ಮುದ್ದೆಬಿಹಾಲ್

ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡ ಉದ್ಘಾಟನೆ

ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡ ಉದ್ಘಾಟನೆ

ಮುದ್ದೇಬಿಹಾಳ 02:  ವಿವಿಧತೆಯಲ್ಲಿ ಏಕತೆಯನ್ನು ಕಂಡಿರುವ ಭಾರತ ಇಡಿ ವಿಶ್ವಕ್ಕೆ ಮಾದರಿಯಾಗಿದೇ ವಿದ್ಯಾರ್ಥಿಗಳು ಈ ದೇಶದ ಆಸ್ತಿ ಸದೃಡ ಭಾರತವನ್ನು ಕಟ್ಟುವ ಶಕ್ತಿ ಅವರ ಕೈಯಲ್ಲಿದೇ ಈ ಹಿನ್ನೇಲೆಯಲ್ಲಿ ವ್ಯರ್ಥ ಸಮಯ ಹಾಳುಮಾಡಿಕೊಳ್ಳದೇ ತಮ್ಮ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಮುಂದಾಗಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಹೇಳಿದರು. 

ತಾಲೂಕಿನ ಬಿದರಕುಂದಿ ಗ್ರಾಮದ ವ್ಯಾಪ್ತಿಯ ಆದರ್ಶ ವಿದ್ಯಾಲಯದ ಹತ್ತಿರ ದಿ, ದೇವರಾಜು ಅರಸು ಹಿಂದುಳಿದ ವರ್ಗಗಳ ಮೇಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. 

ಕಳೇದ 2016-17ರಲ್ಲಿದಿ, ದೇವರಾಜು ಅರಸು ಹಿಂದುಳಿದ ವರ್ಗಗಳ ಮೇಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಸ್ಥಾಪಿಸಲು ತಿರ್ಮಾನಿಸಿ ಪ್ರಸ್ತುತ ಈ ವಸತಿ ನಿಲಯಕ್ಕೆ ಅಂದಿನ ನಮ್ಮ ಸರಕಾರ ಮಂಜುರಾತಿ ನೀಡಿತ್ತು ಮುಂದೆ 2021ರಲ್ಲಿ ಇದಕ್ಕೆ ಕಟ್ಟಡ ಪ್ರಾರಂಭಿಸಲಾಯಿತು. ಸಧ್ಯ ಕಟ್ಟಡವೂ ಸಂಪೂರ್ಣ ಮುಕ್ತಾಯಗೊಂಡಿದ್ದು ಅಲ್ಪ ಸ್ವಲ್ಪ ಮೂಲಬೂತ ಸೌಲಭ್ಯಗಳನ್ನು ಒದಗಿಸುವುದು ಬಾಕಿ ಕೆಲಸವಿದೆ ಆದರೇ ಗುತ್ತಿಗೆದಾರರಿಗೆ ಬಾಕಿ ಹಣ ಮಂಜೂರಿ ಮಾಡಿಲ್ಲವೇಂದು ಗುತ್ತಿಗೆದಾರರು ಇಲಾಖೆಗೆ ಹಸ್ತಾಂತರ ಮಾಡಿರಲಿಲ್ಲ ಎಂಬ ವಿಷಯ ತಿಳಿದು ತಕ್ಷಣದಲ್ಲಿಯೇ ಕ್ರೈಸ್ತ ಸಂಸ್ಥೆಯ ಮುಖ್ಯಸ್ಥರಿಗೆ ದೂರವಾಣಿ ಮೂಲಕ ಮಾತನಾಡಿ ಈ ಹಿಂದಿನ ಸರಕಾರದ ನ್ಯೂನ್ಯತೆಗಳ ಬಗ್ಗೆ ನಾನು ಮಾತನಾಡಲಾರೆ ಆಗ ಏನಾಗಿದೇಯೋ ನನಗೆ ಗೊತ್ತಿಲ್ಲ.  ಪ್ರಸ್ತುತ ನಮ್ಮ ಸರಕಾರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಗುತ್ತಿಗೆದಾರರ ಹಣ ಬಿಡುಗಡೆ ಮಾಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನಿಸುತ್ತೇನೆ.  ಆದರೇ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಕಟ್ಟಡವನ್ನು ಇಲಾಖೆಗೆ ಹಸ್ತಾಂತರ ಮಾಡಿಸಿ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದ್ದೇ ಅದರಂತೆ ಇಂದು ಗುತ್ತಿಗೆದಾರರು ಬಿಸಿಎಂ ಇಲಾಖೆಗೆ ಹಸ್ತಾಂತರ ಮಾಡುವ ಮೂಲಕ ಉದ್ಘಾಟನೆಗೊಳ್ಳುತ್ತಿದೆ. 

ಬಸವ ನಗರದಲ್ಲಿನ ಖಾಸಗಿ ಮಾಲಿಕತ್ವದ ವಸತಿ ನಿಲಯದ ಹಳೆ ಕಟ್ಟಡವೂ ಸಂಪೂರ್ಣ ಬಿರುಕಗೊಂಡು ಯಾವಾಗ ಬೀಳುತ್ತದೆಯೋ ಏನು ಎನ್ನುವ ಅಪಾಯದ ಸ್ಥಿತಿಯಲ್ಲಿದ್ದಿದ್ದು ಮಾತ್ರವಲ್ಲದೇ ವಿದ್ಯಾರ್ಥಿಗಳಿಗೆ ಸಮರ​‍್ಕ ಮೂಲಬೂತ ಸೌಲಭ್ಯಗಳ ಕೊರತೆಯಿಂದ ತೀವೃ ಸಂಕಷ್ಟವನ್ನು ಅನುಭವಿಸುತ್ತಿರುವುದನ್ನು ಸ್ವತಃ ಪರೀಶಿಲನೆ ವೇಳೆ ಗೊತ್ತಾಗಿ ಹಳೆ ಕಟ್ಟಡದಲ್ಲಿರುವ ಸುಮಾರು 120 ಜನ ಪುರುಷ ವಿದ್ಯಾರ್ಥಿಗಳು ದಿ, ದೇವರಾಜು ಅರಸು ಹಿಂದುಳಿದ ವರ್ಗಗಳ ಮೇಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಿ ಅನುಕೂಲ ಮಾಡಿಕೊಡಲಾಗಿದೆ. 

ಈದೇಶದ ಸಂವಿದಾನ ಶಿಲ್ಪಿ ಡಾ, ಬಿ ಆರ್ ಅಂಬೇಡ್ಕರವರು ಸೇರಿದಂತೆ ಹಲವಾರು ಜನ ಸ್ವಾತಂತ್ರ್ಯ ಹೋರಾಟಗಾರರ, ಶರಣರ, ಸಾಧಕರ ಆದರ್ಶ ಜೀವನವನ್ನು ತಮ್ಮ ವಿದ್ಯಾರ್ಥಿ ಜೀವನ ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ದುಶ್ಚಟಗಳ ದಾಸರಾಗದೇ ಭವಿಷ್ಯ ಉತ್ತಮ ನಾಯತಕರಾಗಿ ಎಲ್ಲರೂ ಮೆಚ್ಚುವ ಹಾಗೇ ಬೆಳೆದು ನಿಲ್ಲಬೇಕು. ಸಧ್ಯ ಈ ವಸತಿ ನಿಲಯದ ಕಟ್ಟಡವೂ ತಮ್ಮ ಮನೆಯಂದು ಭಾವಿಸಿ ಸ್ವಚ್ಛತೆಯಿಂದ ಇರುವಂತೆ ನೋಡಿಕೊಳ್ಳುವುದರ ಜೊತೆಗೆ ಇಂದಿನ ಆಧುನಿಕ ತಂತ್ರಜ್ಞಾನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೋಬ್ಭ ವಿದ್ಯಾರ್ಥಿಯೂ ಸ್ಪರ್ಧಾ ಮನೋಭಾವ ಬೆಳಸಿಕೊಂಡು ಅಭ್ಯಾಸದ ಕಡೆ ಗಮನ ಹರಿಸುವ ಮೂಲಕ ದೇಶದ ಅತ್ಯುನ್ನತ ಹುದ್ದೇಗಳನ್ನು ಅಲಂಕರಿಸಿ ಯಶಸ್ವಿ ಜೀವನ ನಿಮ್ಮದಾಗಬೇಕು. ಸಧ್ಯ ನಮ್ಮ ಸರಕಾರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೇ. ಸಧ್ಯ ಒಬ್ಬ ವಿದ್ಯಾರ್ಥಿಗೆ ಊಟಕ್ಕೆ 68 ರೂಗಳನ್ನು ಮಾತ್ರ ಕರ್ಚು ಮಾಡಬೇಕು ಎನ್ನುವ ಆದೇಶವನ್ನು ಮುಂದಿನ ಅಧಿವೇಶನದಲ್ಲಿ ಚರ್ಚಿಸಿ ಇಂದಿನ ಬೆಲೆ ಏರಿಕೆ ತಕ್ಕಂತೆ ಊಟಕ್ಕೇಂದು ನೀಡುವ ಹಣವನ್ನು ಹೆಚ್ಚಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸುತ್ತೇನೆ. ಜೊತೆಗೆ ನಾಲ್ಕೈದು ವಿದ್ಯಾರ್ಥಿನಿಯರ ವಸತಿ ನಿಲಯಗಳನ್ನು ಮಂಜೂರ ಮಾಡಿಸಿಕೊಂಡು ಬಂರುವ ಮೂಲಕ ಈ ಭಾಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದರು. 

ಕಳೇದ ಒಂದು ವಾರದ ಹಿಂದೆ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ)ಅವರನ್ನು ನಮ್ಮ ವಸತಿ ನಿಲಯಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ  ವಸತಿ ನಿಲಯ ಕಟ್ಟದ ಹಾಗೂ ಮೂಲಬೂತಸೌಲಭ್ಯಗಳ ಕೊರತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದ್ದೇವು ಆದರೇ ಒಂದೇ ವಾರದಲ್ಲಿ ನಮ್ಮ ಸಮಸ್ಯೆ ಬಗೆ ಹಿರಿಸುವುದಾಗಿ ಭರವಸೆ ಕೊಟ್ಟಿದ್ದರು ಆದರೇ ತಾವೂ ಭರವಸೆ ಕೊಟ್ಟಂತೆ ಒಂದೇ ವಾರದಲ್ಲಿ ನಮ್ಮ ನೂತನ ವಸತಿ ನಿಲಯದ ಕಟ್ಟಡವನ್ನು ಉದ್ಘಾಟಿಸಿ ಸುಮಾರು 120 ಜನ ವಿದ್ಯಾರ್ಥಿಗಳನ್ನು ಹೊಸ ವಸತಿ ನಿಲಯಕ್ಕೆ ಸ್ಥಳಾಂತರ ಮಾಡುವ ಮೂಲಕ ನುಡಿದಂತೆ ನಡೆಯುವ ಮೂಲಕ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ ಅವರಿಗೆ ಎಲ್ಲ ವಿದ್ಯಾರ್ಥಿಗಳ ಪರವಾಗಿ ಅಭಿನಂದನೆಗಳನ್ನು  ಸಮರ​‍್ಿಸುತ್ತೇವೆ.ಮಹೇಶ ದೊಡಮನಿ, ಗ್ಯಾನಪ್ಪ ಮಲಗಲದಿನ್ನಿ, ವಿರೇಶ ಪತ್ತಾರ, ಗುರುನಾಥ ತಂಗಡಗಿ, ಬಸವರಾಜ ಮೇಟಿ, ತಿಳಿಸಿದರು. 

ಈ ವೇಳೆ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ,  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  ತಾಲೂಕಾ ಕಲ್ಯಾಣಾಧಿಕಾರಿ, ಇಲಾಖೆಯ ಶಿವಲೀಲಾ ಕೊಣ್ಣೂರ, ವಿಸ್ತಿರ್ಣಾಧಿಕಾರಿ ಉಮೇಶ ಮಾಟೂರ, ನಿಲಯ ಪಾಲಕ ಈರಭದ್ರ​‍್ಪ ಮೋರ್ಕೇ, ಗಣ್ಯರಾದ ವೈ ಎಚ್ ವಿಜಯಕರ, ಪುರಸಭೆ ಸದಸ್ಯರಾದ ಮೈಬೂಬ ಗೊಳಸಂಗಿ, ರೀಜಾಹಮ್ಮದ ಢವಳಗಿ, ಶಿವು ಶಿವಪುರಿ, ಯಲ್ಲಪ್ಪ ನಾಯಕಮಕ್ಕಳ, ಗೋಪಿ ಮಡಿವಾಳ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ