ಮುಂಡರಗಿ

ಜೀವನ ಚರಿತ್ರೆ ಪ್ರವಚನ ಕಾರ್ಯಕ್ರಮ ಉದ್ಘಾಟನೆ

ಜೀವನ ಚರಿತ್ರೆ ಪ್ರವಚನ ಕಾರ್ಯಕ್ರಮ ಉದ್ಘಾಟನೆ

ಮುಂಡರಗಿ 05:  ಹಾನಗಲ್ ಗುರುಕುಮಾರ ಶಿವಯೋಗಿಗಳವರ ಪ್ರವಚನ ಒಂದು ಅಪರೂಪದ ಪುರಾಣವಾಗಿದೆ. ದ್ಯಾಂಪೂರ ಚೆನ್ನ ಕವಿಗಳು ಸ್ನಾನ, ಪೂಜಾ ಕ್ರಿಯೇಗಳನ್ನು ಮುಗಿಸಿ ಶುದ್ಧ ಮನಸ್ಸಿನಿಂದ ಸತ್ಯವಾದುದನ್ನೇ ಬರೆಯುತ್ತೇನೆಂದು ಸಂಕಲ್ಪಿಸಿದ ಇದೊಂದು ಹೆಚ್ಚು ಮಹತ್ವ ಪಡೆದುಕೊಂಡಿದೆ ಎಂದು ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಹೇಳಿದರು. 

ಮುಂಡರಗಿ ಜ.ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಜ.ಅ.ಪ್ರವಚನ ಸೇವಾ ಸಮಿತಿ ಏರಿ​‍್ಡಸಲಾದ ಹಾನಗಲ್ ಗುರುಕುಮಾರ ಮಹಾಶಿವಯೋಗಿಗಳವರರ ಜೀವನ ಚರಿತ್ರೆ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶಿರ್ವಚನ ನೀಡಿದರು. 

ಸತ್ಯ ಶರಣರ ಕಥೆ, ಪುರಾಣ, ಕರ್ತೃಗಳಾಗಿ ಬೆಳೆಯಲೆಂದು ಕವಿಗಳಿಗೆ, ಆರ್ಶೀವದಿಸಿದ್ದರಿಂದ ಭಕ್ತಿ, ಅಭಿಮಾನದಿಂದ ಬರೆದ ಸತ್ಯಸಂಗತಿಯನ್ನು ಒಳಗೊಂಡಿದೆ. ಅಂತಹ ಪುಣ್ಯರ ಚರಿತ್ರೆ ಆಲಿಸುವುದರಿಂದ ಜೀವನದ ಬೆಳವಣಿಗೆಗೆ ಸಹಕಾರಿಯಾಗಿದೆ. 

ಈ ವೇಳೆ ಮಠದ ಭಕ್ತರಾದ ಕರಬಸಪ್ಪ ಹಂಚಿನಾಳ ಅವರ ಬಹುಮುಖ ವ್ಯಕ್ತಿತ್ವ, ಸಹಾಯ ಸಹಕಾರವನ್ನು ಪೂಜ್ಯರು ಪ್ರಶಂಸನೆ ಮಾಡಿದರು. 

ಡಾ.ಶ್ರೀ ಹಿರಿಯ ಶಾಂತವೀರ ಮಹಾಸ್ವಾಮಿಗಳು ಮಾತನಾಡಿ, ಹಾನಗಲ್ಲ ಗುರುಕುಮಾರ ಶಿವಯೋಗಿಗಳ ಸಾಮಾಜಿಕ ಕಳಕಳಿ, ಕ್ರೀಯಾಶೀಲತೆ ಆಚಾರ, ಸಮಯದ ಸದುಪಯೋಗ ಇಂತಹ ಹಲವಾರು ಕೆಲಸಗಳನ್ನು ಮಾಡಿದ್ದರ ಫಲವಾಗಿ ನಾಡಿನಾಧ್ಯಂತ ಹಲವಾರು ಸ್ವಾಮಿಗಳು ಮಠಾಧೀಶರಾಗಿ ಮಹಾತ್ಮರಾಗಲು ಸಾಧ್ಯವಾಯಿತು ಎಂದರು. 

ವೀರಶೈವ  ಧರ್ಮ ಸಂಘಟನೆಗಾಗಿ ಶ್ರಮಿಸಿದರು. ವೀರಶೈವ ಸಾಹಿತ್ಯ ಸಂಪತ್ತು ಬೆಳೆದು ಬರಲು, ಸಾಧ್ಯವಾಗಿ ಎಲ್ಲ ಧರ್ಮಿಯರಲ್ಲೂ ಜಾಗೃತ ಉಂಟುಮಾಡಲು ಸಾಧ್ಯವಾಯಿತು.ಪೂಜ್ಯರು ಮಾಡಿದ ಕೆಲಸ ಇತಿಹಾಸ ಅವರ ಪುರಾಣ ಗ್ರಂಥದಿಂದ ಪ್ರಭಾವಿತರಾಗಲು  ಸಾಧ್ಯವಾಗುವದೆಂಬ ಭಾವನೆ ಇಂದ ಮುಂಡರಗಿ ಪೂಜ್ಯರು  ಶ್ರೀಮಠದಲ್ಲಿ ಶ್ರಾವಣ ಮಾಸದಲ್ಲಿ ಭಕ್ತರಿಗೆ  ಅನುಕೂಲವಾಗಲಿ ಎಂದು ಪ್ರವಚನ ಪ್ರಾರಂಭಿಸಿದ್ದು ಅದರ ಸದುಪಯೋಗ ಮಾಡಿಕೊಳ್ಳಬೇಕೆಂದರು. 

ಅಜ್ಞಾನಕ್ಕೆ ಮಾರು ಹೋಗದೇ  ಜ್ಞಾನ, ಅರಿವು ಸಹನೆ ಕಡೆಗೆ ಹೆಚು ಗಮನ ಹರಿಸಿದರೇ,  ಮನುಷ್ಯನ ಬದುಕಿನಲ್ಲಿ, ಶಾಂತಿ ಸಮೃದ್ಧಿ ಸಾಧಿಸಲು ಸಾಧ್ಯವೆಂದರು. 

ಪ್ರವಚನಕಾರರಾಗಿ ಶಂಭುಲಿಂಗ ಶಾಸ್ತ್ರೀಗಳು ಆಗಮಿಸಿ, ಗುರುಕುಮಾರ ಶಿವಯೋಗಿಗಳ ಕುರಿತು ಮಾತನಾಡಿದರು. 

ಪ್ರಾಸ್ತಾವಿಕವಾಗಿ ಜ ಅ ವಿಧ್ಯಾಸಮಿತಿ ಆಡಳಿತಾಧಿಕಾರಿ, ಡಾ ಬಿ ಜಿ ಜವಳಿ ಮಾತನಾಡಿ, ಮುಂಡರಗಿ ಶ್ರೀಮಠದ ಪರಂಪರೆ ತಿಳಿಸಿದರು. 

ವೇದಿಕೆಯಲ್ಲಿ ಕರಬಸಪ್ಪ ಹಂಚಿನಾಳ, ಪುರಸಭಾ ಉಪಾಧ್ಯಕ್ಷ  ಶಿವಪ್ಪ ಚಿಕ್ಕಣ್ಣವರ, ಕಸಾಪ ಅಧ್ಯಕ್ಷ  ಪ್ರೋ ಎಂ ಜಿ ಗಚ್ಚಣ್ಣವರ , ಪ್ರಾರಂಭೋತ್ಸವದ ಭಕ್ತಿ ಸೇವಾ ಕರ್ತರಾದ ಬಸವರಾಜ ಹೊಸಮನಿ, ವೀರಣ್ಣ ಕಾಗನೂರಮಠ,  ಶ್ರೀಮತಿ ಅನ್ನಪೂರ್ಣಮ್ಮ ಹೂಗಾರ ಉಪಸ್ಥಿತರಿದ್ದು ಪೂಜ್ಯರಿಂದ  ಸನ್ಮಾನಗೊಂಡರು.  

ಪ್ರವಚನ ಸಮಿತಿ ಅಧ್ಯಕ್ಷ ಪ್ರಶಾಂತ ಗುಡದಪ್ಪನವರ, ಉಪಾಧ್ಯಕ್ಷ  ರವೀಂದ್ರ ಪಾಟೀಲ,  ಕಾರ್ಯದರ್ಶಿ ಕುಮಾರ ಬನ್ನಿಕೊಪ್ಪ, ಸಹಕಾರ್ಯದರ್ಶಿ ಅಶೋಕ ಅಂಗಡಿ, ಕೋಶಾಧಿಕಾರಿ ಮಂಜುನಾಥ ಶಿವಶೆಟ್ಟಿ,  ಎಂ ಎಸ್ ಶಿವಶೆಟ್ಟಿ,  ಎಂ ಎಸ್ ಹೊಟ್ಟಿನ,  ಕಾಂತರಾಜ ಹಿರೇಮಠ, ಡಾ ಡಿ ಸಿ ಮಠ, ಆರ್ ಎಂ ಸೈದರ,  ಕೊಟ್ರಯ್ಯ ಹಿರೇಮಠ, ಹಾಲಯ್ಯ ಹಿರೇಮಠ, ಯು ಸಿ ಹಂಪಿಮಠ, ರಾಘವೇಂದ್ರ ಚಿನ್ನಿ, ಬಸವರಾಜ ಬನ್ನಿಕೊಪ್ಪ, ಅಂದಪ್ಪ ಗೋಡಿ, ಎಸ್ ಸಿ ಚಕ್ಕಡಿಮಠ, ವೀರೇಶ ಸಜ್ಜನರ, ಎಸ್ ಎಂ ಹೊಸಮಠ, ಧ್ರುವ ಹೂಗಾರ, ರವಿ ಮಡಿವಾಳರ, ವಿಶ್ವನಾಥ ತಾಮ್ರಗುಂಡಿ  ಮಂಜುನಾಥ ಮುಧೋಳ ಮೊದಲಾದವರು ಉಪಸ್ಥಿತರಿದ್ದರು.ಶಿಕ್ಷಕ ಎಸ್ ಆರ್ ರಿತ್ತಿ ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ