ತಾಳಿಕೋಟಿ

ಬಸ್ ತಂಗುದಾಣದ ಉದ್ಘಾಟನೆ : ಧರ್ಮ, ದಾನ ದೇಶದ ಅವಿಭಾಜ್ಯ ಅಂಗ : ಗುರಲಿಂಘ ಶಿವಾಚಾರ್ಯರು

ಬಸ್ ತಂಗುದಾಣದ ಉದ್ಘಾಟನೆ : ಧರ್ಮ, ದಾನ ದೇಶದ ಅವಿಭಾಜ್ಯ ಅಂಗ : ಗುರಲಿಂಘ ಶಿವಾಚಾರ್ಯರು

ತಾಳಿಕೋಟೆ03: ದೇಶದ ಪರಂಪರೆ, ಸಂಸ್ಕೃತಿಯೇ ದಾನವಾಗಿದೆ. ಧಾನ ನೀಡಿದ ವಸ್ತು ಸದುಪಯೋಗ ಆದಾಗ ದಾನ ನೀಡಿದವರು ನೆಮ್ಮದಿಯಿಂದ ಬದುಕುತ್ತಾರೆ. ಧರ್ಮ ಮತ್ತು ದಾನ ದೇಶದ ಅವಿಭಾಜ್ಯ ಅಂಗ ಎಂದು ಗುಂಡಕನಾಳ ಬ್ರಹನ್ಮಠದ ಗುರಲಿಂಘ ಶಿವಾಚಾರ್ಯರು ಹೆಳಿದರು. 

ಅವರು ಪಟ್ಟಣದ ದಿ.ತಾಳಿಕೋಟಿ ಸಹಕಾರಿ ಬ್ಯಾಂಕ.ಲಿ ವತಿಯಿಂದ ಬಸವೇಶ್ವರ ವೃತ್ತ ಮತ್ತು ಅಂಬೇಡ್ಕರ ವೃತ್ತದಲ್ಲಿ ನಿರ್ಮಾಣವಾದ ಬಸ್ ತಂಗುದಾಣದ ಉದ್ಘಾಟನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. 

ಬ್ಯಾಂಕಗಳಲ್ಲಿ ಹೂಡಿಕೆ ಮಾಡಿದ ವ್ಯಕ್ತಿಯು ಲಾಭವನ್ನು ಲೆಕ್ಕಾಚಾರ ಹಾಕುತ್ತಾನೆ. ಬ್ಯಾಂಕಗಳ ನಿರ್ದೇಶಕ ಮಂಡಳಿ ಸಹ ಆಭದ ಲೆಕ್ಕಾಚಾರ ಮಾಡಿ, ಲಾಭದಲ್ಲಿ ಬಂದ ಹಣವನ್ನು ಹಂಚಿಕೆ ಮಾಡಿಕೊಳ್ಳುತ್ತಾರೆ. ಆದರೆ ದಿ.ತಾಳಿಕೋಟಿ ಸಹಕಾರಿ ಬ್ಯಾಂಕ.ಲಿ ತನ್ನ ಉಳಿತಾಯದಲ್ಲಿ ಸಮಾಜಕ್ಕಾಗಿ ಖರ್ಚು ಮಾಡುತ್ತದೆ. ಸಮಾಜದಿಂದ ಸಮಾಜಕ್ಕೋಸ್ಕರ ಇರುವ ಏಕೈಕ ಬ್ಯಾಂಕ ಇದಾಗಿದೆ. ಪರೋಪಕಾರ ಶಾಸ್ವತವಾಗಿ ಉಳಿಯುತ್ತದೆ. ದಾನ ನೀಡಿದ ವಸ್ತು ಸದುಪಯೋಗ ಆಗಬೇಕು ಎಂದರು. 

ಬಸವನಬಾಗೇವಾಡಿ ಡಿಎಸ್‌ಪಿ ಅರುಣಕುಮಾರ ಕೋಳೂರ ಮಾತನಾಡಿ, ನಗರದಲ್ಲಿ ವಾಹನ ದಟ್ಟಣೆಯ ನಿಯಂತ್ರಿಸುವ ಸಲುವಾಗಿ ಬಸ್ ನಿಲ್ದಾಣ ಉಪಯೋಗವಾಗುತ್ತದೆ. ಜನ ಸ್ನೇಹಿಯಾಗಿ ಮಾಡಿದ್ದಾರೆ. ಬಸ್ ಶೆಲ್ಪಟರ ಸದುಪಯೋಗಿಸಿಕೊಳ್ಳಿ, ದುರ್ಬಳಕೆ ಬೇಡ, ಬಸ್ ಶೆಲ್ಟರ ಮುಂದೆ ವಾಹನಗಳನ್ನ ನಿಲ್ಲಿಸಬೇಡಿ. ಸಾರ್ವಜನಿಕರು ಖಾಸಗಿ ವಾಹನಗಳನ್ನು ಬಳಸದೇ ಸರಕಾದ ಬಸ್‌ಗಳನ್ನು ವಾಹನಗಳ ಬಳಕೆ ಮಾಡಬೇಕು. ಸರಕಾರ ರೂಪಿಸಿದ ನೀತಿ ನಿಯಮಗಳನ್ನು ಬಳಸಿದರೆ ಮಾತ್ರ ಅಪಘಾತ ತಪ್ಪಲಿದೆ ಎಂದರು. 

ಸಾರಿಗೆ ಘಟಕದ ವ್ಯವಸ್ಥಾಪಕ ಅಶೋಕಕುಮಾರ ಬೋವಿ ಮಾತನಾಡಿ, ಬಸ್ ನಿಲ್ದಾಣದಿಂದ ಸಾರ್ವಜನಿಕ ಅನಕೂಲವಾಗಲಿದೆ. ಮಳೆ ಗಾಳಿಯಿಂದ ರಕ್ಷಣೆ ಸಿಗಲಿದೆ ಎಂದರು. 

ದಿ.ತಾಳಿಕೋಟಿ ಸಹಕಾರಿ ಬ್ಯಾಂಕನ ಅಧ್ಯಕ್ಷ ವ್ಹಿ.ಎ.ಹಜೇರಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಪರಶುರಾಮ ತಂಗಡಗಿ ವೇದಿಕೆಯ ಮೇಲಿದ್ದರು. ನಿರ್ದೇಶಕರಾದ ಕಾಶಿನಾಥ ಸಜ್ಜನ, ಆಯ್‌.ಬಿ.ಬಿಳೆಬಾವಿ, ಎಚ್‌.ಬಿ.ಬಾಗೇವಾಡಿ, ಡಿ.ಎಸ್‌.ಹೆಬಸೂರ, ಸಿ.ಎಸ್‌.ಯಾಳಗಿ, ಎಸ್‌.ಸಿ.ಪಾಟೀಲ, ಎನ್‌.ಆಯ್‌.ಚಿನಗುಡಿ, ಆರ್‌.ಬಿ.ಕಟ್ಟಿಮನಿ, ಎಸ್‌.ವಾಯ್‌.ಬರದೇನಾಳ ಸೇರಿದಂತೆ ಪ್ರಮುಖರು ಇದ್ದರು. 

ಕಿರಿಯ ಸಹಾಯಕಿ ಟಿ.ಬಿ.ಸಜ್ಜನ ಪ್ರಾರ್ಥಿಸಿದರು. ಪ್ರಭಾರಿ ಪ್ರಧಾನ ವ್ಯವಸ್ಥಾಪಕಿ ಬಿ.ಕೆ.ಮಣೂರ ಸ್ವಾಗತಿಸಿದರು. ಲೆಕ್ಕಿಗ ಆರ್‌.ಎಸ್‌.ಬಿರಾದಾರ ನಿರೂಪಿಸಿದರು. ಹಿರಿಯ ಸಹಾಯಕಿ ಎಸ್‌.ಡಿ.ದೇಸಾಯಿ ವಂದಿಸಿದರು. 


ಸುದ್ದಿ ಓದಿ