ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ
ಶಿಗ್ಗಾವಿ 28: ಇಂದಿನ ಯುವಕರಲ್ಲಿ ಶ್ರದ್ಧೆ, ಶ್ರಮ, ಭಕ್ತಿಯ ಶಕ್ತಿಯ ಕೊರತೆ ಎದ್ದು ಕಾಣುತ್ತಿದ್ದು, ಆಧುನಿಕ ಶೈಲಿಯ ಜೀವನಕ್ಕೆ ಮಾರುಹೋಗುತ್ತಿರುವ ವಿದ್ಯಾರ್ಥಿಗಳು, ಮುಂದಿನ ಭವಿಷ್ಯಕ್ಕಾಗಿ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳನ್ನು ತೊಡಗಿಸುವುದರಿಂದ ವಿದ್ಯಾರ್ಥಿಯ ಬದುಕು ಬಂಗಾರದ ಜೀವನವಾಗುತ್ತದೆ ಎಂದು ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಗೌರಮ್ಮ ಬ ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ 2023, 24 ನೇ ಸಾಲಿನ ಶೈಕ್ಷಣಿಕ ವರ್ಷದ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮಠಮಾನ್ಯಗಳು ಶರಣ ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ ಬೋಧಿಸುವುದರಿಂದ ವಿದ್ಯಾರ್ಥಿಗಳು ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ. ಇಂದು ಕಲ್ಮಶಗೊಂಡಿರುವ ರಾಜಕೀಯ ಮತ್ತು ರಾಜಕಾರಣಿಗಳಿಂದ ಆದಷ್ಟು ದೂರವಿದ್ದು ತಮ್ಮ ಜೀವನವನ್ನು ಪಾವನ ಮಾಡಿಕೊಳ್ಳಬೇಕೆಂದು ಆಶೀರ್ವದಿಸಿದರು.
ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ಧಾರವಾಡದ ಡೀನ್ರಾದ ಡಾ. ಡಿ ಸಿ ವಾಲಿ ಗುರೂಜಿಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಠ್ಯೇಬೋಧನೆ ಜೊತೆಗೆ ಪಠ್ಯೇತರ ಚಟುವಟಿಕೆಗಳ ವಿಭಾಗಗಳು ಕಾಲೇಜಿನಲ್ಲಿ ಇದ್ದು ವಿದ್ಯಾರ್ಥಿಗಳಿಗೆ ದೈಹಿಕವಾಗಿ ಮಾನಸಿಕವಾಗಿ ಸಜ್ಜುಗೊಳಿಸಲು ಪೂರಕವಾಗಿದ್ದು, ವಿದ್ಯಾರ್ಥಿಗಳು ಇವುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕಾಲೇಜಿನ ಪ್ರಾಚಾರ್ಯ ಡಾ. ಚನ್ನಬಸಪ್ಪ ಕುಮ್ಮೂರ ವಹಿಸಿ ಮಾತನಾಡಿ, ನಮ್ಮ ಮಹಾವಿದ್ಯಾಲಯದಲ್ಲಿ ಪಠ್ಯೇತರ ಚಟುವಟಿಕೆಗಳಾದ ಎನ್ ಎಸ್ ಎಸ್. ಸ್ಕೌಟ್ ಮತ್ತು ಗೈಡ್ಸ್. ಸ್ಪೋರ್ಟ್ಸ್. ಪ್ಲೇಸ್ಮೆಂಟ್ ನಂತಹ ಹಲವಾರು ವಿಭಾಗಗಳಿದ್ದು, ಪ್ರತಿ ವರ್ಷ ಪಠ್ಯೇತ್ತರ ಚಟುವಟಿಕೆಗಳ ವಿಭಾಗಗಳಿಂದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ. ಜಿಲ್ಲೆ ರಾಜ್ಯ ಮಟ್ಟದ ರಾಜ್ಯ ಪ್ರಶಸ್ತಿ. ಜಿಲ್ಲಾ ಪ್ರಶಸ್ತಿ. ಯೂನಿವರ್ಸಿಟಿ ಬ್ಲೂ. ಸಂಸ್ಕೃತಿಕ ಪ್ರಶಸ್ತಿಗಳನ್ನು ತರುವ ಕಾಲೇಜು ತಮ್ಮದಾಗಿದ್ದು. ಈಗಾಗಲೇ ನೂರಾರು ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆಯುವಲ್ಲಿ ತಮ್ಮ ಕಾಲೇಜು ಯಶಸ್ವಿಯಾಗಿದ್ದಾರೆ ಎಂದರು. ವಿಶೇಷ ಉಪನ್ಯಾಸಕರಾಗಿ ರಾಜೇಶ್ ಹೊಂಗಲ್ ಆಗಮಿಸಿದ್ದರು. ಪ್ರೊ. ಡಿ ಎಸ್ ಸೊಗಲದ, ಪ್ರೊ. ಶ್ರೀಮತಿ ಪ್ರತಿಭಾ ಗುಂಜಾಲ, ಡಾ. ಮುದುಕಪ್ಪ ಸುಣಗಾರ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.