ಹೊಸ ತಂತ್ರಜ್ಞಾನದ ಸಂಪೂರ್ಣ ಉಪಯೋಗ ನೀಡಿ: ಅಜಿತ
ಚಿಕ್ಕೋಡಿ 16: ಹೊಸ ತಂತ್ರಜ್ಞಾನದ ಸಂಪೂರ್ಣ ಉಪಯೋಗ ನೀಡಿ ಗ್ರಾಮೀಣ ಪ್ರದೇಶದಲ್ಲಿ ಸಮಾಜದ ಕೊನೆಯ ವ್ಯಕ್ತಿಯವರೆಗೆ ಸೇವೆ ನೀಡಲು ಎಲ್ಐಸಿ ಸಂಪೂರ್ಣ ಸಜ್ಜಾಗಿದೆ ಎಂದು ಬೆಳಗಾವಿ ವಿಭಾಗದ ಹಿರಿಯ ವಿಭಾಗಾಧಿಕಾರಿ ಅಜಿತ ವಾರಕರಿ ತಿಳಿಸಿದರು.
ತಾಲೂಕಿನ ಅಂಕಲಿ ಗ್ರಾಮದಲ್ಲಿ 15 ನೆಯ ಸಂಪರ್ಕ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾರುಕಟ್ಟೆ ಫ್ರಭಂಧಕ ಯಶವಂತ ಮುರಾಳ ಮಾತನಾಡಿ, ನಿಗಮದ ಅಭಿವೃದ್ಧಿಪರ ಚಟುವಟಿಕೆಗಳನ್ನು ತಿಳಿಸಿ ನಾಗರಿಕರು ಈ ಸೌಲಭ್ಯ ಪಡೆಯಬೇಕೆಂದು ತಿಳಿಸಿದರು.
ಗ್ರಾಮ ಪಂಚಾಯತ ಹಿರಿಯ ಸದಸ್ಯ ಸುರೇಶ ಪಾಟೀಲ ಮಾತನಾಡಿ, ಅತ್ಯಂತ ತುರುಸಿನ ಸ್ಪರ್ಧಾತ್ಮಕ ದಿನಗಳಲ್ಲಿ ನಿಗಮದ ಪ್ರಗತಿಯನ್ನು ಶ್ಲಾಘಿಸಿದರು.
ಎಲ್ಐಸಿ ಅಭಿವೃದ್ಧಿ ಅಧಿಕಾರಿ ಆನಂದ ಆರ್ವಾರೆ ಅವರು ನಾಗರಿಕರ ಪರವಾಗಿ ಅತಿಥಿಗಳನ್ನು ಸತ್ಕರಿಸಿದರು.
ಅಧಿಕಾರಿಗಳಾದ ಅಜಯ ಶುಕ್ಲಾ, ಸುಧೀರ ಬೆಳಗಲಿ ಹಾಗೂ ಚಿಕ್ಕೋಡಿ ಶಾಖೆಯ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.ಹಿರಿಯ ಶಾಖಾಧಿಕಾರಿ ಎಸ್ ಅರುಣಾಚಲಂ ಕಾರ್ಯಕ್ರಮ ನಿರ್ವಹಿಸಿದರು. ಶಾಖಾಧಿಕಾರಿ ಸಂಜಯ ಮಾನೆ ವಂದಿಸಿದರು.