ನನ್ನ ಬೆಳೆ ನನ್ನ ಹಕ್ಕು ಕಾರ್ಯಾಕ್ರಮ ಉದ್ಘಾಟನೆ
ಲೋಕದರ್ಶನ ವರದಿ
ಕನಕಗಿರಿ 07: ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಜಿಲ್ಲಾ ಮತ್ತು ತಾಲೂಕ ಕೃಷಿ ಇಲಾಖೆ ಹಾಗೂ ರೈತ ಉತ್ಪಾದಕ ಸಂಸ್ಥೆ ಮುಸಲಾಪುರ ಇವರ ಸಂಯೋಜನೆಯಲ್ಲಿ ಗುರುವಾರ ನನ್ನ ಬೆಳೆ ನನ್ನ ಹಕ್ಕು ಕಾರ್ಯಾಕ್ರಮವನ್ನು ಗಂಗಾವತಿ ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲು ಉದ್ಘಾಟಿಸಿದರು.
ಬಳಿಕ ಕೃಷಿ ಅಧಿಕಾರಿ ಕೆ.ನಾಗರಾಜ ಮಾತನಾಡಿ 2022-23ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯ ಮೊಬೈಲ್ ಆ್ಯಪ್ನ ಬಗ್ಗೆ, ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ನಂತರ ಮೊಬೈಲ್ ಆ್ಯಪ್ನ ಮೂಲಕ ಬೆಳೆ ಸಮೀಕ್ಷೆ ಹೇಗೆ ಮಾಡುವುದು, ಅವರ ಪಾಲಕರ ಮತ್ತು ಸಂಬಂಧಿಕರ ಬೆಳೆಗಳನ್ನು ಸಮೀಕ್ಷೆ ಮಾಡುವ ವಿಧಿವಿಧಾನವನ್ನು ತಿಳಿಸಲಾಯಿತು. ರೈತರಿಗೆ ಕೃಷಿ ಇಲಾಖೆಯ ಯೋಜನಗಳು ತಲುಪಲು ಬೆಳ ಸಮೀಕ್ಷೆ ಮಾಡುವುದು ಬಹಳ ಉಪಯುಕ್ತವಾಗಿರುತ್ತದೆ. ರಾಜ್ಯ ಮತ್ತು ಕೇಂದ್ರ ಸರಕಾರ ರೈತರಿಗಾಗಿ ನನ್ನ ಬೆಳೆ ನನ್ನ ಹಕ್ಕು ಕಾರ್ಯಕ್ರಮ ಕೈಗೊಂಡಿದ್ದು ಇದರಲ್ಲಿ ವಿವಿಧ ಧನ ಸಹಾಯ ಅವಕಾಶಗಳು ಇವೆ, ಅವುಗಳನ್ನು ಸದುಪಯೋಗ ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಾಶುಂಪಾಲ ಡಾ. ರಾಮಣ್ಣ ಎ.ಜೆ.ಕೆ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ರೈತ ಉತ್ಪಾದಕ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಅಲ್ಲಂಗಿರಿರಾಜ, ಬಸವರಾಜ ಪಾಟೀಲ, ಪ್ರಾಧ್ಯಾಪಕರಾದ ಸರ್ಫರಾಜ್ ಅಹ್ಮದ್, ಮರ್ವಿನ್ ಡಿಸೋಜ್, ಡಾ. ಆಸಿಕಾ, ಡಾ. ವಿರೇಶ, ತಬ್ಬಸುಮ್ ಆರಾ, ಸೋಮಶೇಖರ, ಗೋಪಾಲರೆಡ್ಡಿ, ಬಾಳಪ್ಪ ಸುಳೇಕಲ್ ,ಮಾರುತಿ ವಿಶ್ವಕರ್ಮ ಹಾಗು ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.