ಮುಂದಗೋಡ

ಭಕ್ತಿಗೀತೆ ಸ್ಪರ್ಧೆಯಲ್ಲಿ ಸುರೇಶ ಪ್ರಥಮ, ಮುಡೆಣ್ಣವರ ದ್ವಿತೀಯ

ಭಕ್ತಿಗೀತೆ ಸ್ಪರ್ಧೆಯಲ್ಲಿ ಸುರೇಶ ಪ್ರಥಮ, ಮುಡೆಣ್ಣವರ ದ್ವಿತೀಯ

ಲೋಕದರ್ಶನ ವರದಿ 

ಮುಂಡಗೋಡ:ಬೆಂಗಳೂರಿನ ಶಿಕ್ಷಕರ ಕಲ್ಯಾಣನಿಧಿಯಿಂದ ರಾಜ್ಯದ ಪ್ರತಿ ತಾಲೂಕಿನಲ್ಲಿ ಶಿಕ್ಷಕರಿಗೆ ಆಯೋಜಿಸಿರುವ ಸಹಪಠ್ಯ ಚಟುವಟಿಕೆ ಅಂಗವಾಗಿ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಬಿ.ಆರ್‌.ಸಿ. ಇವರ ಸಹಯೋಗದಲ್ಲಿ ಸೋಮವಾರ ಜರುಗಿದ ಭಕ್ತಿಗೀತೆ ಸ್ಪರ್ಧೆಯಲ್ಲಿ ತಾಲೂಕಿನ ಮಳಗಿ ಕೆಪಿಎಸ್‌ನ ಸಂಗೀತ ಶಿಕ್ಷಕ ಸುರೇಶ ಹುದ್ಲೂರ ಪ್ರಥಮ ಮತ್ತು ಪಟ್ಟಣದ ಆದಿಜಾಂಭವ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್‌.ಡಿ.ಮುಡೆಣ್ಣವರ ದ್ವಿತೀಯ ಸ್ಥಾನ ಪಡೆದರು.   

ಬಿ.ಆರ್‌.ಸಿ. ಕ್ಷೇತ್ರ ಸಮನ್ವಯಾಧಿಕಾರಿ ಜಿ.ಎನ್‌.ನಾಯ್ಕ ಪ್ರಶಸ್ತಿಪತ್ರ ವಿತರಿಸಿದರು. ಶಿಕ್ಷಕ ಸುಭಾಸ ಡೋರಿ, ನಾಗರಾಜ ನಾಯ್ಕ ಹಾಗೂ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ