ಆರೋಗ್ಯ ಕೇಂದ್ರಗಳ ಸುಧಾರಣೆ ಅಗತ್ಯವಾಗಿದೆ: ಶಾಸಕ ಸೋಮನಗೌಡ
ತಾಳಿಕೋಟಿ 04: ಜನರ ಆರೋಗ್ಯದ ಹಿತದೃಷ್ಠಿಯಿಂದ ಮಹತ್ವದ ಸ್ಥಾನ ಪಡೆದಿರುವ ಗ್ರಾಮೀಣ ಭಾಗದಲ್ಲಿರುವ ಆರೋಗ್ಯ ಕೇಂದ್ರಗಳ ಸಮಗ್ರ ಸುಧಾರಣೆ ಹಾಗೂ ಅವುಗಳ ಪುನಶ್ಚೇತನದ ಅಗತ್ಯ ಇದೆ ಎಂದುದೇ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ತಿಳಿಸಿದರು.
ಮಂಗಳವಾರ ಮತಕ್ಷೇತ್ರದ ಅಸ್ಕಿ ಗ್ರಾದಲ್ಲಿ ವಿವಿಧ ಕಾಮಗಾರಿಗಳಿಗೆ ಹಾಗೂ ಅಸ್ಕಿ ಆರೋಗ್ಯ ಕೇಂದ್ರಕ್ಕೆ ತಮ್ಮ ಅನುದಾನದಲ್ಲಿ ಬಿಡುಗಡೆಗೊಳಿಸಿದ ಅಂಬ್ಯುಲೆನ್ಸ್ ಲೋಕಾರೆ್ಣಗೊಳಿಸಿ ಮಾತನಾಡಿದರು. ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಇವುಗಳ ಸುಧಾರಣೆಗಾಗಿ ನಾನು ಸಾಕಷ್ಟು ಕಾಳಜಿವಹಿಸುತ್ತಿದ್ದೇನೆ ಇದಕ್ಕಾಗಿಯೇ ನನ್ನ ಕ್ಷೇತ್ರದಲ್ಲಿ ಸುಮಾರು 4 ಕೇಂದ್ರಗಳಿಗೆ ಅಂಬ್ಯುಲೆನ್ಸ್ ಹಾಗೂ ಈ ಆಸ್ಪತ್ರೆಗೆ ಒಂದು ಆಕ್ಸಿಜನ್ ಕಾನ್ಸಂಟೇಶನ್ ಕೊಡುತ್ತಿದ್ದೇನೆ ಇದರ ಸೇವೆ ಗ್ರಾಮೀಣ ಭಾಗದ ಜನರಿಗೆ ಸಿಗಬೇಕಾಗಿದೆ ಎಂದರು.
ಸ್ಥಳೀಯ ಆರೋಗ್ಯ ಕೇಂದ್ರದಲ್ಲಿರುವ ಸಮಸ್ಯೆಗಳನ್ನು ಗ್ರಾಮಸ್ಥರು ಶಾಸಕರ ಮುಂದೆತಂದಾಗ ಸಾಕಷ್ಟು ಸಹನೆಯಿಂದ ಅವರ ಸಮಸ್ಯೆ ಆಲಿಸಿದ ಅವರ ಕರ್ತವ್ಯದಲ್ಲಿ ಲೋಪ ಎಸಗಿದ ಅಧಿಕಾರಿಗಳಿಗೆ ಹಾಗೂ ಎನ್ಜಿಓ ಮುಖ್ಯಸ್ಥರಿಗೆ ತರಾಟೆಗೆ ತಗೆದುಕೊಂಡು ಮುಂದೆ ಹೀಗಾಗದಂತೆ ನೋಡಿಕೊಳ್ಳುವಂತೆ ಮಾಡುತ್ತೇನೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ), ಗ್ರಾ.ಪಂ. ಅಧ್ಯೆಕ್ಷೆ ಹಳ್ಳೆವ್ವ ವಣಿಕ್ಯಾಳ, ಜಿ.ಪಂ. ಮಾಜಿ ಸದಸ್ಯರಾದ ಸಾಹೇಬಣ್ಣ ಆಲ್ಯಾಳ, ಸಿದ್ದು ಬುಳ್ಳಾ, ಪ.ಪಂ. ಸದಸ್ಯರಮೇಶ ಮಸಬಿನಾಳ, ತಾ.ಪಂ. ಮಾಜಿ ಸದಸ್ಯ ಪ್ರಭುಗೌಡ ಅಸ್ಕಿ, ಎಸ್.ಕೆ.ದೇಸಾಯಿ, ಪ್ರಕಾಶ ಯರನಾಳ, ಎಪಿಎಂಸಿ ಉಪಾಧ್ಯಕ್ಷ ಪ್ರಕಾಶ ಪಡಶೆಟ್ಟಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಮಡಿವಾಳಪ್ಪ ತಳವಾರ ಇದ್ದರು.