ಬಳ್ಳಾರಿ

ಕಾಲೇಜಿನ ಹಳೆ ವಿದ್ಯಾರ್ಥಿಗಳ ಜ್ಞಾನ ಸಿಂಚನ ಸಂಘ ಉದ್ಘಾಟನೆ

ಕಾಲೇಜಿನ ಹಳೆ ವಿದ್ಯಾರ್ಥಿಗಳ ಜ್ಞಾನ ಸಿಂಚನ ಸಂಘ ಉದ್ಘಾಟನೆ

ಬಳ್ಳಾರಿ ಫೆ 19: ವಿದ್ಯಾರ್ಥಿಗಳ ಸಂಘವೂ ಮಾರ್ಗದರ್ಶಕವಾಗಲಿ, ಹಳೇ ವಿದ್ಯಾರ್ಥಿಗಳ ಭವಿಷ್ಯ, ಜೀವನ ಸದ್ಬಳಕೆಗೆ ಮುಂದಾಗಿ ಎಂದು  

ಯುವ ಶಕ್ತಿಯ ರಂಜಿತ್ ಕುಮಾರ್ ಬಂಡಾರು ಕರೆ ನೀಡಿದರು.  

ಸರಳಾದೇವಿ ಸತೀಶ್ ಚಂದ್ರ ಆಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೇ ವಿದ್ಯಾರ್ಥಿಗಳ “ಜ್ಞಾನ ಸಿಂಚನ” ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರುಅಧ್ಯಾಪಕರು ನೀಡುವ ಮಾರ್ಗದರ್ಶನ, ಅದೇ ರೀತಿ ನಿಮ್ಮ ಹಿರಿಯ ವಿದ್ಯಾರ್ಥಿಗಳು ಹೊರಗೆ ಹೋಗಿ ಉತ್ತಮ ಜೀವನ ರೂಪಿಸಿಕೊಂಡವರಿಂದ ನೀವು ಮಾರ್ಗದರ್ಶನ ಪಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅನೇಕ ವಿಶ್ವವಿದ್ಯಾಲಯಗಳಿಗೆ, ಐಐಟಿಗಳಿಗೆ ಉತ್ತಮ ಹೆಸರು ಬರಲು ಹಳೇ ವಿದ್ಯಾರ್ಥಿಗಳ ಸಂಘದ ಸಹಕಾರ ಮುಖ್ಯವಾಗಿದೆ. ಅದೇ ರೀತಿ ಈ ಸಂಘದಲ್ಲಿನ ರಾಜಕೀಯ, ಪೊಲೀಸ್, ನ್ಯಾಯಾಂಗ, ಮಾಧ್ಯಮ ಮೊದಲಾದ ಕ್ಷೇತ್ರಗಳಲ್ಲಿನ ಕಾರ್ಯನಿರ್ವಹಿಸುವವರು. ಕಾಲೇಜಿನ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದರು.   

ತರುವಾಯ ಸಂಘದ ಗೌರವ ಅಧ್ಯಕ್ಷರೂ ಆಗಿರುವ  ಈ ಕಾಲೇಜಿನ ಪ್ರಾಂಶುಪಾಲ ಕೆ.ಮಂಜುನಾಥ ರೆಡ್ಡಿ ಅವರು ಮಾತನಾಡಿ. 1985ರಲ್ಲಿ ಕಾಲೇಜು 85 ವಿದ್ಯಾರ್ಥಿಗಳಿಂದ ಆರಂಭವಾಗಿದೆ. ನಂತರ  ಕಳೆದ ವರ್ಷ 5550 ವಿದ್ಯಾರ್ಥಿಗಳಿದ್ದರು. ಕಾಲೇಜಿನಲ್ಲಿ ಶೇ. 60 ವಿದ್ಯಾರ್ಥಿನಿಯರು ಈ ಆಂಗ್ಲ ಭಾಷೆ ಕಲಿಕೆಗಾಗಿ ವರ್ಷದಿಂದ ಲಾಂಗ್ವೇಜ್ ಲ್ಯಾಬ್ ಆರಂಭಿಸಿದೆ, ಬಿಸಿನೆಸ್ ಲ್ಯಾಬ್ ಇದೆ. ವಿದ್ಯಾರ್ಥಿಗಳಿಗೆ ಅಗತ್ಯವಾದ ಬಹುತೇಕ ಸೌಲಭ್ಯಗಳನ್ನು ಒದಗಿಸಿದೆ. ಇಲ್ಲಿ ಈಗ ಹಳೇ ವಿದ್ಯಾರ್ಥಿಗಳ ಸಂಘ ಉದ್ಘಾಟನೆಗೊಂಡಿರುವುದು ಸಂತಸದ ಸಂಗತಿ ಎಂದರು.  

 ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವೆಂಕಟೇಶ್ ಹೆಗಡೆ ನಮ್ಮ ದಿನದಲ್ಲಿ ಇಲ್ಲಿನ ವಿದ್ಯಾರ್ಥಿಗಳ ಹಮ್ಮಿಕೊಂಡಿದ್ದ ಪಾಸ್ತಾವಿಕವಾಗಿ ಮಾತನಾಡಿದ ಈ ವರ್ಷ 4600 ವಿದ್ಯಾರ್ಥಿಗಳಿದ್ದು ಇದು ರಾಜ್ಯದಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಕಾಲೇಜಾಗಿದೆ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚು ಎಂದರು. ಸಂಘದಿಂದ ಮುಂದಿನ ದಿನಗಳಲ್ಲಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಹಾಗೂ  ಕಾರ್ಯಕ್ರಮ ಕೈ ಕೊಳ್ಳಲಿದೆಂದು ತಿಳಿಸಿದರು. 

ಸಂಘದ ಉಪಾಧ್ಯಕ್ಷೆ ಶೋಭಾ ಕಾಳಿಂಗ ಅವರು, ಸಂಘದ ಹೆಸರಿನ ತಾತ್ಪರ್ಯ, ಸಂಘದಿಂದ ವಿದ್ಯಾರ್ಥಿಗಳಿಗೆ ಕೌಶಲ, ಕೈಗೊಳ್ಳಬೇಕಾದ ವಿವಿಧ ಬಗೆಯ ಅಭಿವೃದ್ಧಿ ಸೇರಿದಂತೆ ಕಾರ್ಯಚಟುವಟಿಕೆಗಳ ಕುರಿತು ತಿಳಿಸಿದರು.  

ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ಹಿರಿಯ ಪತ್ರಕರ್ತ ವೀರಭದಗೌಡ, ಪೊಲೀಸ್ ಇಲಾಖೆಯ ದಿನಕರ್ ಅವರಿಗೆ ಸನ್ಮಾನಿಸಲಾಯಿತು. ಹಾಗೂ  ಉಪನ್ಯಾಸಕ ಕೆ.ಗಂಗಾಧರ್, ದೇಶದ ದಿವ್ಯಾಂಗ ಕ್ರಿಕೆಟ್ ಟೀಮ್‌ನ  ಆರಂಭಿಕ ಆಟಗಾರ ತಿಪ್ಪೆಸ್ವಾಮಿ ಅವರನ್ನು ಗೌರವಿಸಲಾಯಿತು. ಸಾಧನೆಗಳನ್ನು ಜೀವನದ ಕಾರ್ಯಾಧ್ಯಕ್ಷ ಆರ್‌.ವೈ.ಹನುಮಂತರೆಡ್ಡಿ, ಎನ್‌.ವೀರಭದಗೌಡ ಸಂಗೀತ ಮತ್ತು ಮಧು ಮತ್ತವರ ತಂಡ ಪ್ರಾರ್ಥನೆ ಮತ್ತು ಕಾರ್ಯದರ್ಶಿ ಅರುಣಾಚಲಂ ವಂದನಾರೆ​‍್ಣ ಮಾಡಿದರು.  

ವೇದಿಕೆಯಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ಶೈಲಜ, ಸಂಘದ ಸಂಚಾಲಕ ಗುರುಬಸಪ್ಪ, ಎಂ.ಕಿಶೋರ  ಕುಮಾರ್, ಉಪಾಧ್ಯಕ್ಷ ಗಾಜುಲ ಆನಂದ ಕುಮಾರ್, ಪ್ರಧಾನ ಕಾರ್ಯದರ್ಶಿ ಖಜಾಂಚಿ ಇದ್ದರು. ಕಾಲೇಜಿನ ನಾಟಕ ವಿಭಾಗದ ವಿದ್ಯಾರ್ಥಿಗಳು  

ನಾಡಗೀತೆ ಪ್ರಸ್ತುತಪಡಿಸಿದರು. ಉಪನ್ಯಾಸಕ ಕೆ.ಗಂಗಾಧರ ಅವರಿಂದ ಕಾರ್ಯಕ್ರಮ ನಿರೂಪಣೆ ನಡೆಯಿತು. ಸಂಘದ ಸಹ ಕಾರ್ಯದರ್ಶಿ ಅರುಣ ಚಲಂ ವಂದನಾರೆ​‍್ಣ ಮಾಡಿದರು. ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.  

ಕಾಲೇಜಿನಲ್ಲಿ ಓದಿರುವಂತಹ ಹೆಚ್ಚಿನ ರೀತಿಯಲ್ಲಿ ಗ್ರಾಮೀಣ ಭಾಗದವರು ವಿದ್ಯಾರ್ಥಿಗಳು ಆಗಿದ್ದಾರೆ. ನಂತರ ಬಡತನ ಸ್ಥಿತಿಯಲ್ಲಿ ಇರುವವರು ಇದ್ದಾರೆ. ಆದ್ದರಿಂದ ಒಳ್ಳೆಯ ಶಿಕ್ಷಣ ಪಡೆದು ಪ್ರತಿಯೊಂದು ಇಲಾಖೆಗಳಲ್ಲಿ ಉನ್ನತ ಹುದ್ದೆಗಳಿಗೆ ಸೇರಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಪೊಲೀಸ್ ಇಲಾಖೆಯ ದಿನಕರ್ ರವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. 


ಸುದ್ದಿ ಓದಿ