ಆಡಳಿತ ಪಕ್ಷದಿಂದ ದುರಾಡಳಿತ ಹೆಚ್ಚಿದೆ: ಕಾಶಪ್ಪನವರ
ಹುನಗುಂದ 21; ಮತಕ್ಷೇತ್ರದಲ್ಲಿ ಅಭಿವೃದ್ಧಿ ಸಂಪೂರ್ಣ ಕುಸಿತವಾಗಿದ್ದು, ಆಡಳಿತ ಪಕ್ಷದಿಂದ ದುರಾಡಳಿತ ಹೆಚ್ಚಾಗಿ ಅಕ್ರಮ ಮರಳುಗಾರಿಕೆ ಕುಮ್ಮಕ್ಕು ನೀಡುತ್ತಿದ್ದಾರೆಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅರೋಪಿಸಿದರು.
ಬುಧವಾರ ಮಧ್ಯಾಹ್ನ ನಗರದ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿ ಕೋವಿಡ್- ವ್ಯಾಕ್ಸಿನ್ ಪಡೆದ ನಂತರ ಆಸ್ಪತ್ರೆ ಮುಂಭಾಗದಲ್ಲಿ ಸುದ್ದಿಗೋಷ್ಟಿ ಏರ್ಪಡಿಸಿ ಮಾತನಾಡಿದ ಅವರು ಶಾಸಕ ದೊಡ್ಡನಗೌಡ ಪಾಟೀಲ ಮತ್ತು ಅವರ ಹಿಂಬಾಲಿಗರು ಬೇರೆ ಪಕ್ಷದ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುವದಲ್ಲದೆ ಠಾಣೆಯಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕ್ಷೇತ್ರದಲ್ಲಿ ಒಂದು ರೀತಿಯ ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ. ಅವಳಿ ತಾಲೂಕಿನಲ್ಲಿ ಪೊಲೀಸರು ರಕ್ಷಕರಾಗದೆ ಭಕ್ಷಕರಾಗಿ ಸಾರ್ವಜನಿಕ ರಂಗದಲ್ಲಿ ಇಲ್ಲಸಲ್ಲದ ಪ್ರಕರಣ ಸೃಷ್ಟಿಸಿ ಬರೀ ಲಂಚ ವಸೂಲಿ ಕಾರ್ಯದಲ್ಲಿ ತೊಡಗಿದ್ದಾರೆಂದು ಕಾಶಪ್ಪನವರ ಆರೋಪಿಸಿದರು.
ಇತ್ತೀಚೆಗೆ 2ಎ ಮೀಸಲಾತಿ ಹೋರಾಟದ ಎರಡನೆಯ ಶರಣು ಶರಣಾರ್ಥಿ ಯಾತ್ರೆ ಸ್ವಾಗತ ಸಮಯದಲ್ಲಿ ಇಲಕಲ್ಲಿನ ಬಸವೇಶ್ವರ ಪುತ್ಥಳಿಗೆ ಸಾಮೂಹಿಕ ಮಾಲಾರ್ಪಣೆ ಮಾಡುವ ಸಂದರ್ಭವನ್ನು ಉದ್ದೇಶಪೂರ್ವಕವಾಗಿ ಪ್ರಕರಣ ದಾಖಲಾಗಿದೆ ಎಂದು ತಿಳಿದಿದೆ. ದೊಡ್ಡನಗೌಡರ ಅವಧಿಯಲ್ಲಿ ಅಧಿಕಾರವನ್ನು ಮತ್ತು ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಬರಿ ಖೊಟ್ಟಿ ಕೇಸಗಳೆ ದಾಖಲಾಗಿವೆ. ಅಧಿಕಾರ ದುರುಪಯೋಗ ಮತ್ತು ಹೆಚ್ಚುತ್ತಿರುವ ಲಂಚದ ಹಾವಳಿ ಹಾಗೂ ಅಕ್ರಮ ಮರಳು ಮಾಫಿಯಾ ದಂಧೆ ನಿಲ್ಲದಿದ್ದರೆ ನಮ್ಮ ಕಾಂಗ್ರೆಸ್ ಪಕ್ಷದಿಂದ ತಾಲೂಕಿನ ಜನರು ಸೇರಿಕೊಂಡು ಹೋರಾಟ ನಡೆಸಲಾಗುವದೆಂದು ವಿಜಯಾನಂದ ಕಾಶಪ್ಪನವರ ಎಚ್ಚರಿಸಿದರು.
ಇದೆ ವೇಳೆ ಪುರಸಭೆ ಅಧ್ಯಕ್ಷ ಶರಣು ಬೆಲ್ಲದ, ಪಿಕೆಪಿಎಸ್ ನಿರ್ದೇಶಕ ಮಹಾಂತೇಶ ಹೊಸೂರ, ರಾಜಕುಮಾರ ಬಾದವಾಡಗಿ, ಮಹಾಂತಗೌಡ ಪಾಟೀಲ, ಮಹಾಂತೇಶ ಮದರಿ, ಅಮರೇಶ ನಾಗೂರ ಉಪಸ್ಥಿತರಿದ್ದರು.
ಹುನಗುಂದ ಮತ್ತು ಇಲಕಲ್ಲ ಅವಳಿ ತಾಲೂಕಿನಲ್ಲಿ ಪೊಲೀಸರ ಕುಮ್ಮಕ್ಕಿನಿಂದ ವ್ಯಾಪಕವಾಗಿ ನಡೆದ ಮರಳು ಮಾಫಿಯಾ ದಂಧೆÉಯಲ್ಲಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಯು ಶಾಮೀಲಾಗಿದ್ದಾರೆ.
ಮಾಜಿ ಶಾಸಕ ಕಾಶಪ್ಪನವರ