ಬಳ್ಳಾರಿ

ಆ.04ರಂದು ಬಳ್ಳಾರಿಯಲ್ಲಿ ನೂತನ ವಿವಿಐಪಿ ಗೆಸ್ಟ್‌ ಹೌಸ್ ಉದ್ಘಾಟನೆ

ಆ.04ರಂದು ಬಳ್ಳಾರಿಯಲ್ಲಿ ನೂತನ ವಿವಿಐಪಿ ಗೆಸ್ಟ್‌ ಹೌಸ್ ಉದ್ಘಾಟನೆ

ಬಳ್ಳಾರಿ 02: ಲೋಕೋಪಯೋಗಿ ಇಲಾಖೆಯ ವತಿಯಿಂದ ಬಲ್ಳಾರಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿವಿಐಪಿ ಗೆಸ್ಟ್‌ ಹೌಸ್ ಉದ್ಘಾಟನಾ ಸಮಾರಂಭ ಆ.04ರಂದು ಬೆಳಗ್ಗೆ 11ಕ್ಕೆ ನಗರದ ಡಾ.ರಾಜ್‌ಕುಮಾರ್ ರಸ್ತೆಯ ಸರಕಾರಿ ಅತಿಥಿಗೃಹದ ಆವರಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. 

ಲೋಕೋಪಯೋಗಿ ಇಲಾಖೆ ಸಚಿವರಾದ ಸಿ.ಸಿ.ಪಾಟೀಲ್ ಅವರು ನೂತನ ವಿವಿಐಪಿ ಗೆಸ್ಟ್‌ ಹೌಸ್ ಅನ್ನು ಉದ್ಘಾಟಿಸಲಿದ್ದು, ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಘನಉಪಸ್ಥಿತಿ ವಹಿಸಲಿದ್ದಾರೆ. ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. 

ಸಂಸದರಾದ ವೈ.ದೇವೇಂದ್ರ​‍್ಪ, ಡಾ.ಸೈಯದ್ ನಾಸೀರ್ ಹುಸೇನ್,ಶಾಸಕರಾದ ಈ.ತುಕಾರಾಂ,ಬಿ.ನಾಗೇಂದ್ರ, ಎಂ.ಎಸ್‌.ಸೋಮಲಿಂಗಪ್ಪ, ಜೆ.ಎನ್‌.ಗಣೇಶ, ಡಾ.ಚಂದ್ರಶೇಖರ ಪಾಟೀಲ್, ಶಶೀಲ್ ನಮೋಶಿ, ವೈ.ಎಂ.ಸತೀಶ್, ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗುತ್ತಿಗನೂರು ವಿರುಪಾಕ್ಷಗೌಡ, ಮಹಾನಗರ ಪಾಲಿಕೆಯ ಮೇಯರ್ ರಾಜೇಶ್ವರಿ ಸುಬ್ಬರಾಯ್ಡು, ಬುಡಾ ಅಧ್ಯಕ್ಷ ಪಾಲನ್ನ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. 

ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಗಳಾದ ಡಾ.ಕೆ.ಎಸ್‌.ಕೃಷ್ಣಾರೆಡ್ಡಿ, ಸಂಪರ್ಕ ಮತ್ತು ಕಟ್ಟಡಗಳು(ಈ) ಮುಖ್ಯ ಎಂಜನಿಯರ್ ಜಗನ್ನಾಥ ಹಲಿಂಗೆ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಎಸ್ಪಿ ಸೈದುಲು ಅಡಾವತ್, ಜಿಪಂ ಸಿಇಒ ಜಿ.ಲಿಂಗಮೂರ್ತಿ, ಮಹಾನಗರ ಪಾಲಿಕೆ ಆಯುಕ್ತರಾದ ಎಸ್‌.ಎನ್‌.ರುದ್ರೇಶ್, ಬಳ್ಳಾರಿ ವೃತ್ತದ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಎಂ.ಎಸ್‌.ಮಲ್ಲಿಕಾರ್ಜುನ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. 


ಸುದ್ದಿ ಓದಿ