ಮಂಜರಿವಾಡಿಯಲ್ಲಿ ರಸ್ತೆ ಮತ್ತು ನಾಮದೇವ್ ಮಹಾರಾಜ ಭವನ ನಿರ್ಮಾಣ
ಶಾಸಕ ಗಣೇಶ್ ಹುಕ್ಕೇರಿ ಅವರಿಂದ ಉದ್ಘಾಟನೆ; ಒಂದು ಕೋಟಿಗೂ ಹೆಚ್ಚು ನಿಧಿ
ಮಾಂಜರಿ 24: ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮಂಜರಿ ವಾಡಿಯಲ್ಲಿ ಒಂದು ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಸಿಮೆಂಟ್ ರಸ್ತೆ ನಿರ್ಮಿಸಲಾಗುವುದು. ಮತ್ತೆ ಗ್ರಾಮದಲ್ಲಿ ನಾಮದೇವ ಮಹಾರಾಜ ಭವನ ನಿರ್ಮಾಣಕ್ಕೆ 51 ಲಕ್ಷ ರೂಪಾಯಿಗಳ ಅನುದಾನ ಮಂಜೂರಾಗಿದೆ. ಈ ಕಾಮಗಾರಿಯನ್ನು ಸದಲಗಾ ಶಾಸಕ ಗಣೇಶ ಹುಕ್ಕೇರಿ ಇಂದು ಉದ್ಘಾಟಿಸಿದರು.
ಚಿಕ್ಕೋಡಿ-ಸದಲಗಾ ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ, ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಶಾಸಕ ಪ್ರಕಾಶ್ ಹುಕ್ಕೇರಿ ಅವರ ಮಾರ್ಗದರ್ಶನದಲ್ಲಿ ವಿವಿಧ ಸಮುದಾಯಗಳಿಗೆ ಸಮುದಾಯ ಭವನಗಳು ಮತ್ತು ದೇವಾಲಯಗಳನ್ನು ನವೀಕರಿಸಲಾಗುವುದು ಎಂದು ಶಾಸಕ ಹುಕ್ಕೇರಿ ಹೇಳಿದರು. ಮತಕ್ಷೇತ್ರದ ಸವಾಂರ್ಗಿನ ಅಭಿವೃದ್ಧಿಗಾಗಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ಚಿಕ್ಕೋಡಿ-ಸದಲಗಾ ಕ್ಷೇತ್ರವನ್ನು ರಾಜ್ಯದಲ್ಲಿ ಅಭಿವೃದ್ಧಿ ಹೊಂದಿದ ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡುವುದು ನಮ್ಮ ದೂರದೃಷ್ಟಿಯಾಗಿದೆ. ಅದಕ್ಕಾಗಿ ನಾವು ಪ್ರಯತ್ನಿಸುತ್ತಿದೆ ಎಂದು ಶಾಸಕ ಗಣೇಶ್ ಹುಕ್ಕೇರಿ ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಾಂಡುರಂಗ ಮಾನೆ ಮಾತನಾಡಿ, ಶಾಸಕರಾದ ಪ್ರಕಾಶ ಹುಕ್ಕೇರಿ, ಗಣೇಶ ಹುಕ್ಕೇರಿತಂದೆ-ಮಗನಿಂದಾಗಿ ಚಿಕ್ಕೋಡಿ-ಸದಲಗಾ ಕ್ಷೇತ್ರದ ಪ್ರತಿ ಗ್ರಾಮಗಳು ಸಮಗ್ರ ಅಭಿವೃದ್ಧಿ ಕಂಡಿವೆ. ಮಾಂಜರಿ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕೋಟಿಗಟ್ಟಲೆ ಅನುದಾನ ಮಂಜೂರಾಗಿದ್ದು, ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿವೆ. ಗುತ್ತಿಗೆದಾರ ಅಲಗಡ್ಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾಂಜರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಂಜಯ ನರವಾಡೆ, ಸುಭಾಷ ತೊರಸೆ ಅಶೋಕ ಘಾಟಗೆ, ಶ್ರೀಧರ ದಾಭೋಳೆ, ನಾಮದೇವ ಲೋಕರೆ, ರಂಜಿತ್ ಹವಳೆ, ಸುಕುಮಾರ ಹವಳೆ, ಮಾರುತಿ ಪವಾರ, ಕೃಷ್ಣ ಚವ್ಹಾಣ, ದಿಲಾವರ ಪಿಂಜಾರ, ಬಾಪು ಖೋತ್, ರಾವಸಾಹೇಬ ನರವಾಡೇ , ಹಾಗೂ ಇತರೆ ನಾಗರಿಕರು ಉಪಸ್ಥಿತರಿದ್ದರು.