ಸಂಕೇಶ್ವರ

ಕೃಷ್ಣಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನೆ

ಕೃಷ್ಣಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನೆ

ಸಂಕೇಶ್ವರ,01: ಸಂಕೇಶ್ವರದಲ್ಲಿ ಕೃಷ್ಣಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನೆಯನ್ನು ಸೆ.01 2024 ರಂದು ನಿಡಸೋಸಿಯ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದ ಜಗದ್ಗುರು ಶ್ರೀ ನಿಜಲಿಂಗೇಶ್ವರ ದೇವರು ಇವರು ಆಸ್ಪತ್ರೆಯನ್ನು ದೀಪ ಪ್ರಜ್ವಲನೆಗೊಳಿಸುವುದರ ಮೂಲಕ ಉದ್ಘಾಟಿಸಿದರು.  

ಇದೇ ದಿನದಂದು ನಿಡಸೋಸಿ ಶಾಖಾ ಮಠದ ಶ್ರೀ ದುರದುಂಡೀಶ್ವರ ಮಠದ ದಾಸೋಹ ಮಹೋತ್ಸವವು ಇತ್ತು.  ಈ ಸುಸಂದರ್ಭದಲ್ಲಿ ಆಸ್ಪತ್ರೆಯ ಉದ್ಘಾಟನೆಯು ಕೂಡಿ ಬಂದಿರುವುದು ಒಂದು ವಿಶೇಷ ಸಂದರ್ಭವಾಗಿದೆ. 

ವೈದ್ಯ ನಾರಾಯಣೋ ಹರಿ ಎಂಬ ವೇದವೆಂಬಂತೆ ಈ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ದೂರದ ಬೆಳಗಾವಿ-ಕೊಲ್ಹಾಪೂರ ನಡುವೆ ರೋಗಿಗಳಿಗೆ ಒಂದು ವರದಾನವಾಗಲಿದೆ.  ಈ ಆಸ್ಪ್ಪತ್ರೆಯು ದಿನದ 24 ಗಂಟೆಯೂ 24ಥ7 ಕಾರ್ಯನಿರ್ವಹಿಲಿದೆ.  ಈ ಆಸ್ಪತ್ರೆಯಲ್ಲಿ ಐಸಿಯು, ಎನ್‌ಐಸಿಯು. ಆನರಲ್ ಮೆಡಿಸಿನ್, ಎಲ್ಲ ಯರಹದ ಸರ್ಜರಿ, ಮೂಳೆ ಶಸ್ತ್ರ ಚಿಕಿತ್ಸೆ, ಮೊಣಕಾಲು ಮತ್ತು ಸೊಂಟ ಮರುಜೋಡಣೆ, ಚಿಕ್ಕ ಮಕ್ಕಳ ತಜ್ಞರ ವಿಭಾಗ, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು, ಕಿವಿ ಮೂಗು, ಗಂಟಲು ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ, ನೇತ್ರ ತಜ್ಞರು, ಗುದಗತ ರೋಗದ ಚಿಕಿತ್ಸೆ ಮೂಲವ್ಯಾಧಿ, ಭಗಂದರ, ಫಿಶರ್, ಫಿಜಿಯೋಥೇರಪಿ,, ಆಯುರ್ವೇದಿಕ್ ಚಿಕಿತ್ಸೆ, ಡೈಟ್ ಮತ್ತು ಲೈಫ್ ಸ್ಟೈಲ್ ಸಮಾಲೋಚನೆ, ವೆಂಟಿಲೇಟರ​‍್ಸ‌, ಐ.ವ್ಹಿ.ಎಫ್ ಮೊದಲಾದ ಸೇವೆಗಳು ದೊರೆಯಲಿವೆ. ಇಲ್ಲಿ ನುರಿತ ಅನುಭವಿ ವೈದ್ಯರುಗಳು ಕಾರ್ಯನಿರ್ವಹಿಸಲಿದ್ದಾರೆ.  ಎಂದು ಸ್ವಾಮಿಜೀಗಳು ತಿಳಿಸಿದರು.  

ಇದು ಶ್ರೀ ಕೃಷ್ಣ ಪರಮಾತ್ಮನ ಆಸ್ಪತ್ರೆ ಎಂದು ಬಣ್ಣಿಸಿದರು.   ಡಾ. ಜಯಪ್ರಕಾಶ ಕರಜಗಿ ಇವರು ಸಮಾಜಸೇವೆ ಗುರಿ ಹೊಂದಿದ್ದಾರೆ ಇವರಲ್ಲಿ ಸಜ್ಜನಿಕೆ ಇದೆ.  ರಾಜಕೀಯ ಮತ್ತು ಶೈಕ್ಷಣಿಕ ರಂಗದಲ್ಲಿ ಅಪಾರವಾದ ಕೆಲಸಗಳನ್ನು ಮಾಡುತ್ತಿದ್ದಾರೆ.  ಇವರ ತಂದೆ ನಾಗಪ್ಪಾ ಕರಜಗಿ ಈ ಸಂಸ್ಥೆಯ ಮುಖ್ಯ ಪ್ರವರ್ತಕರು ಸಂಸ್ಥಾಪಕ ಅಧ್ಯಕ್ಷರು ಆಗಿದ್ದಾರೆ. ತಂದೆ-ತಾಯಿಗಳ ಇಳಿವಯಸ್ಸಿನಲ್ಲಿ ಇವರ ಮಕ್ಕಳ ಸಾಧನೆಯನ್ನು ಕಣ್ತುಂಬ ಕಾಣುತ್ತಿರುವುದು ತುಂಬಾ ಅಪರೂಪದ ಸಂಗತಿಯಾಗಿದೆ ಎಂದು ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಹೇಳಿದರು. 

ಸ್ವಾಮಿಜೀಗಳು ಮುಂದೆ ಈ ಆಸ್ಪತ್ರೆಯು ದೊಡ್ಡ ಮಟ್ಟದಲ್ಲಿ ಬೆಳೆದು ಈ ಭಾಗದ ಬಡರೋಗಿಗಳಿಗೆ ವರದಾನವಾಗಲಿ ಎಂದು ಶುಭ ಹಾರೈಸಿದರು. ಮೇ, ಶಂಕರ ಕರಜಗಿ ನಿರ್ದೇಶಕರು ಎಂಎನ್‌ಜಿಎಲ್, ಪುಣೆ ಇವರು ಗೌರವ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತ ಕೋವಿಡ್ ಸಂದರ್ಭದಲ್ಲಿ ಇವರ ತಂದೆಗೆ ಬೆಳಗಾವಿಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿಯೂ ಕೋವಿಡ್ ಉಪಚಾರಕ್ಕಾಗಿ ಬೆಡ್ ದೊರೆಯಲಿಲ್ಲ.  ಆವಾಗ ಇವರಿಗೆ ತಾವು ಇಷ್ಟೊಂದು ಸ್ಥಿತಿವಂತರು ಇದ್ದರೂ ಕೂಡ ಈ ರೀತಿ ಆಗಿರಬೇಕಾದರೆ ಸಾಮಾನ್ಯ ಜನರ ಸ್ಥಿತಿ ಎಷ್ಟೊಂದು ಕಷ್ಟಕರವಾಗಿರಬಹುದೆಂದು ಊಹಿಸಿ ಸಾಮಾನ್ಯ ಜನರಿಗೆ ಉಪಚಾರ ಸಿಗಬೇಕೆಂಬ ಉದ್ದೇಶದಿಂದ ಮೂರು ವರ್ಷಗಳ ಹಿಂದೆ ಇಂತಹ ಒಂದು ಆಸ್ಪತ್ರೆಯನ್ನು ಮಾಡಬೇಕೆಂಬ ದೃಢ ಸಂಕಲ್ಪವನ್ನು ಮಾಡಿಕೊಂಡಿದ್ದೇವು.  ಅದು ಇಂದು ನೆರವೇರಿದಂತಾಗಿದೆ.  ಬಡಜನರಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ ಎಂದು ಹೇಳಿದರು. 

ತಾವು ಹಣ ಗಳಿಕೆಯ ಉದ್ದೇಶದಿಂದ ಈ ಆಸ್ಪತ್ರೆಯನ್ನು ತೆರೆಯುತ್ತಿಲ್ಲ ಈ ಭಾಗದ ಬಡಜನತೆಗೆ ಇದರಿಂದ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಈ ಆಸ್ಪತ್ರೆಯನ್ನು ಪ್ರಾರಂಭ ಮಾಡುತ್ತಿದ್ದೇವೆ ಎಂದು ಹೇಳಿದರು.  

ಡಾ. ಜಯಪ್ರಕಾಶ ಕರಜಗಿ ಇವರು ಮಾತನಾಡುತ್ತ ಶ್ರಾವಣ ಮಾಸದ ಶುಭ ಮುಹೂರ್ತದಲ್ಲಿ ಈ ಓಪಚಾರಿಕವಾಗಿ ಆಸ್ಪತ್ರೆಯ ಉದ್ಘಾಟನೆಯ ಸಮಾರಂಭವನ್ನು ಮಾಡಲಾಗಿದ್ದು, ಬರುವ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಈ ಆಸ್ಪತ್ರೆಯ ಉದ್ಘಾಟನೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.  

ನಗರದ ಪ್ರತಿಷ್ಠಿತ ವ್ಯಕ್ತಿ ಅಪ್ಪಾಸಾಹೇಬ ಶಿರಕೋಳಿ, ಶಿವಾನಂದ ಸಂಸುದ್ದಿ, ಪ್ರಕಾಶ ಕಣಗಲಿ, ಬಂಡು ಹತನೂರೆ, ಮುಖ್ತಾರ ನದಾಫ, ಸಂದೀಪ ಪಾಟೀಲ, ಸಿದ್ಧವೀರ ಖಜ್ಜನವರ, ಶಂಕರ ಹೆಗಡೆ, ಡಾ. ಸಂತೋಷಕುಮಾರ ಖಜ್ಜನವರ ಹಾಗೂ ಸಂಸ್ಥೆಯ ಸಂಚಾಲಕರು ಉಪಸ್ಥಿತರಿದ್ದರು. 


ಸುದ್ದಿ ಓದಿ