ಶಿಗ್ಗಾವ್

ಹೆಚ್ಚುವ ಜನಸಂಖೈಯಿಂದ ದೇಶದ ಪ್ರಗತಿಗೆ ಮಾರಕ: ರೂಪಾ ಬನ್ನಿಕೊಪ್ಪ

ಹೆಚ್ಚುವ ಜನಸಂಖೈಯಿಂದ ದೇಶದ ಪ್ರಗತಿಗೆ ಮಾರಕ: ರೂಪಾ ಬನ್ನಿಕೊಪ್ಪ

ಲೋಕದರ್ಶನ ವರದಿ 

ಶಿಗ್ಗಾವಿ 19:  ಯಾವುದೇ ದೇಶ ಎಷ್ಟೇ ಪ್ರಗತಿ ಸಾಧಿಸಬಹುದುಆದರೆ ಹೆಚ್ಚುವ ಜನಸಂಖ್ಯೆಯಿಂದ ದೇಶದ ಪ್ರಗತಿಗೆ ಮಾರಕವಾಗಿದೆ ಎಂದು ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ ಹೇಳಿದರು. 

ಪಟ್ಟಣದ ಸರಕಾರಿ ಪದವಿ ಪೂರ್ವಕಾಲೇಜಿನಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾವೇರಿ, ತಾಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಶಿಗ್ಗಾವಿ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವಜನಸಂಖ್ಯಾ ದಿನಾಚರಣೆ ಅಭಿಯಾನ ಕಾರ್ಯಕ್ರಮದ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಭಾರತದೇಶದಲ್ಲಿ ಮೂಢನಂಬಿಕೆಗಳಿಗೆ ಹೆಚ್ಚಿನ ಪ್ರಾಧ್ಯಾನತೆ ನೀಡುವುದು, ಕುಟುಂಬ ಯೋಜನೆಯ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆಯದಿರುವುದು ಹಾಗೂ ಸೂಕ್ತ ಶಿಕ್ಷಣ ಇಲ್ಲದಿರುವುದು ಜನಸಂಖೈ ಹೆಚ್ಚಳವಾಗಲು ಮುಖ್ಯಕಾರಣವಾಗಿದೆ ಎಂದರು. 

ಪುರಸಭೆ ಸದಸ್ಯ ಸುಭಾಸ ಚವ್ಹಾಣ ಮಾತನಾಡಿ ನಮ್ಮದೇಶದಲ್ಲಿ ಗಂಡು ಮಕ್ಕಳು ಹುಟ್ಟಿದರೆ ಮಾತ್ರ ಕುಟುಂಬದಗೌರವ ಹೆಚ್ಚುತ್ತದೆ ಎಂದು ತಿಳಿದು 4-5 ಹೆಣ್ಣು ಮಕ್ಕಳಾದರೂ ಸಹಿತ ಗಂಡು ಮಗುವಿನ ಅಪೇಕ್ಷೆಯಿಂದಜನನ ಪ್ರಮಾಣ ಏರಿಕೆಗೆ ಪರೋಕ್ಷವಾಗಿ ಕಾರಣವಾಗಿದೆ ಅಲ್ಲದೇ ಹೆಣ್ಣಾಗಲಿ, ಗಂಡಾಗಲಿ ಮನೆಗೆ ಎರಡು ಮಕ್ಕಳು ಸಾಕು ಎಂಬ ಎಲ್ಲತಂದೆ ತಾಯಿಗಳು ಮನೋಭಾವನೆಯನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದರು. 

ಭಾಕ್ಸ ಸುದ್ದಿ : ಪಟ್ಟಣದ ಸರಕಾರಿ ಪದವಿ ಪೂರ್ವಕಾಲೇಜಿನಲ್ಲಿಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ಹಾವೇರಿ, ತಾಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಶಿಗ್ಗಾವಿ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವಜನಸಂಖ್ಯಾ ದಿನಾಚರಣೆ ಅಭಿಯಾನ ಜಾಥಾ ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ ಹಾಗೂ ತಾಲೂಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಹನಮಂತಪ್ಪ ಪಿ.ಹೆಚ್ ಚಾಲನೆ ನೀಡಿದರು. 

---------------------------  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಚಾರ್ಯ ಲಿಂಗಯ್ಯ ಹಿರೇಮಠ ಹಾಗೂ ಡಾ.ಗೈಬು ನಾಯಕರ ಪ್ರಾಸ್ತಾವಿಕವಾಗಿ, ಉಪನ್ಯಾಸಕ ಅಂಜಿನೆಪ್ಪ ಉಪನ್ಯಾಸ ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತಾ ಜಾಥಾ ಕಾರ್ಯಕ್ರಮ ಸಾಗಿತು. 

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಜಗದೀಶ ವೈ, ಪುರಸಭೆ ಸದಸ್ಯೆ ಸಂಗೀತಾ ವಾಲ್ಮೀಕಿ, ಎಸ್‌.ಬಿ.ಸಜಾಪೂರ, ಡಾ. ಸುರೇಶ ಪೂಜಾರ, ಪ್ರಕಾಶಕಿತ್ತೂರ, ಕರಿಬಸಯ್ಯ ಹಿರೇಮಠ, ರಾಮು ಪಾಟೀಲ, ನಂದೀಶ, ಸಂಗಮೇಶ, ಎಸ್‌.ಬಿ.ಕಟ್ಟಿಮನಿ, ಸುಮಾಆರ್, ಆಶಾಕಾರ್ಯಕರ್ತೆಯರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಕಿಲ್ಲೇದಾರ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ