ಮುಂದಗೋಡ

ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲುವಿನ ಮೆಟ್ಟಿಲಾಗಿಸಿಕೊಳ್ಳಿ: ಪಾಟೀಲ

ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲುವಿನ ಮೆಟ್ಟಿಲಾಗಿಸಿಕೊಳ್ಳಿ: ಪಾಟೀಲ

ಮುಂಡಗೋಡ 23: ಸ್ಪರ್ಧೆಯಲ್ಲಿ ಗೆಲ್ಲಬೇಕು ಎಂಬ ಗುರಿ ಪ್ರತಿಯೊಬ್ಬ ಆಟಗಾರನಿಗೂ ಇರುತ್ತದೆ. ಹಾಗೆಂದು ಎಲ್ಲರೂ ಕೂಡ ಗೆಲ್ಲಲು ಸಾದ್ಯವಿಲ್ಲ. ಒಬ್ಬರು ಗೆದ್ದರೆ ಮತ್ತೊಬ್ಬರು ಸೋಲಲೇಬೇಕು. ಸೋಲನ್ನು ಕೂಡ ಸವಾಲಾಗಿ ಸ್ವೀಕರಿಸಿ ಗೆಲುವಿನ ಮೆಟ್ಟಿಲು ಏರುವ ಛಲ ಹೊಂದುವುದೇ ಕ್ರೀಡಾ ಮನೋಭಾವನೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್ ಪಾಟೀಲ ಹೇಳಿದರು.

ಶನಿವಾರ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಮುಂಡಗೋಡ ಚಾಂಪಿಯನ್ಸ್ ಲೀಗ್(ಎಮ್.ಸಿ.ಎಲ್) ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಚಾಲನೆ ನೀಡುವ ಮೂಲಕ ಮಾತನಾಡಿದರು. ಎಲ್ಲ ವಿಭಾಗದಲ್ಲಿ ಕೂಡ ಯುವಕರ ಪಾತ್ರ ಪ್ರಮುಖವಾಗಿರುತ್ತದೆ. ಯುವಕರ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ಕ್ರೀಡೆಯೊಂದಿಗೆ  ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ. ಯುವ ಪಡೆಯಿಂದಲೇ ಜಗತ್ತನ್ನು ಗೆಲ್ಲಬಲ್ಲೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದನ್ನು ನಾವು ಸ್ಮರಿಸಬಹುದು. ಅವರ ಮಾರ್ಗದರ್ಶನ ಇಂದಿನ ಯುವಕರಿಗೆ ಸ್ಪೂರ್ತಿಯಾಗಬೇಕಿದೆ ಎಂದರು

ಜಿಲ್ಲಾ ಅನಿಲ ವಿತರಕರ ಸಂಘದ ಅಧ್ಯಕ್ಷ ಬಸವರಾಜ ಓಶಿಮಠ ಮಾತನಾಡಿ, ಆಟಗಾರರು ಕ್ರೀಡೆಯ ಇತಿಹಾಸವನ್ನು ಅರಿತುಕೊಂಡರೆ ಬವಿಷ್ಯದಲ್ಲಿ ಸಾದನೆಗೈಯಲು ಸಹಕಾರಿಯಾಗುತ್ತದೆ ಎಂದರು. ದುರೀಣ ಹರ್ಷಾ ಬೆಂಡ್ರಾಲೆ, ಪತ್ರಕರ್ತ ನಾಗರಾಜ ದೈವಜ್ಞ, ಪಂದ್ಯಾವಳಿ ಆಯೋಜಕ ಪ್ರಕಾಶ ಚಂದಾಪುರ, ಅಕ್ತಾರ ಎಮ್.ಕೆ, ಮುಂಡಗೋಡ ಪಿ.ಎಸ್.ಐ ಬಸವರಾಜ ಮಬನೂರ, ಶಿವರಾಜ ಶಿರಾಲಿ, ಮಂಜುನಾಥ ಹರಿಜನ, ಮಂಜುನಾಥ ಶೇಟ್, ಬಸವರಾಜ ಹಳ್ಳಮ್ಮನವರ ಮುಂತಾದವರು ಉಪಸ್ಥಿತರಿದ್ದರು.

ರಾಷ್ಟ್ರಮಟ್ಟಕ್ಕೆ  ಆಯ್ಕೆ, ಸನ್ಮಾನ: ಜಾವ್ಲಿನ್ ಕ್ರೀಡೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಪ್ರಸಾದ ಗೊಲ್ಲರ ಅವರನ್ನು ಇದೇ ಸಮದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. 

ಸುದ್ದಿ ಓದಿ