ಮನರಂಜನೆ

ಹೀರೋ ಸೂರ್ಯ ಗೆ ಆದಾಯ ತೆರಿಗೆ ನ್ಯಾಯಮಂಡಳಿ ಶಾಕ್....!

ಹೀರೋ  ಸೂರ್ಯ ಗೆ ಆದಾಯ ತೆರಿಗೆ ನ್ಯಾಯಮಂಡಳಿ ಶಾಕ್....!

ಚೆನ್ನೈ, ಆಗಸ್ಟ್‌  18: ಕಾಲಿವುಡ್‌   ನಾಯಕ  ನಟ   ಸೂರ್ಯ   ಅವರಿಗೆ     ಆದಾಯ ತೆರಿಗೆ  ನ್ಯಾಯಮಂಡಳಿ    ಶಾಕ್ ನೀಡಿದೆ.   ಆದಾಯ ತೆರಿಗೆ  ಇಲಾಖೆಗೆ    3  ಕೋಟಿ  ರೂಪಾಯಿ  ಪಾವತಿಸುವಂತೆ   ಸೂರ್ಯ ಅವರಿಗೆ    ಆದೇಶಿಸಿದೆ.   ಈ  ತೆರಿಗೆಯಿಂದ ವಿನಾಯಿತಿ ಕೋರಿ    2018 ರಲ್ಲಿ  ಸೂರ್ಯ ಅರ್ಜಿ ಸಲ್ಲಿಸಿದ್ದರು.

2010ರಲ್ಲಿ  ಆದಾಯ ತೆರಿಗೆ   ಅಧಿಕಾರಿಗಳು    ಸೂರ್ಯ  ಅವರ  ನಿವಾಸ, ಕಛೇರಿಗಳ   ಮೇಲೆ   ದಾಳಿ  ನಡೆಸಿದ  ನಂತರ    2007-08,  2008-09  ಹಣಕಾಸು ವರ್ಷಗಳಿಗೆ ಸಂಬಂಧಿಸಿದಂತೆ    ಒಟ್ಟು  ಸುಮಾರು  3 ಕೋಟಿ 12 ಲಕ್ಷ ರೂ.    ತೆರಿಗೆಯಾಗಿ ಪಾವತಿಸಲು ಆದೇಶಿಸಿತ್ತು.       ಆದಾಯ  ತೆರಿಗೆ  ಇಲಾಖೆಯ     ಮೂರು ವರ್ಷಗಳ  ವಿಳಂಬದಿಂದ  ತಮಗೆ  ಅನಾನುಕೂಲವಾಗಿದೆ,    ಹಾಗಾಗಿ  ತೆರಿಗೆ  ಪಾವತಿಯಿಂದ  ವಿನಾಯಿತಿ  ಕೋರಿ ಸೂರ್ಯ 2018 ರಲ್ಲಿ  ಹೈಕೋರ್ಟ್‌ ಮೊರೆ ಹೋಗಿದ್ದರು.   ಆದರೆ,  ಪ್ರಕರಣದಲ್ಲಿ   ಆದಾಯ  ತೆರಿಗೆ ಇಲಾಖೆ ಪರವಾಗಿ  ತೀರ್ಪು ನೀಡಿತ್ತು. 

ಹೈಕೋರ್ಟ್‌   ಆದೇಶದ    ವಿರುದ್ಧ  ಸೂರ್ಯ    ಐಟಿ ನ್ಯಾಯಮಂಡಳಿಯ ಮೊರೆಹೋಗಿದ್ದರು.  ಬುಧವಾರ  ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶ ಎಸ್.ಎಂ.ಸುಬ್ರಮಣ್ಯಂ    ಮೇಲ್ಮನವಿಯನ್ನು ವಜಾಗೊಳಿಸಿದರು.  ಈ  ಬಗ್ಗೆ   ಪ್ರತಿಕ್ರಿಯಿಸಿರುವ 2 ಡಿ ಎಂಟರ್‌ ಟೈನ್‌ ಮೆಂಟ್‌  ಸಿಇಓ ರಾಜೇಶ್ವರ್, "  ಆದಾಯ ತೆರಿಗೆ  ಇಲಾಖೆಗೆ ಸಂಪೂರ್ಣವಾಗಿ ಸಹಕರಿಸಿದ್ದೇವೆ. ಆದಾಯ ತೆರಿಗೆ  ಮೇಲಿನ ಬಡ್ಡಿ ಮರು ಪಾವತಿ ಪ್ರಕರಣ ಮಾತ್ರ ಇದೆ. ಅದರ ವಿರುದ್ಧ  ನಾವು ಮತ್ತೊಮ್ಮೆ ಮೇಲ್ಮನವಿ ಸಲ್ಲಿಸುತ್ತೇವೆ" ಎಂದು ಹೇಳಿದ್ದಾರೆ.

ಸುದ್ದಿ ಓದಿ