ತಾಳಿಕೋಟಿ

ಕುಡಿಯುವ ನೀರಿನ ತೊಟ್ಟಿ ಉದ್ಘಾಟನೆ

ಕುಡಿಯುವ ನೀರಿನ ತೊಟ್ಟಿ ಉದ್ಘಾಟನೆ

ತಾಳಿಕೋಟೆ 29: ತಾಲೂಕಿನ ಬ.ಸಾಲವಾಡಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಳಿಕೋಟೆ ಪಟ್ಟಣದ ಉದ್ಯಮಿ ಸುಭಾಸ ಜವರಿಲಾಲ ಅಗರವಾಲ ಪರಿವಾರದ ವಿಕ್ರಮ(ಘಟ್ಟು) ಹಾಗೂ ಪ್ರಮೋದ ಅಗರವಾಲ ಸಹೋದರರು ರೂ.40 ಸಾವಿರ ಮೊತ್ತದಲ್ಲಿ ನಿರ್ಮಿಸಿದ ಕುಡಿಯುವ ನೀರಿನ ತೊಟ್ಟಿ ಉದ್ಘಾಟನೆ ಮಾಡಲಾಯಿತು. 

ವ್ಯಾಪಾರದಲ್ಲಿ ಗಳಿಸುವ ಲಾಭಾಂಶದಲ್ಲಿ ನಾವು ಪರೋಪಕಾರಾರ್ಥವಾಗಿ ನೀಡುವ ಅಂತಹ ಕೊಡುಗೆಗಳಿಂದ ನಮ್ಮ ಮನಸ್ಸಿಗೆ ಶಾಂತಿ ದೊರೆಯುತ್ತಿರುವುದಲ್ಲದೇ ವ್ಯಾಪಾರದಲ್ಲಿ ದ್ವಿಗುಣ ಲಾಭವೂ ಆಗುತ್ತಿದೆ ಎಂದು ದಾನಿ ವಿಕ್ರಮ(ಘಟ್ಟು) ಅಗರವಾಲ ಹೇಳಿದರು. ಇದೇ ರೀತಿ ಅಸ್ಕಿ ಸರ್ಕಾರಿ ಪ್ರೌಢಶಾಲೆಯಲ್ಲಿಯೂ ಮಕ್ಕಳಿಗಾಗಿ ಕುಡಿಯುವ ನೀರಿನ ತೊಟ್ಟಿ ನಿರ್ಮಾಣ ಭರದಿಮದ ಸಾಗಿದೆ ಎಂದ ಅವರು, ಎಸ್‌.ಎಸ್‌.ಎಲ್ಸಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಯಾರಾದರೂ ಸರಿ ಜಿಲ್ಲೆಗೆ ಪ್ರಥಮ ಬಂದರೆ 5001 ನಗದು ಬಹುಮಾನ ನೀಡುವುದಾಗಿ ಘೋಷಿಸಿದರು. 

ವಿದ್ಯಾರ್ಥಿನಿ ಪ್ರಜ್ಞಾ, ಹಿರಿಯ ಶಿಕ್ಷಕ ಎಂ.ಎಚ್‌.ಚೌದ್ರಿ ಮಾತನಾಡಿದರು. ಅಧ್ಯಕ್ಷತೆಯನ್ನು ಎಸ್‌.ಡಿಎಂಸಿ ಅಧ್ಯಕ್ಷ ಸಾಹೇಬಗೌಡ ಅನಂತರೆಡ್ಡಿ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮದ ಮಲ್ಲನಗೌಡ ಸೋಮನಾಳ, ಕನ್ನಯ್ಯ ವಿಕ್ರಮ ಅಗರವಾಲ, ಶಿಕ್ಷರುಗಳಾದ ಎಸ್‌.ಎಸ್‌.ಗಡೇದ, ಕೆ.ಡಿ.ರಾಠೋಡ, ಅತಿಥಿ ಶಿಕ್ಷಕರುಗಳಾದ ಸಿದ್ಧಮ್ಮ, ಶಿವಲೀಲಾ, ಸಿಬ್ಬಂದಿ ಎನ್‌.ಎಸ್‌.ಕೊಡತೆ, ಇದ್ದರು. ಶಿಕ್ಷಕ ?ರ್‌.ಆರ್‌.ಹುನಗುಂದ ನಿರ್ವಹಿಸಿದರು. ಶಿಕ್ಷಕ ಶ್ರೀನಾಥ ಮೂರಂಕಣ ಸ್ವಾಗತಿಸಿದರು. ವಿದ್ಯಾರ್ಥಿನಿ ತೇಜಶ್ವಿನಿ ದೇಸಾಯಿ ವಂದಿಸಿದರು. 


ಸುದ್ದಿ ಓದಿ