ಮಹಿಳೆಯರಿಗೆ ವಾಹನ ಚಾಲನಾ ತರಬೇತಿ ಉದ್ಘಾಟನೆ
ಬಳ್ಳಾರಿ 27: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ (ಅ ಃ ಖಖಇಖಿಋ) ಆವರಣದಲ್ಲಿ ಜಿಲ್ಲಾ ಪಂಚಾಯತ ಸಹಯೋಗದೊಂದಿಗೆ ಮಹಿಳೆಯರಿಗೆ ನಾಲ್ಕು ಚಕ್ರದ ವಾಹನ ಚಾಲನಾ ತರಬೇತಿ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ನಂದಿನಿ ಕೆ ಆರ್, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ ಬಳ್ಳಾರಿ ಇವರು ಈ ಕಾರ್ಯಕ್ರವನ್ನು ಉದ್ದೇಶಿಸಿ ಗ್ರಾಮ ಮಟ್ಟದಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಾಹನಕ್ಕೆ ವಾಹನ ಚಾಲಕಿಯರನ್ನಾಗಿ ಮಹಿಳೆಯರನ್ನು ಆಯ್ಕೆ ಮಾಡಲಾಗಿದ್ದು, ನೀವು ಧೈರ್ಯದಿಂದ ಹೆದರದೆ ವಾಹನ ಚಲಾವಣೆ ಮಾಡುವಲ್ಲಿ ಆಸಕ್ತಿ ವಹಿಸಿ ಕಲಿಯಬೇಕು. ನೀವು ವಾಹನ ಚಲಾವಣೆ ಮಾಡುವದರಿಂದ ಗ್ರಾಮದ ಮಹಿಳೆಯರಿಗೂ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಜೊತೆಗೆ ಮಹಿಳಾ ಸಬಲೀಕರಣವಾಗುತ್ತದೆ. ಎಂದು ಮಾರ್ಗದರ್ಶನ ಮಾಡಿದರು.
ಶರಣ ಬಸವ ರೆಡ್ಡಿ ಡಿ, ನಿರ್ದೇಶಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಬಳ್ಳಾರಿ, ಇವರು ನಮ್ಮ ತರಬೇತಿ ಸಂಸ್ಥೆ ಇವರು ಶಿಭಿರಾರ್ಥಿಗಳನ್ನು ಉದ್ದೇಶಿಸಿ ಕಾರ್ಯಕ್ಷೇತ್ರದಲ್ಲಿ ಪರಿಪೂರ್ಣತೆಯಿಂದ ನಿಮ್ಮನ್ನೂ ನೀವು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಎಂದು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ರಾಜೇಂದ್ರ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ, ವಿಜಯ ಕುಮಾರ ಜಿಲ್ಲಾ ವ್ಯವಸ್ಥಾಪಕ ಜಡೇಶ, ಉಪನ್ಯಾಸಕ ಸಿದ್ದಲಿಂಗಮ್ಮ, ಸಂತೋಷ ಕುಮಾರ, ಉಪಸ್ಥಿತರಿದ್ದರು, ಬಳ್ಳಾರಿ ಜಿಲ್ಲೆಯ 30 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.