ಮೀಸಲಾತಿ ಹೆಚ್ಚಳ: ಸರಕಾರದ ಕ್ರಮಕ್ಕೆ ಸ್ವಾಗತಾರ್ಹ
ಲೋಕದರ್ಶನ ವರದಿ
ಶಿಗ್ಗಾವಿ 07: ಪರಿಶಿಷ್ಟ ಪಂಗಡದ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಇಂದು ಸರ್ವ ಪಕ್ಷಗಳ ನಿಯೋಗದಲ್ಲಿ ಮೀಸಲಾತಿ ಹೆಚ್ಚಳ ಮಾಡಿ ಒಮ್ಮತದ ನಿರ್ಣಯ ತೆಗೆದುಕೊಂಡ ರಾಜ್ಯ ಸರಕಾರದ ಕ್ರಮಕ್ಕೆ ತಾಲೂಕ ಪರಿಶಿಷ್ಟ ಪಂಗಡ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಡಾ. ಬಿ.ಹೆಚ್.ವೀರಣ್ಣಾ ಸ್ವಾಗತ ಮಾಡಿದ್ದಾರೆ.
ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂದು ಬೆಂಗಳೂರಿನಲ್ಲಿ ನಡೆದ ಸರ್ವ ಪಕ್ಷಗಳ ನಿಯೋಗದಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳ ಮಾಡುವಲ್ಲಿ ಒಮ್ಮತದ ನಿರ್ಣಯ ತೆಗೆದುಕೊಂಡು ಆದಷ್ಟು ಬೇಗ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡು ನಂತರ ಮುಂಗಡ ಪತ್ರ ಸುತ್ತೋಲೆಯಲ್ಲಿ ಆದೇಶವಾಗಿ ಅದಕ್ಕೆ ಪ್ರತ್ಯೇಕ ಹಣವನ್ನು ಮಂಜೂರು ಮಾಡಿಆದಷ್ಟು ಬೇಗ ಜಾರಿಗೆ ಬರಲಿ ಆಶಿಸಿದರು.
ಪೀಠದ ಶ್ರೀಗಳು ಹಗಲು ರಾತ್ರಿಯನ್ನದೆ, ಮಳೆ, ಬಿಸಿಲು, ಚಳಿಯನ್ನದೇ ನಿರಂತರ ಹೋರಾಟದ ಫಲವಾಗಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಕಾನೂನು ಮಂತ್ರಿ ಮಾಧುಸ್ವಾಮಿ, ಸಾರಿಗೆ ಸಚಿವ ಹಾಗೂ ಪರಿಶಿಷ್ಟ ಪಂಗಡ ಮಂಡಳಿ ಅಧ್ಯಕ್ಷ ಶ್ರೀರಾಮುಲು, ಶಾಸಕ ರಾಜು ಸೇರಿದಂತೆ ಎಲ್ಲಗಣ್ಯಮಾನ್ಯರಿಗೂ ಪರಿಶಿಷ್ಟ ಪಂಗಡ ಮುಖಂಡರು ಹಾಗೂ ನಾಯಕರಿಗೂ ಸಮಾಜದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ