ವಿಜಯಪುರ

ತಿಳಗೂಳ ಆಶ್ರಮದ ಶ್ರೀ ಚಕ್ರಬಗಳಾಂಬ ಶಕ್ತಿಪೀಠ ಪ್ರತಿಷ್ಠಾನ ಸಂಘ ಉದ್ಘಾಟನೆ

ತಿಳಗೂಳ ಆಶ್ರಮದ ಶ್ರೀ ಚಕ್ರಬಗಳಾಂಬ ಶಕ್ತಿಪೀಠ ಪ್ರತಿಷ್ಠಾನ ಸಂಘ ಉದ್ಘಾಟನೆ


ದೇವರಹಿಪ್ಪರಗಿ : ತಿಳಗೂಳ ಗ್ರಾಮದ ಆಶ್ರಮದ ಶ್ರೀ ಚಕ್ರಬಗಳಾಠ ಶಕ್ತಿಪೀಠ ಪ್ರತಿಷ್ಠಾನ ಸಂಘ ಉದ್ಘಾಟನೆ ಕಾರ್ಯಕ್ರಮ ಶುಕ್ರವಾರದಂದು ನೆರೆವೇರಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಮಹೇಶ್ವರಾನಂದ ಸ್ವಾಮೀಜಿ ಅವರು ದಿವ್ಯ ಸಾನಿದ್ಯ ವಹಿಸಿಕೊಂಡು ಆಶಿರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಎಮ್‌. ಸಿ. ಕಾಸರ ವಹಿಸಿಕೊಂಡು ಆಶ್ರಮದ ಇತಿಹಾಸ ಕುರಿತು ಮಾತಾನಾಡಿದರು.  ಪ್ರಾಸ್ತಾವಿಕವಾಗಿ ಶ್ರೀಕಾಂತ ಪತ್ತಾರ ಮಾತನಾಡಿ ಸಂಘದ ಉದ್ದೇಶ ಹಾಗೂ ಕಾರ್ಯಗಳು ಕುರಿತು ಮಾತನಾಡಿದರು.

ಸಂಘದ ಉಪದ್ಯಕ್ಷರಾದ  ಗಂಗಾಧರ ಬಾಗೇವಾಡಿ ಮಾತನಾಡಿ, ಸಂಘದಿಂದ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಸಹಾಯ ಆಗಬೇಕು ಜೊತೆಗೆ ಆಶ್ರಮದ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಶ್ರಮಿಸಬೇಕು ಎಂದು ಹೇಳಿದರು. ಅದೇ ರೀತಿ ಸಂಘದ ಖಜಾಠಗಳಾದ ಶಿವಪುತ್ರ ಸಾತಿಹಾಳ ಅವರು ಮಾತನಾಡಿ, ಸಂಘ ಮಾಡೋವದು ದೊಡ್ಡ ಕಾರ್ಯವಲ್ಲ ಅದನ್ನು ಮುಂದುವರೆಸಿಕೊಂಡು ಹೋಗಬೇಕು ಜೊತೆಗೆ ಸಂಘದಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮ ಆಗಬೇಕು ಎಂದು ತಿಳಿಸಿದರು.  

ಮಹಿಳಾ ಸದಸ್ಯರ ಪ್ರತಿನಿಧಿಯಾಗಿ ಶರಣಮ್ಮ ಬಂಡೋಳಿ ಮಾತನಾಡಿ ಆಶ್ರಮದ ಸ್ವಾಮೀಜಿಗಳು ಸಮಾಜಗೋಸ್ಕರ ತಮ್ಮನ್ನು ತಾವು ಅರೆ​‍್ಣ ಮಾಡಿಕೊಂಡಿರುತ್ತಾರೆ. ಜೊತೆಗೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳಿಗೆ ಯಾವದೇ ಪ್ರತಿಫಲ ಬಯಸದೆ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ ಅವರ ಸೇವೆ ಪವಿತ್ರವಾದದ್ದು ಅವರ ಮಾರ್ಗದರ್ಶನದಲ್ಲಿ ಸಂಘ ಮುಂದುವರೆದು ಈ ಆಶ್ರಮದ ಹಾಗೂ ನಮ್ಮೂರಿನ ಅಭಿವೃದ್ಧಿಗೆ ಎಲ್ಲರು ಕೆಲಸ ಮಾಡೋಣ ಎಂದರು. ಕಾರ್ಯಕ್ರಮದಲ್ಲಿ ಎಲ್ಲಾ ಸದಸ್ಯರಿಗೆ ಸನ್ಮಾನಿಸಲಾಯಿತು.  

ಕಾರ್ಯಕ್ರಮದಲ್ಲಿ ನಾಗರಾಜ ಪತ್ತಾರ, ಕಳಪ್ಪ ಪತ್ತಾರ, ಬಸವರಾಜ ಮಾಡಗಿ, ಮಾನು ಬಡಿಗೇರ. ಗಾಯಿತ್ರಿ ಶಿಲ್ಪಿ, ಅನುಸುಬಾಯಿ ಮದ್ದರಕಿ, ಸೋಮಲಿಂಗ ಸಂಗೋಗಿ, ಶ್ರೀಮಂತ ರಾಠೋಡ, ನಿಂಗರಾಜ ಚವ್ಹಾಣ, ಮಲ್ಲಿನಾಥ ವಾಲಿಕಾರ, ದೇವೇಂದ್ರ ಬಡಿಗೇರ, ಮನೋಹರ ವಿಶ್ವಕರ್ಮ ಮಾರುತಿ ಕಮ್ಮಾರ, ರವೀಂದ್ರ ಬಡಿಗೇರ, ಸತೀಶ ಬಡಿಗೇರ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಜಗದೀಶ ಸಾತಿಹಾಳ ನಿರೂಪಿದರು. ಬಸವಶ್ರೀ ಬಂಡೋಳಿ ಪ್ರಾರ್ಥಿಸಿದರು. ಶಿಕ್ಷಕ ಸಾಹೇಬಗೌಡ ಬಿರಾದಾರ ಸ್ವಾಗತಿಸಿದರು. 


ಸುದ್ದಿ ಓದಿ