ಬಳ್ಳಾರಿ

ಕರ್ನಾಟಕ ಜನಸೈನ್ಯದ ಕಛೇರಿ ಉದ್ಘಾಟನೆ

ಕರ್ನಾಟಕ ಜನಸೈನ್ಯದ ಕಛೇರಿ ಉದ್ಘಾಟನೆ

ಬಳ್ಳಾರಿ 21: ಕರ್ನಾಟಕ ಜನಸೈನ್ಯದ ಕಛೇರಿ ಉದ್ಘಾಟನೆಯನ್ನು ಕಲ್ಯಾಣಸ್ವಾಮಿ ಮಠದ ಶ್ರೀ ಕಲ್ಯಾಣಸ್ವಾಮಿ ಹಾಗೂ ಸಂಸ್ಥಾಪಕ ರಾಜ್ಯಾಧ್ಯ,ಕ್ಷ ಕೆ.ಎರ್ರಿಸ್ವಾಮಿ ಅವರು ನೆರವೇರಿಸಿದರು. ಕರ್ನಾಟಕ ಜನಸೈನ್ಯ ಸಂಘಟನೆಯು 2014ರಲ್ಲಿ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದಿ. ಹೆಚ್‌.ಎಸ್‌.ದೊರೆಸ್ವಾಮಿರವರ ಅಮೃತ ಹಸ್ತದಿಂದ ಆರಂಭಗೊಂಡ ಸಂಘಟನೆಯ ಕಛೇರಿಯು ಇನ್‌ಫೆಂಟ್ರಿ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಘಟನೆಯ ಬೆಳವಣಿಗೆ, ಬಲವರ್ಧನೆ ಹಾಗೂ ಕಾರ್ಯಕರ್ತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಂಘಟನೆಯ ಪದಾಧಿಕಾರಿಗಳ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಇದೀಗ ಕೆ.ಸಿ.ರಸ್ತೆಯಲ್ಲಿರುವ ರಾಘವಕೃಷ್ಣ ಸಂಕೀರ್ಣದಲ್ಲಿ ನೂತನ ಕಛೇರಿಯನ್ನು ಆರಂಭಿಸಲಾಯಿತು.  

ನಗರದ ಯಾವುದೇ ಮೂಲಭೂತ ಸೌಲಭ್ಯಗಳ ವಂಚಿತರು, ತಮ್ಮ ಸೌಲಭ್ಯಗಳ ಈಡೇರಿಕೆಗಾಗಿ ಸಂವಿಧಾನ ಅಡಿಯಲ್ಲಿ ಹೋರಾಟಗಳ ಮುಖಾಂತರ ಅವರಿಗೆ ನ್ಯಾಯ ದೊರಕಿಸಿಕೊಡಲು ಭೇಟಿ ನೀಡಬಹುದಾಗಿದೆ.  

ಈ ಸಂದರ್ಭದಲ್ಲಿ ಗಣ್ಯ ವ್ಯಕ್ತಿಗಳಾಗಿ ತಾರಾನಾಥ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ರಾಜಶೇಖರ ಎಸ್‌.ಗಾಣಿಗೇರ, ಡಾ. ಶಿವಕುಮಾರ್, ಪ್ರಾಂಶುಪಾಲರಾದ ಸಯ್ಯದ ಫಾತಿಮಾ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಸುಧಾಕರ್ ದೇಸಾಯಿ, ಪಾಲಿಕೆ ಸದಸ್ಯ ಗೋವಿಂದರಾಜುಲು, ಪ್ರಭಂಜನ್‌ಕುಮಾರ್, ಪಿ.ಗಾದೆಪ್ಪ, ಶ್ರೀ ಕನಕದುರ್ಗಮ್ಮ ದೇವಸ್ಥಾನ ಅರ್ಚಕರಾದ ರಾಜಶೇಖರ್, ಖ್ಯಾತ ವೈದ್ಯ  ಡಾ. ಎಸ್‌.ರಮೇಶ್ ಕುಮಾರ್, ಸಮಾಜ ಸೇವಕರಾದ ನಾಗರಾಜರೆಡ್ಡಿ ಹಾಗೂ ಸಂಘಟನೆಯ ಪದಾಧಿಕಾರಿಗಳಾದ ರಾಜ್ಯ ಉಪಾಧ್ಯಕ್ಷರಾದ ಬಿ.ಹೊನ್ನೂರ​‍್ಪ, ಫಯಾಜ್‌ಭಾಷ, ನಾಸೀರ್, ಖಾಜಾ, ಆಯೇಷಾ ಸಿದ್ದಿಖಾ, ಲಕ್ಷ್ಮಿದೇವಿ, ಮಂಜು, ರಾಜು, ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ