ಶ್ರೀ ಸಿದ್ದೇಶ್ವರ ಔಷಧ ಮಳಿಗೆ ಉದ್ಘಾಟನೆ
ಮುದ್ದೇಬಿಹಾಳ 27: ವಿಜಯಪುರ ಜ್ಞಾನ ಯೋಗಾಶ್ರಮದಲ್ಲಿ, ಸಿದ್ದೇಶ್ವರ ಸ್ವಾಮಿಜಿಗಳ ಹೆಸರು ಅಜರಾಮರವಾಗಿಸುವ ಮೂಲಕ ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಶ್ರೀಗಳ ಹೆಸರಲ್ಲಿ ಜೆ ಎಸ್ ಎಸ್ ಸಂಸ್ಥೆಯನ್ನು ಅಸ್ಥಿತ್ವಕ್ಕೆ ತರಲಾಗಿದೆ ವಿನಃ ಹಣ ಮಾಡಲು ಅಲ್ಲ. ಈ ನಿಟ್ಟಿನಲ್ಲಿ ತುರ್ತು ಸಂದರ್ಭದಲ್ಲಿ ವೈದೈಕೀಯ ಸೇವೆಗೆ ನೆರವು ದೊರಕಿಸುವ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ದಿನದ 24 ಗಂಟೆ ಓಷಧ ಮಳಿಗೆ ತೆರೆಯಲಾಗಿದೆ ಕಾರಣ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಾಜಿ ಕೇಂದ್ರ ಸಚೀವ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶ್ರೀ ಸಿದ್ದೇಶ್ವರ 24 ಗಂಟೆ ಓಷಧ ಮಳಿಗೆಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಮೂರು ವರ್ಷಗಳ ಹಿಂದೆ ಶ್ರೀ ಸಿದ್ದೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ಎನ್ನುವ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಅದರಂತೆ 17 ವರ್ಷಗಳ ಹಿಂದೆ ಸಿದ್ದಸಿರಿ ಸೌಹಾರ್ದ ಸಂಘವನ್ನು ತೆರೆಯುವ ಮೂಲಕ ಸಾವಿರಾರು ಬಡ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯಗಳನ್ನು ಒದಗಿಸಿ ಆರ್ಥಿಕವಾಗಿ ಚೈತನ್ಯ ತುಂಬುವಲ್ಲಿ ಯಶಸ್ವಿಯಾಗಿದೆ. ಪರಿಣಾಮ ಇಂದು ಕರ್ನಾಟಕ ರಾಜ್ಯದಲ್ಲಿ ಸುಮಾರು 160 ಕ್ಕೂ ಹೆಚ್ಚು ಸಂಸ್ಥೆಗಳನ್ನು ತೆರದು ಸುಮಾರು 3 ಸಾವೀರ ಕೋಟಿಗಳ ಠೇವಣಿ ಸಂಗ್ರಹಿಸಿ ಸಾವಿರಾರು ಕೋಟಿಗಳ ವಹಿವಾಟುಗಳನ್ನು ಹೊಂದಿದ ರಾಜ್ಯದ ಏಕೈಕ ಸಿದ್ದಸಿರಿ ಸೌಹಾರ್ಧ ಸಂಸ್ಥೆಯಾಗಿ ಹೊರಹೊಮ್ಮಿದೆ. ಅದರಲ್ಲಿ ಮುದ್ದೇಬಿಹಾಳ ಸಿದ್ದಸಿರಿ ಶಾಖೆಯಿಂದಲೇ ಸುಮಾರು 160 ಕೋಟಿಗಳ ವಹಿವಾಟು ಹೊಂದಿದೆ ಎಂದರೆ ಇಲ್ಲಿಯ ಆಢಳಿತ ಮಂಡಳಿಯ ಸದಸ್ಯರ ವಿಶ್ವಾಸ ಸಾಕ್ಷಿಯಾಗಿದೆ. ಇದರ ಅಡಿಯಲ್ಲಿ ದ್ರಾಕ್ಷಿ ಬೆಳೆಗಾರರ ರಕ್ಷಣೆಗಾಗಿ ವಿಜಯಪುರದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಿಸಲಾಗಿದೆ. ಚಿಂಚೋಳ್ಳಿಯಲ್ಲಿ ಸುಮಾರು 750 ಕೋಟಿ ವೆಚ್ಚದಲ್ಲಿ ಸಿದ್ದಸಿರಿ ಇಥಿನಾಲ್ ಮತ್ತು ಪವರ ಹಾಗೂ ಸಕ್ಕರೆ ಖಾರ್ಕಾನೆಯನ್ನು ಸ್ಥಾಪಿಸಲಾಗಿದೆ. ಜೊತೆಗೆ ಸಿದ್ದಸಿರಿ ಸಂಸ್ಥೆಯ ಶೇರುದಾರರಿಗೆ ಶೇಕಡಾ 25 ರಷ್ಟು ಡಿವ್ಹಿಡಂಡ ಫಂಡ ಕೂಡ ವಿತರಿಸಲಾಗಿದೆ.
ಅದರಂತೆ ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬಳಿ ವಿಶಾಲ ಮೈದಾನದಲ್ಲಿ 108 ಹಾಸಿಗೆಯ ಜೆ ಎಸ್ ಎಸ್ ಆಸ್ಪತ್ರೆಯನ್ನು ತೆರದು ಬಡವರ ಹಾಗೂ ಹಿಂದುಳಿದವರ ಆರೋಗ್ಯ ರಕ್ಷಣೆಯನ್ನು ಕೂಡ ನೀಡುವ ಮೂಲಕ ಸೇವೆ ಮಾಡುವ ಉದ್ದೇಶ ಇದಾಗಿದೆ. ಜೊತೆಗೆ ಇಂದು ರಾತ್ರಿ ಯಾದರೇ ಸಾಕು ತುರ್ತು ಚಿಕಿತ್ಸೆಗೆ ಅತ್ಯಗತ್ಯವಾಗಿರುವ ಮೆಡಿಶೇನ್ ಸಿಗುವುದು ಬಹಳ ಕಷ್ಟವಾಗುತ್ತಿರುವುದನ್ನು ಮನಗಂಡು ಜಿಲ್ಲೆಯೂ ಸೇರಿದಂತೆ ಇತರೇ ಭಾಗಗಳಲ್ಲಿ ಸುಮಾರು 25 ಕ್ಕೂ ಹೆಚ್ಚು 24 ಗಂಟೆ ತೆರೆದಿರುವ ಓಷಧ ಮಳಿಗೆಗಳನ್ನು ತೆರೆಯುವ ಮೂಲಕ ಕಡಿಮೆ ದರದಲ್ಲಿ ಓಷಧಿಗಳನ್ನು ನೀಡುವ ಕಾರ್ಯ ಇದಾಗಿದೆ ಕಾರಣ ಇದೊಂದು ವಿನೂತ ಪ್ರಯೋಗವಾಗಿದೆ ಎಂದರೆ ತಪ್ಪಾಗಲಾರದು. ಈಗಾಗಲೇ ಕಿಡ್ನಿ ಕಸಿ ಜೋಡಣಾ ಘಟಕ ಸ್ಥಾಪಿಸಲಾಗಿದೆ ಮುಂದಿನದಿನಗಳಲ್ಲಿ ಕ್ಯಾನ್ಸರ್ ಆಸ್ಪತ್ರೆ ತೆರೆಯಲು ಸಿದ್ದತೆ ಕೈಗೊಳ್ಳಲಾಗಿದೆ ಎಂದರು.
ಈ ವೇಳೆ ಕುಂಟೋಜಿ ಹಿರೇಮಠದ ಡಾ, ಚನ್ನವೀರದೇವರು ಅವರು ಮಾತನಾಡಿ ವಿಜಯಪುರ ಶಾಸಕ ಬಸನಗೌಡ ಪಾಟೀಲ(ಯತ್ನಾಳ)ಅವರು ಕೇವಲ ಒಬ್ಬ ರಾಜಕಾರಣಿಯಾಗಿಲ್ಲ ಅವರಲ್ಲಿ ತಾಯಿ ಹೃದಯವನ್ನು ಹೊಂದಿದ ಬಡವರ, ಧೀನ ದಲಿತರ, ಆಶಾಕಿರಣರಾಗಿದ್ದಾರೆ ನಿಜವಾದ ಸಾಮಾಜಿಕ ಕಳಕಳಿಯನ್ನು ಹೊಂದಿದವರಾಗಿದ್ದಾರೆ. ಶಿಕ್ಷಣ, ಸಹಕಾರ ಸೇರಿದಂತೆ ಓದ್ಯೋಗಿಕ ಕ್ರಾಂತಿ ಮಾಡಿದ ಕೀರ್ತಿ ಬಸನಗೌಡ ಪಾಟೀಲರಿಗೆ ಸಲ್ಲುತ್ತದೆ. ಇವರಂತೆ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ಎಲ್ಲ ವರ್ಗದವರನ್ನೂ ಕೂಡ ಸಮಾನತೆಯಿಂದ ಕಾಣುವ ಸರಳ ಸಜ್ಜನಕೆ ವ್ಯಕ್ತಿವನ್ನು ಹೊಂದಿದ ಜನಸೇವರಾಗಿದ್ದಾರೆ ಇವರಿಬ್ಬ ಜೋಡಿ ಮಾತ್ರ ಅತ್ಯಂತ ಪವಿತ್ರವಾದ ಬಾಂಧವ್ಯವನ್ನು ಹೊಂದಿದ್ದಾರೆ ಸೂರ್ಯ ಚಂದ್ರ ಇರುವತನಕವೂ ಇವರ ಜೋಡಿಗೆ ಇನ್ನಷ್ಟು ಸಾಮಾಜಿಕ ಸೇವೆ ಗೈಯುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸೋಣ ಎಂದರು.
ಉಪ್ಪಿನಬೆಟಗೇರಿಶ್ರೀ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಗಣ್ಯ ಉದ್ಯಮಿ ಬಸವರಾಜ ಮೋಟಗಿ, ನ್ಯಾಯವಾದಿ ಎಂ ಎಸ್ ನಾವದಗಿ, ಡಾ, ದಲಿಚಂದ ಓಸ್ವಾಲ್, ಜೆ ಎಸ್ ಎಸ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ, ಶರಣ ಎಸ್ ಮಳಖೇಡ, ಡಾ, ಎಸ್ ಬಿ ನಾಗೂರ, ಬಾಲಾಜಿ ಶುಗರ್ಸ ಉಪಾಧ್ಯಕ್ಷ ರಾಹುಲ ಪಾಟೀಲ, ಎಂ ಬಿ ನಾವದಗಿ, ಕರ್ನಾಟಕ ಕೋ ಆಪ್ ಬ್ಯಾಂಕಿನ ಅಧ್ಯಕ್ಷ ಸತೀಶ ಓಸ್ವಾಲ್, ಸುರೇಶಗೌಡ ಪಾಟೀಲ, ಸಿದ್ದು ಹೆಬ್ಬಾಳ, ದೇವೇಂದ್ರ ವಾಲಿಕಾರ ಸೇರಿದಂತೆ ಮತ್ತಿತರರು ಇದ್ದರು.