ರಜಾಪ್ರಭುತ್ವದಡಿ ಸಂಸದೀಯ ಸಕರ್ಾರ ಪದ್ಧತಿಯೊಂದಿಗೆ ಅರೆಸಂಯುಕ್ತ ಪದ್ಧತಿ ಅಳವಡಿಸಿ ಬಹುಪಕ್ಷೀಯ ಸಂವಿಧಾನ ರಚಿಸಿದ್ದರಿಂದ ಸ್ವತಂತ್ರ್ಯ ಭಾರತ ರಾಜ್ಯಗಳ ಒಕ್ಕೂಟವಾಗಿ ಬಲಿಷ್ಠ ರಾಷ್ಟ್ರವಾಗಿ ಇಂದು ಸುಪರ್ಪವರ್ ನೇಷನ್ ಆಗಿ ಹೊರಹೊಮ್ಮುತ್ತಲಿದೆ. ಇದಕ್ಕೆ ಕಾರಣವೇ ವೈವಿಧ್ಯಮಯ ಸ್ವರೂಪದ ರಾಜಕೀಯ, ರಾಜಕಾರಣ, ರಾಜನೀತಿ, ರಾಜತಂತ್ರ ಮತ್ತುರಾಜಧರ್ಮವಾಗಿದೆ.

ಭಾರತದ ಪ್ರಭುತ್ವದ ಮಾಲಿಕೆಯಲ್ಲಿಯಯದು, ಪುರು, ಅನು ಕುರು-ಪಾಂಚಾಲ, ಕ್ಷುದ್ರಕರು ಮಾಳವರು, ನಂದರು, ಶಿಸುನಾಗವಂಶಸ್ಥರು ಮೌರ್ಯರ, ಗುಪ್ತರು, ಶಾತವಾಹನರುಕದಂಬರು, ಶುಕರು, ಕಣಮರು, ಗಂಗರು, ಪಲ್ಲವರು, ರಾಷ್ಟ್ರಕೂಟರು, ಚಾಲುಕ್ಯರು, ಚೋಳರು, ಚೇರರು ಮತ್ತು ಪಾಂಡ್ಯರು ಭಾರತೀಯರ ಸಮಾಜ-ರಾಜ್ಯ ಪರಿಕಲ್ಪನೆ ಗಟ್ಟಿಗೊಳಿಸಿದರು.

ಭಾರತ ಈ ಹೆಸರೇ ಸಚೇತನಶಕ್ತಿ. ಭಾರತಉತ್ತರ ಮತ್ತುದಕ್ಷಿಣ ಭಾರತಹೊಂದಿರುವ ವಿಭಿನ್ನ ಭೌಗೋಳಿಕ ಸ್ವರೂಪದಂತೆ ರಾಜ್ಯಾಳ್ವಿಕೆಯೂ ಹಾಗೂ ಪ್ರಜಾ ಸಹ ಜೀವನವೂ ಭಿನ್ನತೆ,  ವೈವಿದ್ಯತೆಯೊಂದಿಗೆ ವರ್ಣರಂಜಿತವಾಗಿದೆ. ಭಾರತದಲ್ಲಿ ಹಿಂದು, ಬೌದ್ಧ, ಜೈನ್, ಲಿಂಗಾಯತ, ವೀರಶೈವ ಹಾಗೂ ಸಿಖ್-ಸ್ವಧರ್ಮಗಳೊಂದಿಗೆ, ಅನ್ಯಯಹೂದಿ, ಪಾಸರ್ಿ, ಇಸ್ಲಾಂ, ಕ್ರಿಶ್ಚಿಯನ್ ಮೊದಲಾದ ಪರಧರ್ಮಗಳು ಹಾಗೂ ಬೇರೆ-ಬೇರೆ ಮತ-ಪಂಥಗಳು ಆಡಳಿತ ವ್ಯವಸ್ಥೆಯನ್ನು ಪ್ರಭಾವಿಸುತ್ತಿವೆ.

ಫ್ರೆಂಚ್ ಭಾಷೆಯ ಪದವಾದ ನೇಷಿಯೋಒಂದೇರಕ್ತ, ವಂಶ, ಬುಡಕಟ್ಟು ಮತ್ತುಜನಾಂಗವನ್ನು ಸೂಚಿಸಿದರೆ, 19ನೇ ಶತಮಾನದ ರಾಷ್ಟ್ರವಾದ ಅರ್ಥವ್ಯಾಪ್ತಿ ಪರಿಧಿಯನ್ನು ವಿಸ್ತರಿಸಿ ಸಂಸ್ಕೃತಿ, ಇತಿಹಾಸ, ಪರಂಪರೆ, ಮೊದಲಾದ ಅಂಶಗಳನ್ನು ಪರಿಗಣಿಸಿತು. ಈ ದಿಸೆಯಲ್ಲಿ ಸರ್ವದರಲ್ಲೂ ವೈವಿಧ್ಯತೆಯನ್ನು ಹೊಂದಿದ್ದರೂ ವಿವಿಧತೆಯಲ್ಲಿ ಏಕತೆ ಕಾಣುವ ಭಾರತ ಭಾವೈಕ್ಯತೆಯಲ್ಲಿ ರಾಷ್ಟ್ರಧರ್ಮವಾಗಿ ರೂಪುಗೊಂಡಿದೆ.  ಈ ಹಿನ್ನಲೆಯಲ್ಲಿ ರಾಷ್ಟ್ರ, ರಾಜ ಮತ್ತು ಪ್ರಜಾಧರ್ಮದ ಜೀವಾಳವೇ ಆಧ್ಯಾತ್ಮಿಕತೆ.

ಅಖಂಡ ಭಾರತದ ವೈವಿಧ್ಯಮಯ ಪರಿಕಲ್ಪನೆ :

ಭಾರತದ ಪ್ರಥಮ ಉಪಪ್ರಧಾನಿ ಮತ್ತು ಗೃಹಮಂತ್ರಿ ಸದರ್ಾರ್ ವಲ್ಲಭಾಯಿ ಪಟೇಲ್ ಏಕೀಕರಣದ ರುವಾರಿಯಾಗಿ ಉಕ್ಕಿನ ಮನುಷ್ಯ ಎಂದು ಬಿರುದಾಂಕಿತರಾದರು. ಸಮಸ್ತ  ಭಾರತೀಯರಲ್ಲಿ  ಅಖಂಡ ಭಾರತವೆಂದರೆ ಒಂದೇ ರೀತಿಯ ಅಭಿಪ್ರಾಯವಿಲ್ಲ. ಅಂದರೆ ಪಾಕ್ ಮತ್ತುಕಾಕ್ ಒಳಗೊಂಡ ಭಾರತ ಪೂರ್ವ-ಪಶ್ಚಿಮ ಪಾಕಿಸ್ತಾನ ಮತ್ತು ಭಾರತ, ನೆರೆ ಹೊರೆದೇಶದೊಂದಿಗೆ ಭಾರತ ಮತ್ತು ಅಫ್ಘಾನಿಸ್ತಾನ್ ದಿಂದ ಇಂಡೋನೆಶಿಯಾವರೆಗಿನ ಭೂಪ್ರದೇಶವನ್ನು ಅಖಂಡ ಭಾರತವೆಂದು ಸಾರಲಾಗುತ್ತಿದೆ.ಈ ವಿಚಾರಧಾರೆಯಂತೆ ಬಲ ಪ್ರಯೋಗದಿಂದ ಭೌಗೋಳಿಕ ಭಾರತವನ್ನು ಒಗ್ಗೂಡಿಸಬಹುದು. ಆದರೆ ಮಾನವತೆ ಮತ್ತು ನೈತಿಕತೆಯನ್ನು ಮೀರಿ ಧರ್ಮಗಳನ್ನು ಧಮನಿಸಿ ಭಾವನೆಗಳನ್ನು ಐಕ್ಯಗೊಳಿಸುವುದು ಸುಲಭವಾದುದಲ್ಲ. ಭಾರತವು ಸರ್ವಜನಾಂಗದ ಶಾಂತಿಯತಾಣ. ಸಮತೆ, ಮಮತೆಯೇ ಇಲ್ಲಿನ ನೆಲ, ಜಲ ಕುಲದ ಪ್ರಮಾಣ. ಆದ್ದರಿಂದ ಧರ್ಮ ನಿರಪೇಕ್ಷತೆ ಅಥವಾ ಅಲೌಖಿಕತೆ ಎಂಬ ಸಂವಿಧಾನದ ಪೀಠಿಕಾಂಶವನ್ನು ಧಿಕ್ಕರಿಸುವಂತಿಲ್ಲ.

ಪಾಶ್ಚಾತ್ಯರ ದೇಶಗಳೊಡೊನೆ ಬೆಳೆದ ಸಂಬಂಧ:

ಯುರೋಪಿಯನ್ನರ ಆಗಮನದ ನಂತರ ಕ್ರಿ.ಶ. 1600ರ ಡಿಸೆಂಬರ್ 31ರಂದು ಪೌವರ್ಾತ್ಯ ದೇಶಗಳೋಡನೆ ವ್ಯಾಪಾರ-ವಾಣಿಜ್ಯ ಸಂಪರ್ಕ ಹೊಂದಲು ಆಸಕ್ತರಾಗುತ್ತದೆ. ಆಂಗ್ಲ ವ್ಯಾಪಾರಿಗಳು ಇಂಗ್ಲೆಂಡ್ ಸಾಮ್ರಾಜ್ಯರಾಣಿ ಎಲಿಜಬೆತ್ಳಿಂದ ಈಸ್ಟ್ಇಂಡಿಯಾ ಕಂಪನಿ 15 ವರ್ಷಗಳ ಕಾಲ ಪ್ರಾಚ್ಯ ವಾಣಿಜ್ಯದಲ್ಲಿ ಸ್ವಾಮ್ಯ ಪಡೆಯುವ ಸನ್ನದನ್ನು ಪಡೆದುಕ್ರಿ.ಶ. 1612ರಲ್ಲಿ ಮೊಗಲ್ ಚಕ್ರವತರ್ಿ ಜಹಾಂಗೀರ್ರ ಅನುಮತಿಯೊಂದಿಗೆ ಸೂರತ್ನಲ್ಲಿ ಪ್ರಪ್ರಥಮವಾಗಿ "ಖಾಯಂಕೊಂಡಿಯನ್ನು ಬ್ರಿಟಿಷ್ಈಸ್ಟ್ಇಂಡಿಯೂ ಕಂಪನಿಂ ಸ್ಥಾಪಿಸಿತು. 

ತರುವಾಯ ಆಂಗ್ಲರ ರಾಜತಂತ್ರವು ಪ್ಲಾಸಿ ಕದನದೊಂದಿಗೆ ಬಂಗಾಳದಲ್ಲಿ ದ್ವಿಸಕರ್ಾರದೊಂದಿಗೆ ರಾಬಟರ್್ಕ್ಲೈವ್ರಿಂದಾಗಿ ರಾಜಕೀಯ ಸಾರ್ವಭೌಮತ್ವ ಲಭಿಸಿ ವ್ಯಾಪಾರ ಕಂಪನಿಯೂ ಆಡಳಿತವನ್ನು ಕ್ರೌನ್ಗೆ ವಗರ್ಾಯಿಸಿ ಕ್ರಮೇಣ 1773-ರೆಗ್ಯೂಲೇಟಿಂಗ್ ಕಾಯ್ದೆ 1784-ಪಿಟ್ಇಂಡಿಯಾ ಶಾಸನ 1786ರ ಶಾಸನ ಹಾಗೂ 1793, 1813, 1833, 1853ರ ಚಾರ್ಟರ್ ಕಾಯ್ದೆಯನ್ನು ಜಾರಿಗೆ ತಂದಿತು. 1816ರ ಇಂಡಿಯನ್ ಕೌನ್ಸಿಲ್ ಆ್ಯಕ್ಟ್ಕೇಂದ್ರ ಮತ್ತು ಪ್ರಾಂತ್ಯಗಳಲ್ಲಿ ಶಾಸಕಾಂಗ ರಚನೆಗೆ ಅವಕಾಶ ನೀಡಿತು. ನಂತರದ 1909, 1919 ಹಾಗೂ 1935ರ ಭಾರತ ಸಕರ್ಾರ ಕಾಯ್ದೆಗಳು ಶಾಸಕಾಂಗದಲ್ಲಿ ಅನೇಕ ಸುಧಾರಣೆಗಳನ್ನು ತಂದು ದ್ವಿಸದನ ಶಾಸಕಾಂಗವನ್ನು ಅಸ್ತಿತ್ವಕ್ಕೆ ತಂದವು.ಅಂತೆಯೇ ವ್ಯವಸ್ಥಿತವಾಗಿ ಸಂಸದೀಯ ಪದ್ಧತಿಯ ಶಾಸಕಾಂಗ ಕಾರ್ಯಾರಂಭ ಮಾಡಿತು.

ಭಾರತೀಯ ಆಧ್ಯಾತ್ಮಿಕ ರಾಷ್ಟ್ರವಾದದ ರೂವಾರಿಗಳು:

ಮನುಜನ ಮನೋಧರ್ಮವನ್ನು ನಿಯಂತ್ರಿಸಿ ನಿದರ್ೇಶಿಸುವ ಧರ್ಮದ ತತ್ವದಾಳ್ವಿಕೆಯು ಜೀವ ಸಂಕುಲವನ್ನಾಳುತ್ತವೆ. ಏಷ್ಯಾದ ಬೆಳಕಾದ ಸಿದ್ದಾರ್ಥ ಬುದ್ಧನಾಗಿ ಭೋಗ ಜೀವನವನ್ನು ತ್ಯಜಿಸಿದ.ಸಪ್ತಶೀಲಗಳ ಪ್ರತಿಪಾದನೆ ಮಾಡಿ ಅನುಭವ ಮಂಟಪದ ಮುಖೇನ ತ್ಯಾಗಜೀವನವನ್ನು ತೋರಿಸಿ ಬಸವ ಜಗತ್ತಿಗೆ ಜ್ಯೋತಿಯಾದ. ನರೇಂದ್ರತನ್ನಗುರಿ ಮುಟ್ಟಿ ವಿರಮಿಸದೆ ವಿಶ್ರಮಿಸದೆ ವೇದಾಂತವನ್ನು ಪ್ರತಿಪಾದಿಸಿ ವಿವೇಕಾನಂದನಾದ. ತನ್ನ ಬದುಕಿನಲ್ಲಿ ಸತ್ಯಾನ್ವೇಷಿಸುತ್ತಾ ಮೋಹನ ಸತ್ಯಅಹಿಂಸೆಯಿಂದ ನಡೆದು ಮಹಾತ್ಮನಾದ.  ಶಿಕ್ಷಣ, ಸಂಘಟನೆ ಮತ್ತು ಹೋರಾಟದೊಂದಿಗೆ ಬಾಬಾಸಾಹೇಬ ದಮನಿತ ಶೊಷಿತರ ಬಾಳನ್ನು ಬೆಳಗಿ ಸಂವಿಧಾನ ಶಿಲ್ಪಿಯಾದ.

ಇಂತಹ ಸಚೇತನ ಶಕ್ತಿಗಳು ತಮ್ಮ ಆಧ್ಯಾತ್ಮಿಕ ದಿವ್ಯಶಕ್ತಿಯಿಂದ ಭಾರತೀಯರ ರಾಷ್ಟ್ರೀಯತೆಯನ್ನು ಉದ್ದೀಪನಗೊಳಿಸಿ ಭಾರತಾಂಬೆಯ ಕೀತರ್ಿಯನ್ನು ಅಡಿಯಿಂದ ಮುಡಿವರೆಗು ನೂರ್ಮಡಿಗೊಳಿಸಿದರು. ಹೀಗೆ ಕಾಡಿನಿಂದ ನಾಡಕಟ್ಟಿದ ಮನುಷ್ಯ ಪೊಲೀಸ್, ಕನಿಷ್ಠ ಮತ್ತು ಕಲ್ಯಾಣರಾಜ್ಯ ಪರಿಕಲ್ಪನೆಯಿಂದ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆತರಲು ಯತ್ನಿಸುತ್ತಿದ್ದಾನೆ. ಪ್ರಸ್ತುತ ಭಾರತ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೊತ್ಸವದ ತುತರ್ು ಅಗತ್ಯವೆಂದರೆ ಸಮಾಜರಾಜ್ಯ ಪರಿಕಲ್ಪನೆಯನ್ನು ಸಾಕಾರಗೊಳಿಸುವುದಾಗಿದೆ.  ಈ ನಿಟ್ಟಿನಲ್ಲಿ ದೇಶಭಕ್ತಿಯಿಂದ ತಮ್ಮ ಪ್ರಾಣ ಮಾನ ಅರ್ಪಣೆಗೈದ ಮಹನೀಯರನ್ನು ಸ್ಮರಿಸುತ್ತಾ ಆಧ್ಯಾತ್ಮಿಕ ಭಾರತೀಯ ರಾಷ್ಟ್ರವಾದವನ್ನು ಧರ್ಮ ಸಹಿಷ್ಣುತೆಯೊಂದಿಗೆ ಸಾಧಿಸಬೇಕಾಗಿದೆ.

 - ಸಾವಿತ್ರಿದೇವಿ ಗದಿಗೆಪ್ಪಗೌಡರಶಿಂಧೆ  

ಬೆಳಗಾವಿ

ಮೊ.735354511 

ಸುದ್ದಿ ಓದಿ