ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
ಲೋಕದರ್ಶನ ವರದಿ,
ಜಮಖಂಡಿ 17: ರೋಟರಿ, ಇನ್ನರವ್ಹೇಲ್ ಸಂಸ್ಥೆಯು ಜನಸೇವೆಗಾಗಿ ಮಾಡುತ್ತಾ 118 ವರ್ಷಗಳ ಕಾಲ ನಿರಂತರ ಸೇವೆಯನ್ನು ಮಾಡುತ್ತಾ ಬಂದಿರುವ ಅತೀ ದೊಡ್ಡ ಸಂಸ್ಥೆಯಾಗಿವೆ ಎಂದು ಜಿಲಾ ್ಲಗೌವನ್ನರ ಸಂಗ್ರಾಮ ಪಾಟೀಲ ಹೇಳಿದರು.
ನಗರದ ಬಸವ ಭವನದಲ್ಲಿ ನಡೆದ ರೋಟರಿ ಮತ್ತು ಇನ್ನರವ್ಹೇಲ್ ಸಂಸ್ಥೆ 2023-24 ಸಾಲಿನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂಸ್ಥೆಯಲ್ಲಿ ಅಧಿಕಾರ ಹಸ್ತಾಂತರ ಅತೀ ಸಳಕರವಾಗಿದೆ. ಜೂ, 30 ರಂದು ತಮ್ಮ ಅಧಿಕಾರ ಪ್ರೀತಿಯಿಂದ ತ್ಯಜಿಸಿ ಹೊಸ ಪದಾಧಿಕಾರಿಗಳಿಗೆ ನೀಡುತ್ತಾರೆ ಎಂದರು.
ಉತ್ಕರ್ಷಾ ಪಾಟೀಲ, ಚಿದಾನಂದ ಸಿದ್ದಾಪೂರಮಠ, ನೂತನ ರೋಟರಿ ಅಧ್ಯಕ್ಷ ರವೀಂದ್ರ ಗವಳಿ, ನೂತನ ಇನ್ನರವ್ಹೇಲ್ ಅಧ್ಯಕ್ಷೆ ಆಶಾದೇವಿ ಗುಡಗುಂಟಿ ಮಾತನಾಡಿದರು.
ಇನ್ನರವ್ಹೇಲ್ ನೂತನ ಕಾರ್ಯದರ್ಶಿ ಡಾ.ಅಶ್ವಿನಿ ಪೂಜಾರಿ,ನಿಕಟಪೂರ್ವ ಅಧ್ಯಕ್ಷ ಮಹೇಶ ಪಾಟೀಲ, ಅಧ್ಯಕ್ಷೆ ಮೇಘಾ ಮಹಾಬಳಶೆಟ್ಟಿ ಸ್ವಾಗತಿಸಿದರು, ಕಾರ್ಯದರ್ಶಿ ಮುತ್ತುರಾಜ ಅತ್ತೆಪ್ಪನವರ ವಾರ್ಷಿ ಕ ವರದಿ ಮಾಡಿದರು.ಹರೀಶ ಪವಾರ ವಂದೇಮಾತರಂ ಹೇಳಿದರು. ಆರ್,ಪಿ, ನ್ಯಾಮಗೌಡ, ಶಶಿಧರ ಕಡಿಬಾಗಿಲ, ಭಾಗ್ಯಶ್ರೀ ಕೋಟಿ, ಅರ್ಚನಾ ಕಾಖಂಡಕಿ, ಮಾಳೇಶ ಪೂಜಾರಿ ನಿರೂಪಿಸಿದರು. ಡಾ,ನವೀನ ಮಾಳೇದ, ಡಾ, ಜ್ಯೋತಿ ದೇವರೆಡ್ಡಿ, ಯುವರಾಜ ಬಿರಾದಾರ ಅಥಿತಿ ಪರಿಚಯ ಮಾಡಿದರು. ನೂತನ ಕಾರ್ಯದರ್ಶಿ ಬಸವರಾಜ ಆಲಗೂರ ವಂದಿಸಿದರು.