ಮುಂದಗೋಡ

ಎಡಬಿಡದೆ ಸುರಿಯುತ್ತಿರುವ ಮಳೆ: ಮನೆಗಳಿಗೆ ಹಾನಿ

ಎಡಬಿಡದೆ ಸುರಿಯುತ್ತಿರುವ ಮಳೆ: ಮನೆಗಳಿಗೆ ಹಾನಿ

ಮುಂಡಗೋಡ:ತಾಲೂಕಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಗ್ರಾಮೀಣ ಭಾಗದ ಮನೆಗಳಿಗೆ ಹಾನಿ ಉಂಟಾಗಿದೆ.   

ಮುಡಸಾಲಿ ಗ್ರಾಮದ ಶೇಕಪ್ಪ ಹೀರಳ್ಳಿ ಎಂಬುವರ ಮನೆಯ ಮೇಲ್ಚಾವಣಿ ಬಿದ್ದು ಹಾನಿ, ಕಾತೂರ ಗ್ರಾಮದ ಮಲ್ಲಿಕಾರ್ಜುನ ಬೊಮ್ಮನಳ್ಳಿ ಅವರ ಮನೆಯ ಗೋಡೆ, ಗುಂಜಾವತಿ ಗ್ರಾಮದ ಹನೀಫಾಬಿ ಕರೀಮ್‌ಸಾಬ್ ಮುಜಾವರ ಎಂಬುವರ ಮನೆಯ ಹಿಂದಿನ ಗೋಡೆ, ಕೆಂದಲಗೇರಿ ಗ್ರಾಮದ ಲಕ್ಷ್ಮೀ ನಾರಾಯಣ ಅಂಗನೆ ಅವರ ಮನೆ ಗೋಡೆ, ಆಲಳ್ಳಿ ಗ್ರಾಮದ ನೀಲವ್ವ ಮದನೊಳ್ಳಿಮಠ ಎಂಬುವರ ಮನೆಯ ಗೋಡೆ, ಅಂದಲಗಿ ಗ್ರಾಮದ ಸುವರ್ಣಾ ಚನ್ನಬಸಯ್ಯ ಹಿರೇಮಠ ಅವರ ಮನೆಯ ಗೋಡೆ, ಬಸವರಾಜ ಉಮ್ಮಣ್ಣವರ ಎಂಬುವರ ಮನೆಯ ಗೋಡೆ, ಇಂದೂರಿನ ನೀಲಪ್ಪ ಹರಿಜನ ಎಂಬುವರ ಮನೆ ಗೋಡೆ, ಸೋಮವ್ವ ಬಿ. ಪಾಟೀಲ ಅವರ ಕೊಟ್ಟಿಗೆ, ಅರಶಿಣಗೇರಿ ಗ್ರಾಮದ ಕವಿತಾ ಸಹದೇವಗೌಡ ಹಸರಂಬಿ ಅವರ ಮನೆಯ ಮೇಲ್ಚಾವಣಿ ಬಿದ್ದು ಹಾನಿ ಸಂಭವಿಸಿದೆ.    

ಪಂಚಾಯತ ರಾಜ ಇಂಜಿನಿಯರ ಪ್ರದೀಪ ಭಟ್ಟ, ಪಿಡಬ್ಲ್ಯುಡಿ ಸಹಾಯಕ ಇಂಜಿನಿಯರ ಬಸವರಾಜ, ಕಿರಿಯ ಇಂಜಿನಿಯರ ರಮೇಶ ಸರ್ವೋತ್ತಮ, ಗ್ರಾಮ ಲೆಕ್ಕಾಧಿಕಾರಿ ಶಿವರಾಜ ಸೂರಿನ್, ಗೋಪಾಲ ಎಮ್‌., ಗೀರೀಶ ರಣದೇವ ಹಾನಿಯಾದ ಸ್ಥಳಗಳಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. 


ಸುದ್ದಿ ಓದಿ