7ನೇ ವೇತನ, ಒಪಿಎಸ್ ಜಾರಿಗಾಗಿ ಅನಿರ್ದಿಷ್ಟಾವಧಿ ಮುಷ್ಕರ ; ಪೂರ್ವ ಭಾವಿ ಸಭೆ
ಹಗರಿಬೊಮ್ಮನಹಳ್ಳಿ.ಫೆ.25 : ರಾಜ್ಯ ಸರಕಾರಿ ನೌಕರರ ಬೇಡಿಕಗಳಾದ ವೇತನ ಪರಿಷ್ಕರಣೆಗೆ ಸಂಭಂಧಿಸಿದ ಮಧ್ಯಂತರ ವರದಿಯನ್ನು 7ನೇ ವೇತನ ಆಯೋಗದಿಂದ ಶೀಘ್ರವಾಗಿ ಪಡೆದು 2022ರ ಜುಲೈ 01 ರಿಂದ ಜಾರಿಗೆ ಬರುವಂತೆ ಶೇ.40ರಷ್ಟು ವೇತನ ಹೆಚ್ಚಳ ಸೌಲಭ್ಯ ಹಾಗೂ ಪಂಜಾಬ್, ರಾಜಸ್ಥಾನ, ಛತ್ತಿಸ್ಗಡ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳ ಮಾದರಿಯಲ್ಲಿ ಎನ್ಪಿಎಸ್ ರದ್ದು ಪಡಿಸಿ ಒಪಿಎಸ್ ಯೋಜನೆ ಜಾರಿಗಳಿಸುವಂತೆ ಮಾರ್ಚ್ 01 ರಿಂದ ಕರ್ತವ್ಯಕ್ಕೆ ಗೈರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಜ್ಜಾಗಿದ್ದು ಗುರುಭವನದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಈ ವೇಳೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ಹಾಗೂ ಎಲ್ಲಾ ಇಲಖೆಗಳ ವೃಂದ ಸಂಘಗಳು ಪರಸ್ಪರ ಪೂರ್ವ ಭಾವಿ ಸಭೆಯಲ್ಲಿ ಚರ್ಚಿಸಿ ಮುಷ್ಕರದಲ್ಲಿ ಬಾಗವಹಿಸುವ ಇಲಾಖೆಯ ಸಿಬ್ಬಂದಿಗಳು ಆಯಾ ಇಲಾಖೆಗಳ ಮೇಲಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಮನವಿಯನ್ನು ನೀಡುವುದರ ಮೂಲಕ ಹಾಜರಾಗುವಂತೆ ತಿಳಿಸಲಾಯಿತು.
ನೌಕರರ ಸಂಘದ ತಾಲೂಕಾಧ್ಯಕ್ಷ ಎಂ.ಪಿಎಂ. ಮಂಜುನಾಥ್ ಮಾತನಾಡಿ 7ನೇ ವೇತನ ಹಾಗೂ ಒಪಿಎಸ್ ನಮ್ಮ ಹಕ್ಕಾಗಿದೇ ಹೊರತು ಯಾರದ್ದೂ ಒಬ್ಬರ ಕೆಲಸಕ್ಕಾಗಿ ಈ ಮುಷ್ಕರ ಮಾಡುತ್ತಿಲ್ಲ ಮುಂದಿನ ಉತ್ತಮ ಭವಿಷ್ಯಕ್ಕೆ ರಾಜ್ಯಾಧ್ಯಕ್ಷ ಷಡಕ್ಷರಿ ಸೇರಿದಂತೆ ರಾಜ್ಯ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಶಾಂತಿಯುತವಾಗಿ ಮುಷ್ಕರ ಮಾಡುವಂತೆ ಕರೆ ನೀಡಿದರು. ಸರಕಾರದ ಎಸ್ಮಾ ಅಸ್ತ್ರ ನಮ್ಮ ಯಾವುದೇ ಕಾರಣಕ್ಕೂ ಪ್ರಯೋಗವಾಗುವುದಿಲ್ಲ ಇದರ ಬಗ್ಗೆ ಭಯ ಬಿಡುವಂತೆ ಧೈರ್ಯ ತುಂಬಿ ಎಲ್ಲರೂ ಒಗ್ಗಟ್ಟಿನಿಂದ ಮುಷ್ಕರಕ್ಕೆ ಕೈಜೋಡಿಸುವಂತೆ ಮನವಿ ಮಾಡಿಕೊಂಡರು.
ಎನ್ಪಿಎಸ್ ನೌಕರರ ಸಂಘದ ತಾಲೂಕಾಧ್ಯಕ್ಷ ಆಂಜನೇಯ ಮಾತನಾಡಿ ಸರಕಾರ ರಾಜ್ಯ ಸರ್ಕಾರಿ ನೌಕರರಿಗೆ ಹುಸಿ ಭರವಸೆಗಳನ್ನು ನೀಡುತ್ತಾ ಅನ್ಯಾಯ ವೆಸಗುತ್ತಿದೆ, ಸರಕಾರಿ ನೌಕರರ ಕರ್ತವ್ಯೆಕ್ಕೆ ಗೈರಾಗುವುದರ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಿದೆ ಈ ಬಾರಿಯ ಬಜೆಟ್ನಲ್ಲಿ ನೌಕರರನ್ನು ಕಡೆಗಣಿಸಿ ವಿವಿಧ ರಾಜ್ಯಗಳಂತೆ ಒಪಿಎಸ್ ಜಾರಿಗೊಳಿಸಬೇಕು 7ನೇ ವೇತನದಲ್ಲಿ 40ಅ ವೇತನ ಹೆಚ್ಚಳ ಮಾಡಬೇಕು ಮುಷ್ಕರಕ್ಕೆ ಬರುವವರ ಮೇಲೆ ಎಸ್ಮಾ ಜಾರಿಗೊಳಿಸಲು ಒಬ್ಬೊಬ್ಬರಿಲ್ಲ ಸುಮಾರು 6ಲಕ್ಷ ನೌಕಕರರಿದ್ದೆವೆ ನಮ್ಮ ಬಲ ಎನು ಎಂಬುದನ್ನು ತೋರಿಸುವುದರ ಜೊತೆ ನಮ್ಮ ಹಕ್ಕುಗಳನ್ನು ಪಡೆಯಬೇಕಿದೆ ಹಾಗಾಗಿ ಎಲ್ಲರ ಸಹಕಾರ ಅಗತ್ಯ ಎಂದರು.
ವಿವಿಧ ವೃಂದ ಸಂಘಗಳ ತಾಲೂಕಾಧ್ಯಕ್ಷರುಗಳಾದ ಹೆಚ್.ಲೋಕಪ್ಪ, ರವಿಚಂದ್ರನಾಯ್ಕ್, ತಿಪ್ಪೇಸ್ವಾಮಿ, ಶ್ರೀನಿವಾಸ ರೆಡ್ಡಿ ಮಾತನಾಡಿದರು.ಈ ಸಂಧರ್ಭದಲ್ಲಿ ನೌಕರರ ಸಂಘದ ವಿವಿಧ ಇಲಾಖೆಗಳ ಪದಾಧಿಕಾರಿಗಳು ಇದ್ದರು.