ಸಂದರ್ಶನ

ಸ್ಯಾಂಡಲ್‌ವುಡ್ ಮಿ.ಪರ್ಫೆಕ್ಟ್ ಸುದೀಪ್ ನೊಂದಿಗೆ ಮಾತುಕತೆ:

ಸ್ಯಾಂಡಲ್‌ವುಡ್ ಮಿ.ಪರ್ಫೆಕ್ಟ್ ಸುದೀಪ್ ನೊಂದಿಗೆ ಮಾತುಕತೆ:

‘ಮ್ಯಾಕ್ಸ್‌’ ಹಾಗೂ ಮುಂದಿನ ಸಿನಿಮಾಗಳ ಬಗ್ಗೆ ಸುದೀಪ್ ಯೋಚನೆ-ಯೋಜನೆ: 

ಸುದೀಪ್ ಕನ್ನಡದಲ್ಲಿ ಈಗ ಬ್ಯುಸಿ ನಟರಲ್ಲಿ ಒಬ್ಬರು. ಮಿ.ಪರ್ಫೆಕ್ಟ್ ಇನ್ ಸ್ಯಾಂಡಲ್‌ವುಡ್ ಎಂದರೆ ಸುದೀಪ್ ಮಾತ್ರ ಎನ್ನಬಹುದು. ಇನ್ನೇನು ಕ್ರಿಸ್‌ಮಸ್ ದಿನ ‘ಮ್ಯಾಕ್ಸ್‌’ ಕನ್ನಡದೊಂದಿಗೆ ತಮಿಳು, ತೆಲಗು, ಹಿಂದಿ ಭಾಷೆಗಳಲ್ಲಿ ರೀಲೀಸ್ ಆಗುತ್ತದೆ. ಮಾದ್ಯಮ ಸ್ನೇಹಿಯಾಗಿರುವ ಸುದೀಪ್ ದೇಶಾದ್ಯಂತ ಮಾದ್ಯಮದವರೊಂದಿಗೆ ‘ಮ್ಯಾಕ್ಸ್‌’ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ಬ್ಯುಸಿ ಶೆಡ್ಯೂಲ್‌ನಲ್ಲಿ ಪತ್ರಿಕಾ ಮಾದ್ಯಮದವರೊಂದಿಗೆ ಮುಕ್ತವಾಗಿ ಮಾತನಾಡಿದರು. 

‘ಮ್ಯಾಕ್ಸ್‌’ ಸಿನಿಮಾದ ಶೂಟಿಂಗ್‌ನಲ್ಲಿ ನೀವು ಅನುಭವಿಸಿದ ಚಾಲೆಂಜ್‌ಗಳು? 

ಸುದೀಪ್‌: ‘ಮ್ಯಾಕ್ಸ್‌’ ಸಿನಿಮಾ ಒಂದು ರಾತ್ರಿಯಲ್ಲಿ ನಡೆಯುವ ಕಥೆ. ಸತತ 6 ತಿಂಗಳು ಶೂಟಿಂಗ್‌ನಲ್ಲಿ ತೊಡಗಿಕೊಂಡಿದೆ. ನಾವು ದಿನದಲ್ಲಿ 1 ಗಂಟೆಯ ಅಂತರದಲ್ಲಿ ಹಲವು ಬದಲಾವಣೆ ಕಾಣಬಹುದು. ಆದರೆ 6 ತಿಂಗಳುಗಳ ಕಾಲ ಒಂದೇ ಮೂಡ್, ಒಂದೇ ಬಾಡಿ ಶೇಪ್ ಹೀಗೆ ಸಿನಿಮಾದಲ್ಲಿ ಕಂಟಿನ್ಯೂಟಿಗೆ ಹೊಂದಿಕೊಳ್ಳುವುದು ಕಷ್ಟವಾಗುತಿತ್ತು. ಮಹಾಬಲಿಪುರಮ್‌ನಲ್ಲಿ ದೂಳು, ಅಲ್ಲಿನ ವಾತವರಣ ಹಾಗೂ ಪ್ರತಿರಾತ್ರಿ ಸಮಯದಲ್ಲಿ ಶೂಟ್‌ನಲ್ಲಿ ಭಾಗಿಯಾಗಿರುವುದೇ ಮೇನ್ ಚಾಲೆಂಜ್ ಆಗಿತ್ತು. 

‘ಮ್ಯಾಕ್ಸ್‌’ ಎರಡುವರೆ ವರ್ಷದ ಅಂತರದಲ್ಲಿ ಬರುತ್ತಿರುವುದಕ್ಕೆ ನಿಮ್ಮ ಅಭಿಪ್ರಾಯ? 

ಸುದೀಪ್‌:ಸುದೀಪ್‌ಸುದೀಪ್‌ ವರ್ಷವಲ್ಲ. ಒಂದುವರೆ ವರ್ಷ. ಲಾಕ್ ಡೌನ್ & ಕರೋನಾ ಸಮಯದಲ್ಲಿ ನನಗೂ ಕರೋನಾ ಅಟ್ಯಾಕ್ ಆಗಿ ಒಂದು ವರ್ಷ ಟ್ರೀಟ್ ಮೆಂಟ್ ್ಘ ಶೂಟಿಂಗ್‌ಗೆ ಬಾಡಿ ಮೆಂಟೇನ್ ಮಾಡಲು ಸಮಯ ಬೇಕಾಗಿತ್ತು. ಮ್ಯಾಕ್ಸ್‌ 6 ತಿಂಗಳು ಮೊದಲೇ ಬರಬೇಕಾಗಿತ್ತು. ಕೊನೆಗೂ 2024 ಕೊನೆಯ ತಿಂಗಳು ಕೊನೆಯ ವಾರದಲ್ಲಿ ರೀಲೀಸ್ ಆಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. 

‘ಮ್ಯಾಕ್ಸ್‌’ ಸಿನಿಮಾ ನಿರ್ಮಾಪಕರು ಹಾಗೂ ನಿರ್ದೇಶಕರು ತಮಿಳು ಸಿನಿಮಾ ಇಂಡಸ್ಟ್ರಿಯವರು ಇದರ ಲಾಭಗಳು? 

ಸುದೀಪ್‌:ಯೆಸ್ ಕನ್ನಡ ಇಂಡಸ್ಟ್ರಿಗೆ ಲಾಭವಾಗಿದೆ. ಇಲ್ಲಿನ ಕಲಾವಿದರಿಗೆ, ಟೆಕ್ನಿಷಿಯನ್ಸ್‌, ಡಿಸ್ಟ್ರಿಬ್ಯುಟರ್, ಚಿತ್ರಮಂದಿರದ ಮಾಲಿಕರಿಗೆ ಲಾಭವಾಗುತ್ತಿದೆ. ಇಲ್ಲಿಬಂದ ಲಾಭವನ್ನು ಇನ್ನೊಂದು ಕನ್ನಡ ಅದರ ಸಿನಿಮಾಗೆ ಬಂಡವಾಳ ಹೂಡಿದರೆ ಅದೇ ಕನ್ನಡದವರಿಗೆ ಲಾಭ. 

ಸಿನಿಮಾ ನಿರ್ಮಾಣಸಂಸ್ಥೆಯೊಂದಿಗೆ ನೀವು ನಟರಲ್ಲದೇ, ರೀಲೀಸ್ ್ಘ ಮಾರ್ಕೆಟಿಂಗ್‌ಗೆ ಸಲಹೆ ಕೊಡುವಿರಾ? ಅಲ್ಲದೇ ಟಿಕೇಟ್ ದರ ರೂ.600/ ರೂ.800/- ಆಗುತ್ತಿರುವುದಕ್ಕೆ ನಿಮ್ಮ ಅಭಿಪ್ರಾಯ? 

ಸುದೀಪ್‌: ಒಂದು ಟೀ ಬೆಲೆ ಸಾಮನ್ಯ ಹೋಟೆಲ್‌ನಲ್ಲಿ 20 ರೂ. ಅದೇ ಟೀಗೆ ಪೈವ್ ಸ್ಟಾರ್ ಹೋಟೆಲ್‌ನಲ್ಲಿ 200 ರೂ. ಇರುತ್ತದೆ. ಹಾಗೇ ಒಂದು ಸಿನಿಮಾಗೆ 300 / 400 ಕೋಟಿಗಳು ಇನ್ವೆಸ್ಟ್‌ ಮಾಡಿ ಆ ಬಂಡವಾಳ ಹಿಂದೆ ಪಡೆಯಬೇಕಾದರೆ ಟಿಕೇಟ್ ದರ ಏರಿಕೆ ಅನಿವಾರ್ಯ. ಈಗ ಮೂರೇ ದಿನಕ್ಕೆ ಪೈರಸಿ ಕಾಟದಿಂದ ತೊಂದರೆಯಾಗುತ್ತಿದೆ. ‘ಮ್ಯಾಕ್ಸ್‌’ ಸಿನಿಮಾ ಟಿಕೇಟ್ ದರದ ಬಗ್ಗೆ ನಿರ್ಮಾಪಕರು ಹಾಗೂ ವಿತರಕರು ನಿರ್ಧಾರ ತೆಗೆದುಕೊಳ್ಳುತ್ತಾರೆ. 

ನೀವು ಕಳೆದ ತಿಂಗಳು ಅಮ್ಮನನ್ನು ಕಳೆದುಕೊಂಡಿದ್ದೀರಿ. ಈ ದುಃಖದಲ್ಲಿಯೂ ಸಿನಿಮಾ, ರಿಯಾಲಿಟಿ ಶೋಗಳ ಬಗ್ಗೆ ಹೇಗೆ ತೊಡಗಿಕೊಂಡಿದ್ದೀರಿ? 

ಸುದೀಪ್‌: ಇಂದಿಗೂ ಆ ದುಃಖದಿಂದ ಹೊರಬಂದಿಲ್ಲ. ಈಗಲೂ ದಿನಕ್ಕೆ 3 ತಾಸು ನಿದ್ದೆ ಮಾಡುತ್ತೇನೆ. ಬೆಳಿಗ್ಗೆ 6ಕ್ಕೆ ಎಚ್ಚರವಾಗುತ್ತೆ. ಪ್ರತಿದಿನ ಬೆಳಿಗ್ಗೆ 6ಕ್ಕೆ ಬರುವ ಮೆಸೇಜ್ ಬರುತ್ತಿಲ್ಲವಲ್ಲ ಎಂದು ನೋವಾಗುತ್ತೆ. ನನ್ನ ಕೈಮೇಲೆ ಸಣ್ಣ ಅಮ್ಮನ ಜೀವ ಹೋಗಿದೆ. ಆ ಸಂಕಷ್ಟದಲ್ಲೂ ಬಿಗ್‌ಬಾಸ್ ನಡೆಸಿಕೊಡಬೇಕಾಯಿತು. ಅಲ್ಲಿ ನನ್ನ ನೋವಿಗಿಂತ ಬೇರೆಯವರ ಜೀವನವಿದೆ. ಕೆಲಸ ಅನಿವಾರ್ಯ. ಇಂದಿಗೂ ಜಿಮ್‌ಗೆ ಹೋದರೆ ಅಮ್ಮನ ನೆನಪಾಗಿ ಸುಮ್ಮನೆ ಕೂತಿರುತ್ತೇನೆ. 

ನಿಮ್ಮ ಮೊದಲ 45 ಸಿನಿಮಾಗಳನ್ನು ಅಮ್ಮ ಎಲ್ಲಿ ನೋಡುತ್ತಿದ್ದರು? 

ಸುದೀಪ್‌: ನನ್ನ ಎಲ್ಲಾ ಸಿನಿಮಾಗಳನ್ನು ಅಮ್ಮ ಚಿತ್ರಮಂದಿರದಲ್ಲಿಯೇ ನೋಡುತ್ತಿದ್ದರು. ‘ಪೈಲ್ವಾನ್‌’ ಸಿನಿಮಾದವರೆಗೂ ಚಿತ್ರಮಂದಿರಕ್ಕೆ ಹೋಗಿ, ಬಾಲ್ಕನಿ ಟಿಕೇಟ್ ಖರೀದಿಸಿ ನೋಡುತ್ತಿದ್ದರು. 

2025ಕ್ಕೆ ನಿಮ್ಮ ಮುಂದಿನ ಸಿನಿಮಾಗಳು ಬರುತ್ತದೆಯೇ?  

ಸುದೀಪ್‌: ನನ್ನ ಮುಂದಿನ ಸಿನಿಮಾ ‘ಬಿಲ್ಲಾ- ರಂಗಾ-ಭಾಷಾ’. ಮುಂದಿನ 18 ತಿಂಗಳ ಒಳಗಾಗಿ ತರಲು ಯೋಚನೆ- ಯೋಜನೆಯಿದೆ. ಮುಂದಿನದು ದೇವರ ಇಚ್ಚೆ. ನನ್ನ ಪ್ರಯತ್ನ ಸಿನಿಮಾ ಬೇಗ ಮುಗಿಸುವುದಕ್ಕೆ ಪ್ರಯತ್ನಿಸುತ್ತೇನೆ. 

ರಾಜೇಶ್ ಗಣಪತಿ 


ಸುದ್ದಿ ಓದಿ