ಶಿಗ್ಗಾವ್

ಮನುಷ್ಯನ ದೈಹಿಕ- ಮಾನಸಿಕ ಆರೋಗ್ಯಕ್ಕೆ ಯೋಗ ದಿವ್ಯ ಓಷಧಿ

ಮನುಷ್ಯನ ದೈಹಿಕ- ಮಾನಸಿಕ ಆರೋಗ್ಯಕ್ಕೆ ಯೋಗ ದಿವ್ಯ ಓಷಧಿ

ಶಿಗ್ಗಾವಿ/ಗೊಟಗೋಡಿ 18:  ಯೋಗವನ್ನು ದಿನನಿತ್ಯ ನಾವು ರೂಡಿಸಿಕೊಂಡರೆ ದಿನನಿತ್ಯ ಚೈತನ್ಯಭರಿತವಾಗಿ ಇರಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಯೋಗ ಸಹಕಾರಿಯಾಗಬಲ್ಲದು ಎಂದು ಜಾನಪದ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯಾದ ಪ್ರೊ.ಸಿ.ಟಿ. ಗುರುಪ್ರಸಾದ್ ಅವರು ಹೇಳಿದರು.  

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ  5 ದಿನಗಳ ಕಾಲ ನಡೆಯುತ್ತಿರುವ ಯೋಗ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಮ್ಶ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಈ ಶಿಬಿರದಲ್ಲಿ ಯೋಗ ಗುರುಗಳಾದ ಕೆ.ಎಚ್‌.ಬಂಡಿವಡ್ಡರ ಅವರು ಉತ್ತಮವಾಗಿ ಯೋಗ ಆಸನಗಳ ಪ್ರಾತ್ಯಕ್ಷೀಕೆ ನೀಡಲಿದ್ದಾರೆ ಅದನ್ನುತಾವೆಲ್ಲ ಅನುಕರಿಸಿ ಅಭ್ಯಾಸ ಮಾಡಿ ಆರೋಗ್ಯಕರ ಜೀವನ ನಡೆಸಿ ಎಂದರು. 

ಯೋಗ ಶಿಕ್ಷಕರಾದ ಕೆ.ಎಚ್‌.ಬಂಡಿವಡ್ಡರ ಅವರು ಮಾತನಾಡಿ ಕ್ರಿ.ಶ.ಪೂ 200 ದಶಕಗಳ ಹಿಂದೆ ಪತಂಜಲಿ ಗುರುಗಳು ಈ ಯೋಗವನ್ನು ಜಗತ್ತಿಗೆ ಪರಿಚಯಿಸಿದರು. ಸರ್ವರೋಗಕ್ಕೂ ಯೋಗಅಭ್ಯಾಸ ರಾಮಬಾಣವಾಗಿದೆ ಇವತ್ತಿನ ಓಷಧಿ ಪರಂಪರೆಯನ್ನು ತೊಡೆದು ಹಾಕಲು ಯೋಗ ಸಹಕಾರಿಯಾಗಲಿದೆ. ಹಾಗಾಗಿ ದಿ. 21 ಜೂನ್ 2022 ರಂದು ನಡೆಯುವ ಅಂತರಾಷ್ಟ್ರೀಯಯೋಗ ದಿನದ ಅಂಗವಾಗಿ ನಡೆಯುತ್ತಿರುವ ಈ ಶಿಬಿರದಲ್ಲಿ ಯೋಗದ ಬಗ್ಗೆ ಪ್ರಾತ್ಯಕ್ಷಿಕೆ ನೀಡಲು ನನಗೆ ಅವಕಾಶ ನೀಡಿದ ಕುಲಪತಿಗಳಿಗೆ ಧನ್ಯವಾದಗಳು ಎಲ್ಲರೂಕಡ್ಡಾಯವಾಗಿ ದಿನದ ಅರ್ಧಘಂಟೆಯಾದರು ಯೋಗಅಭ್ಯಾಸಕ್ಕೆ ಸಮಯ ನೀಡಿ ಉತ್ತಮ ಆರೋಗ್ಯ ಹೊಂದಿ ಎಂದರು. ಈ ಸಂದರ್ಭದಲ್ಲಿ ಸಹಾಯಕ ಕುಲಸಚಿವ ಷಹಜಾನ ಮುದಕವಿ ವಿಶ್ವವಿದ್ಯಾಲಯದ ಬೋದಕರು, ಬೋದಕೇತರರು ವಿದ್ಯಾರ್ಥಿಗಳು ಹಾಜರಿದ್ದರು. 


ಸುದ್ದಿ ಓದಿ