ಬಳ್ಳಾರಿ

ಹೊಸಪೇಟೆ ನಗರ ವ್ಯಾಪ್ತಿಯ 5ನೂತನ ಅಂಗನವಾಡಿ ಕಟ್ಟಡಗಳ ಉದ್ಘಾಟನೆ

ಹೊಸಪೇಟೆ ನಗರ ವ್ಯಾಪ್ತಿಯ 5ನೂತನ ಅಂಗನವಾಡಿ ಕಟ್ಟಡಗಳ  ಉದ್ಘಾಟನೆ

ಬಳ್ಳಾರಿ 28: ಜಿಲ್ಲಾ ಖನಿಜ ನಿಧಿ ಅಡಿ  ವಿಜಯನಗರ ಜಿಲ್ಲೆಯ ಹೊಸಪೇಟೆ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ 05 ನೂತನ ಅಂಗನವಾಡಿ ಕಟ್ಟಡಗಳನ್ನು ಪ್ರವಾಸೋದ್ಯಮ,ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಆನಂದಸಿಂಗ್ ಅವರ ಆಪ್ತಕಾರ್ಯದರ್ಶಿ ಧರ್ಮೇಂದ್ರಸಿಂಗ್ ಅವರು ಶುಕ್ರವಾರ ಉದ್ಘಾಟಿಸಿದರು. 

ಹೊಸಪೇಟೆ ನಗರದ 8ನೇ ವಾರ್ಡ್‌-4ನೇ ಕೇಂದ್ರ, 11ನೇ ವಾರ್ಡ್‌-2ನೇ ಕೇಂದ್ರ, 11ನೇ ವಾರ್ಡ್‌-3ನೇ ಕೇಂದ್ರ, 22ನೇ ವಾರ್ಡ್‌-2ನೇ ಕೇಂದ್ರ, ಮತ್ತು 25ನೇ ವಾರ್ಡ್‌-2ನೇ ನೂತನ ಅಂಗನವಾಡಿ ಕಟ್ಟಡಗಳು ನಿರ್ಮಾಣ ಮಾಡಲಾಗಿದೆ. 

ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ಅಶೋಕ ಜೀರೆ, ಹೊಸಪೇಟೆ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಆಯುಕ್ತ ಮನ್ಸೂರ್ ಅಲಿ, ಆಯಾ ವಾರ್ಡಗಳ ನೂತನ ನಗರಸಭೆ ಸದಸ್ಯರುಗಳು, ಪಂಚಾಯತ್‌ರಾಜ್‌ಇಂಜಿನಿಯರಿಂಗ್ ವಿಭಾಗದ ಸುರೇಶ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಅಂಗಡಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಳೆನಾಗಪ್ಪ, ಶಿಶು ಅಭಿವೃದ್ಧಿ ಯೋಜನೆಯ ಸಿಬ್ಬಂದಿ ವರ್ಗದವರು, ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಹಾಗೂ ಆಯಾ ವಾರ್ಡಿನ ಗಣ್ಯರು, ಮಕ್ಕಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ