ಶಿಗ್ಗಾವ್

ವಿದ್ಯುತ್ ಗುತ್ತಿಗೆದಾರ ಸಂಘದ ಕಚೇರಿ ಉದ್ಘಾಟನೆ

ವಿದ್ಯುತ್ ಗುತ್ತಿಗೆದಾರ ಸಂಘದ ಕಚೇರಿ ಉದ್ಘಾಟನೆ

ಶಿಗ್ಗಾವಿ 22: ಬಹು ವರ್ಷಗಳ ಕನಸಾಗಿದ್ದ ಗುತ್ತಿಗೆದಾರ ಸಂಘದ ತಾಲೂಕ ಕಚೇರಿ ಉದ್ಘಾಟನೆ ಕುಮಾರ ಸ್ವಾಮಿಗಳ ಸಾನಿಧ್ಯ ಹಾಗೂ ರಾಜ್ಯಾಧ್ಯಕ್ಷ ರಮೇಶ್ ಅವರ ಉಪಸ್ಥಿತಿಯಲ್ಲಿ ಹಾನಗಲ್ ತಾಲೂಕು ಅಧ್ಯಕ್ಷ ಶಿವಯೋಗಿ ಮಲ್ಲಿಗಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. 

ಸಂಘದ ಸೌಲಭ್ಯ ಕುರಿತು ರಾಜ್ಯಾಧ್ಯಕ್ಷ ಸಿ ರಮೇಶ್ ಸದಸ್ಯರಿಗೆ ತಿಳಿಸಿದರು ಗುತ್ತಿಗೆದಾರರ ಪ್ರಮುಖ ಸಮಸ್ಯೆಗಳಾದ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ವಿದ್ಯುತ್ ಅವಘಡಗಳಲ್ಲಿ ಗುತ್ತಿಗೆದಾರರನ್ನು ಹೊಣೆಯಾಗಿಸುವ ಪದ್ಧತಿ ಇದೆ ಹಾವೇರಿ ಜಿಲ್ಲೆಯಲ್ಲಿ ಅಧಿಕಾರಿಗಳು ಹಾಗೂ ವಿದ್ಯುತ್‌ಗುತ್ತಿಗೆದಾರ ಸಂಬಂಧ ಅತ್ಯಂತ ಅನ್ಯೋನ್ಯವಾಗಿದ್ದು ಗುತ್ತಿಗೆದಾರರನ್ನು ತಮ್ಮ ಸಹಪಾಠಿಗಳಂತೆ ಗೌರವಿಸುತ್ತಾರೆ ಆದರೆ ವಿದ್ಯುತ್ ಅವಘಡ ಸಂಭವಿಸಿದಾಗ ಅಧಿಕಾರಿಗಳು ನೌಕರರು ಮತ್ತು ಗುತ್ತಿಗೆದಾರರ ಮಧ್ಯೆ ಸಂಘರ್ಷ ಉಂಟು ಮಾಡುತ್ತಿದೆ ವಿನಾಕಾರಣ ಜನರ ಮತ್ತು ಗ್ರಾಹಕರ ಆಕ್ರೋಶಕ್ಕೆ ಗುರಿಯಾಗಬೇಕಿದೆ ಈ ಕುರಿತುರಾಜ್ಯ ಸಮಿತಿಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಬೇಕು ಪರಿಹಾರ ಹುಡುಕಿಕೊಡಬೇಕು ಎಂದು ಜೊತೆಗೆ ಗುತ್ತಿಗೆದಾರರಿಗೆ ಯಾವುದೇ ರೀತಿಯ ಜೀವ ಭದ್ರತೆಇರುವುದಿಲ್ಲ ಸಂಘದ ವತಿಯಿಂದ ಅಥವಾ ಸರ್ಕಾರದ ಮಟ್ಟದಲ್ಲಿಜೀವ ಭದ್ರತೆಗೆ ಚರ್ಚಿಸಿ ಗುತ್ತಿಗೆದಾರರ ಅನುಕೂಲಕ್ಕೆ ಬರಬೇಕೆಂದು ರಾಜ್ಯ ಸಂಘದ ಪೂರ್ವ ನಿಯೋಜಿತ ಕೇಂದ್ರಕಾರ್ಯಕಾರಿ ಸಮಿತಿ ಸದಸ್ಯ ಮಂಜುನಾಥ್ ಮಣ್ಣನವರ್ ರಾಜ್ಯಾಧ್ಯಕ್ಷರಿಗೆ ಹಾಜರಿದ್ದ ಗುತ್ತಿಗೆದಾರರ ಮುಖಾಂತರ ಮನವಿ ಪತ್ರ ಸಲ್ಲಿಸಿದರು. 

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿ ರಮೇಶ್ ಗುತ್ತಿಗೆದಾರರ ಜೀವ ಭದ್ರತೆಗೆ ಹಲವು ಆಯಾಮಗಳಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಜೊತೆಗೆ ವಿದ್ಯುತ್ ಅವಘಡಗಳ ಕುರಿತುರಾಜ್ಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಜೊತೆಗೆ ವಿದ್ಯುತ್ ಕಂಪನಿಗಳ ಮಟ್ಟದಲ್ಲಿ ಚರ್ಚಿಸಿ ಗುತ್ತಿಗೆದಾರರರ ಕ್ಷಣೆಗೆ ಕ್ರಮ ಕೈಗೊಳ್ಳುವಲಾಗುವುದು ಎಂದು ಭರವಸೆ ನೀಡಿದರು. ಗುತ್ತಿಗೆದಾರರು ಸಂಘದ ಸೌಲಭ್ಯವನ್ನು ಪಡೆಯಬೇಕು ಎಂದು ಹೇಳಿದರು ಕಾರ್ಯಕಾರಿ ಸಮಿತಿ ಸದಸ್ಯ ಆನಂದ ಹಾದಿಮನಿ ಮಾತನಾಡಿ ಸಂಘದ ಸೌಲಭ್ಯ ಪಡೆದುಕೊಳ್ಳುವ ಗುತ್ತಿಗೆದಾರರು ಸಂಘಕ್ಕಾಗಿ ಶ್ರಮಿಸಬೇಕೆಂದು ಹೇಳಿದರು ಹಾನಗಲ್ ತಾಲೂಕ ಅಧ್ಯಕ್ಷ ಶಿವಯೋಗಿ ಮಲ್ಲಿಗಾರ್ ಮಾತನಾಡಿ ಹಾನಗಲ್ ಹೆಸ್ಕಾಂ ಇಲಾಖೆಯ ಸಂಪೂರ್ಣ ಸಹಕಾರಇತರ ಇಲಾಖೆಗಳ ಸಹಕಾರ ಜೊತೆಗೆ ಸಂಘದ ಸದಸ್ಯರ ಸಹಕಾರ ಇರುವುದರಿಂದ ಇಂದು ತಾಲೂಕ ಸಂಘದ ಕಚೇರಿ ಉದ್ಘಾಟಿಸಲಾಗಿದೆ ಸದಸ್ಯತ್ವ ಮಾಡಿಕೊಂಡು ಸಂಘಕ್ಕೆ ಶ್ರಮಿಸುವಜೊತೆಗೆ ಸಂಘದಗೌರವ ಕಾಪಾಡಿಕೊಳ್ಳಬೇಕು ಎಂದು ಹೇಳಿದರು ಜಿಲ್ಲಾಧ್ಯಕ್ಷರಾಜು ಪುಣ್ಯವಂತರ  ಮಾತನಾಡಿದರು ಇದೇ ಸಂದರ್ಭದಲ್ಲಿ ಹಾವೇರಿ ವಿಭಾಗೀಯ ಕಚೇರಿಯ ಕಾರ್ಯನಿರ್ವಾಕ ಇಂಜಿನಿಯರ್ ಕೃಷ್ಣಪ್ಪ ಅವರನ್ನು ಹಾಗೂ ಹಾನಗಲ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆನಂದ ಹಾಗೂ ವಿವಿಧ ಅಧಿಕಾರಿಗಳು ಹಾಗೂ ನೌಕರರನ್ನು ಸಂಘದ ಕಚೇರಿ ಉದ್ಘಾಟನೆಗೆ  ಸಂಪೂರ್ಣ ಸಹಕಾರ ನೀಡಿರುವುದನ್ನು ಸ್ಮರಿಸಿಕೊಂಡು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದ ಹಾನಗಲ್‌ತಾಲೂಕ ಕಾರ್ಯದರ್ಶಿ ವೀರೇಶ್ ಹಿರೇಮಠ ಮಾಜಿ ಅಧ್ಯಕ್ಷ ಏಜಿ ನಾಯರ್ ಮಂಜುನಾಥ್‌ ಅಂಗಡಿ ನಾಗರಾಜ್ ನೀಲಣ್ಣನವರ್ ನಾಗಭೂಷಣ್ ಹಿರೇಮಠ ಶಿಗ್ಗಾವ್ ಹಾವೇರಿ ಬ್ಯಾಡಗಿ ತಾಲೂಕಿನ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ