ಬಳ್ಳಾರಿ

ಬಾಬು ಜಗಜೀವನ್ ರಾಮ್ ಪುಣ್ಯ ಸ್ಮರಣೆ

ಬಾಬು ಜಗಜೀವನ್ ರಾಮ್ ಪುಣ್ಯ ಸ್ಮರಣೆ

ಲೋಕದರ್ಶನ ವರದಿ

ಸಿರುಗುಪ್ಪ 06: ದೇಶದ ಪ್ರಗತಿಯಲ್ಲಿ ನಮ್ಮ ಪ್ರಗತಿ ಇದೆ ಅದರ ಉದ್ಧಾರದಲ್ಲಿ ನಮ್ಮ ಉದ್ಧಾರವಿದೆ ಅದರ ವಿಮೋಚನೆಯಲ್ಲಿ ನಮ್ಮ ವಿಮೋಚನೆ ಇದೆ ಭಾರತ ದೇಶ ಮಾನವೀಯತೆಯ ಮೇಲೆ ಕಟ್ಟಲಾಗಿದೆ ಇದು ನಮ್ಮೆಲ್ಲರ ದೇಶ  ಎಂದು ಭಾರತ ಸರ್ಕಾರ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಶನ್ ವಾರ್ತೆ ಮತ್ತು ಪ್ರಸಾರ ಜನ ಸಂಪರ್ಕ ಸಚಿವಾಲಯದ ಜನಾಭಿಪ್ರಾಯ ಮುಖಂಡರು ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಮೈಸೂರು ಬಳ್ಳಾರಿ ಜಿಲ್ಲಾ ಸಾಕ್ಷರತಾ ಕಾರ್ಯಕಾರಿ ಸಮಿತಿ ಸದಸ್ಯರು  ಸಾಮಾಜಿಕ ಸುಧಾರಕರಾದ ಎ ಅಬ್ದುಲ್ ನಬಿ ಅವರು ಹೇಳಿದರು. 

ನಗರದ ಇಬ್ರಾಹಿಮ್ ಮಂಜಿಲ್ ನಲ್ಲಿ 75ನೇ ಆಜಾದಿಕ ಅಮೃತ ಮಹೋತ್ಸವದ ಅಂಗವಾಗಿ ಹಸಿರು ಕ್ರಾಂತಿಯ ಹರಿಕಾರ ಭಾರತದ ಉಪ ಪ್ರಧಾನ ಮಂತ್ರಿ ಡಾ ಬಾಬು ಜಗಜೀವನ್ ರಾಮ್ ಅವರ 36ನೇ ಪುಣ್ಯ ಸ್ಮರಣೆ ನೆನಪಿಸಿ ಸ್ಮರಿಸಿ ಗೌರವಿಸಿದರು.

ನಗರದ ತಾಲ್ಲೂಕು ಪಂಚಾಯತ್ ಕಾರ್ಯಾಲಯದ ಸಭಾ ಭವನದಲ್ಲಿ ಹಸಿರುಕ್ರಾಂತಿ ಹರಿಕಾರ ಭಾರತದ ಮಾಜಿ ಉಪ ಪ್ರಧಾನಮಂತ್ರಿ ಡಾ ಬಾಬು ಜಗಜೀವನ್ ರಾಮ್ ಅವರ ಪುಣ್ಯ ಸ್ಮರಣೆ ನಡೆದ ಸಮಾರಂಭದಲ್ಲಿ ಜಗಜೀವನ್ ರಾಮ್ ಭಾವಚಿತ್ರಕ್ಕೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ, ತಾಲ್ಲೂಕು ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ಬಿ ರಾಜೇಶ್ವರಿ, ಜಗಜೀವನ್ ರಾಮ್, ತಾಲ್ಲೂಕು ಅಧ್ಯಕ್ಷ ವೀರೇಶ, ಮಹಿಳಾ ಮತ್ತು ಮಕ್ಕಳ ಯೋಜನಾಧಿಕಾರಿ ಕೆ ಜಲಾಲಪ್ಪ, ಬಳ್ಳಾರಿ ಜಿಲ್ಲಾ ಸಾಕ್ಷರತಾ ಸಮಿತಿ ಕಾರ್ಯಕಾರಿ ಸದಸ್ಯ ಎ ಅಬ್ದುಲ್ ನಬಿ, ಕಾನೂನು ಸಲಹೆಗಾರರು ವಕೀಲರು ಆನಂದ, ಮಲ್ಲೇಶ್ವರ, ನಾಗಪ್ಪ, ಸಿರಿಗೇರಿ ಮಂಜು, ರವಿ, ಮಹಾದೇವ, ತಾಲ್ಲೂಕು ಪಂಚಾಯತ್ ವೀರಯ್ಯ, ಸಿಬ್ಬಂದಿ ವರ್ಗದವರು ಪುಷ್ಪಾ  ಮಾಲಾರ್ಪಣೆ ದೊಂದಿಗೆ ಗೌರವಿಸಿ ಸ್ಮರಿಸಿ ನೆನಪು ಮಾತನಾಡಿದರು.

ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ ಅವರು ಮಾತನಾಡುತ್ತಾ ನಮ್ಮ ವೈವಿಧ್ಯಮಯ ಸಂಸ್ಕೃತಿ ಶ್ರೇಷ್ಠ ಪರಂಪರೆಯನ್ನು ಗೌರವಿಸುವುದು ಮತ್ತು ರಕ್ಷಿಸುವುದು ಪ್ರತಿಯೊಬ್ಬ ಭಾರತೀಯನ ಸಂವಿಧಾನ ಬದ್ಧ ಮೂಲಭೂತ ಕರ್ತವ್ಯ ಎಂದರು ಖತೀಬ್ ಜಹಿರುದ್ದೀನ್ ಬಾಬು ,ಹಾಜಿ ಹಂಡಿ ಹುಸೇನ್ ಬಾಷಾ, ಎ ಮೊಹಮ್ಮದ್ ನೌಶಾದ್ ಅಲಿ, ಹಂಡಿ ಹಾಶಿಮ್ ಕ್ಷೇತ್ರ, ಸಾಕ್ಷರತಾ ಗೌರವ ಸಂಯೋಜಕ ಜೆ ನಾಗೇಂದ್ರ ಗೌಡಾ ಮತ್ತಿತರರು ಇದ್ದರು 

ಸುದ್ದಿ ಓದಿ