ಮುದ್ದೆಬಿಹಾಲ್

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮ ಉದ್ಘಾಟನೆ

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮ ಉದ್ಘಾಟನೆ

ಮುದ್ದೇಬಿಹಾಳ 29: ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮವೂ ವಿಧ್ಯಾರ್ಥಿಗಳ ವಿದ್ಯಾಭ್ಯಾಸದ ಜೊತೆಗೆ ಅವರಲ್ಲಿ ಇರುವ ಅಗಾಧವಾದ ಗುಪ್ತ ಪ್ರತಿಭೆಗಳನ್ನು ಗುರ್ತಿಸುವಂತ ಮಹಾನ ವೇದಿಕೆ ಇದಾಗಿದೆ ಕಾರಣ ವಿದ್ಯಾರ್ಥಿಗಳು ಯಾವೂದೇ ಮುಲಾಜಿಲ್ಲದೇ ಅಂಜಿಕೆ ಅಳುಕು ಇಲ್ಲದೇ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ಉತ್ತಮ ಪ್ರತಿಭಾನ್ವೀತ ವಿದ್ಯಾರ್ಥಿಗಳಾಗಿ ಹೊರಹೊಮ್ಮ ಬೇಕು ಎಂದು ಶಾಸಕ ಸಿ ಎಸ್ ನಾಡಗೌಡ(ಅಪ್ಪಾಜಿ) ಹೇಳಿದರು. 

ತಾಲೂಕಿನ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಾಲೂಕಾ ಕ್ಷೇತ್ರ ಶಿಕ್ಷಣ ಇಲಾಖೆ  ವತಿಯಿಂದ 2023-24 ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮವನ್ನು ಮಂಗಳವಾರ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 

ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಬೌದ್ದಿಕ ವಿಕಸನ ಹೊಂದಲಿದೆ ಹಾಗೂ ನಿರಂತರ ಓದಿನ ಜತೆಗೆ ಪ್ರತಿಭಾ ಕಾರಂಜಿ, ಕ್ರೀಡೆ, ಸಂಗೀತ ಮುಂತಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಇಂದು ಮಕ್ಕಳಿಗೆ ಶಿಕ್ಷಣಕ್ಕೆ ಮಾತ್ರ ಒತ್ತುಕೊಟ್ಟು  ಒತ್ತಾಯದ ಶಿಕ್ಷಣಕ್ಕೆ ಮಹತ್ವ ನೀಡುತ್ತದ್ದಾರೆ ಇದರಿಂದ ಮಕ್ಕಳ ಮನಸ್ಸಿನ ಮೇಲೆ ವ್ಯಾಪಕ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ ಈ ನಿಟ್ಟಿನಲ್ಲಿ ಗುಣಮಟ್ಟ ಶಿಕ್ಷಣದ ಜೊತೆಗೆ ಮಕ್ಕಳ ಆಸಕ್ತಿಯಂತೆ ವಿವಿಧ ಪ್ರತಿಭೆಗಳ ಅನಾವರಣಗೊಳಿಸುವಲ್ಲಿ  ಪ್ರತಿ ಮಗುವಿನಲ್ಲಿ ವಿಭಿನ್ನ ಕಲೆ ಅಡಗಿರುತ್ತದೆ. ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡುವದು ಪ್ರತಿಯೊಬ್ಬರ ಕರ್ತವ್ಯ ಎಂದು ಎಲ್ಲ ಪಾಲಕರು ಮತ್ತು ಶಿಕ್ಷಕರು ಅರ್ಥೈಸಿಕೊಳ್ಳುವ ಮೂಲಕ ನಿಜವಾದ ಜಾನಪದ ಹಾಗೂ ದೇಶದ ಪರಂಪರೆ ಎತ್ತಿಹಿಡಿಯುವಂತ ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ ಇದರಿಂದ ತಂದೆ ತಾಯಿಯರನ್ನು ಗುರು ಹಿರಿಯನ್ನು ಗೌರವಿಸುವ ಮತ್ತು ಧೇಶಾಭಿಮಾನ ಮೂಡಿಸುವ  ಭಾವನೆ ಬಿತ್ತಬೇಕಿದೆ ಎಂದರು. 

ಈ ವೇಳೆ ವೇದಿಕೆ ಮೇಲೆ ಪ್ರಾ.ಶಾ.ಶಿ.ಸಂ ಅಧ್ಯಕ್ಷ ಬಿ.ಎಚ್‌.ಮುದ್ನೂರ ತಾಳಿಕೋಟಿ ಘಟಕದ ಅಧ್ಯಕ್ಷ ಬಿ.ಟಿ.ವಜ್ಜಲ್‌..ಬಿ..ಇ.ಓ ಯು.ಬಿ.ಧರಿಕಾರ ಅಕ್ಷರದಾಸೋಹ ಎ.ಡಿ  ಸಂಗಮೇಶ ಹೊಲ್ದೂರ, ದೈಹಿಕ ಶಿಕ್ಷಣ ಪರೀವೀಕ್ಷಕ ಬಿ.ವೈ.ಕವಡಿ. ಎಸ್ ಡಿ ಎಂ ಸಿ ಅಧ್ಯಕ್ಷ ಬಸವರಾಜ ಹಿರೇಕುರುಬರ, ಎನ್‌.ಎಸ್ ತುರಡಗಿ, ಐ.ಎ.ಮಠ ನೋಡಲ್ ಅಧಿಕಾರಿ ವಿಜಯಲಕ್ಷ್ಮಿ ಚಿಲ್ಲಾಳಶೆಟ್ಟಿ, ಮುಖ್ಯಗುರು ಸಿದ್ದನಗೌಡ ಲಿಂಗದಳ್ಳಿ. ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಇ.ಸಿ.ಓ, ಬಿ.ಆರ್‌.ಪಿ,ಸಿ.ಆರ್‌.ಪಿ ಗಳು ಬಿದರಕುಂದಿ ಗ್ರಾಮದ ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ