ಮುಂದಗೋಡ

ರೈತಶಕ್ತಿ ಯೋಜನೆ ಅನುಷ್ಠಾನ

ರೈತಶಕ್ತಿ ಯೋಜನೆ ಅನುಷ್ಠಾನ

ಲೋಕದರ್ಶನ ವರದಿ 

ಮುಂಡಗೋಡ:2022-23ನೇ ಸಾಲಿನಲ್ಲಿ ರೈತಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು ಪ್ರಮುಖವಾಗಿ ರೈತರಿಗೆ ಕೃಷಿ ಯಾಂತ್ರೀಕರಣದಲ್ಲಿ ಇಂಧನ ವೆಚ್ಚದ ಭಾರ ಕಡಿಮೆ ಮಾಡುವ ಉದ್ದೇಶವು ಈ ಯೋಜನೆಯಲ್ಲಿರುತ್ತದೆ ಪ್ರತಿ ಎಕರೆಗೆ 250ರೂ.ನಂತೆ ಗರಿಷ್ಠ 5ಎಕರೆಗೆ ಮಿತಿಗೊಳಿಸಿ ನೇರ ನಗದು ವರ್ಗಾವಣೆ (ಆಃಖಿ) ಮೂಲಕ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಎಮ್‌.ಎಸ್‌.ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಈಖಗಋಖ ಪೊರ್ಟಲ್‌ನಲ್ಲಿ ನೋಂದಣಿಗೊಂಡು ಅರ್ಹವಾಗಿರುವ ಹಿಡುವಳಿ ವಿಸ್ತೀರ್ಣ ಪರಿಗಣಿಸಲಾಗುವುದು. ಈಗಾಗಲೇ ಈಋ ಮಾಡಿಸಿಕೊಂಡಿರುವ ರೈತರು ಯಾವುದೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಈಗಾಗಲೇ ಈಖಗಋಖ ಪೊರ್ಟಲ್‌ನಲ್ಲಿ ನೊಂದಾಯಿತರಾಗಿ ಈಋ ಹೊಂದಿರುವ ರೈತರು ತಮ್ಮ ಒಡೆತನದಲ್ಲಿರುವ ಎಲ್ಲಾ ಲ್ಯಾಂಡ್ ಪಾರ್ಸಲೆಗಳನ್ನು ಈಖಗಋಖ ಪೊರ್ಟಲ್‌ನಲ್ಲಿ ಮಾಡಿಸಿಕೊಳ್ಳಬೇಕು. ಇದಕ್ಕಾಗಿ 18-08-2022 ಅಂತಿಮ ದಿನಾಂಕವಾಗಿರುತ್ತದೆ. ಹೊಸ ಈಋಗಳನ್ನು ಸಹ ರೈತರು 18-08-2022ರ ಒಳಗಾಗಿ ಸೂಕ್ತ ದಾಖಲಾತಿಗಳೊಂದಿಗೆ ಮಾಡಿಕೊಳ್ಳಲು ಆವಕಾಶವಿರುತ್ತದೆ. ಅಂತಿಮ ದಿನಾಂಕದ ನಂತರ ಸೃಜನೆಯಾಗುವ ಈಋಗಳಿಗೆ ವಿಸ್ತೀರ್ಣಕ್ಕೆ ಅನುಗುಣವಾಗಿ ಅನುದಾನದ ಲಭ್ಯತೆಯ ಆಧಾರದ ಮೇಲೆ ಸಹಾಯಧನಕ್ಕೆ ಪರಿಗಣಿಸಲಾಗುವುದು. ಸಂಘಸಂಸ್ಥೆ/ಸ್ವ-ಸಹಾಯ ಗುಂಪುಗಳು/ಟ್ರಸ್ಟ್‌ಗಳು/ಸಂಸ್ಥೆಗಳ ಹೆಸರಿನಲ್ಲಿರುವ ಭೂ ಒಡೆತನಗಳು/ಒತ್ತುವರಿ ಮಾಡಿರುವ ಹಿಡುವಳಿಗಳು ಈ ಸಹಾಯಧನವನ್ನು ಪಡೆಯಲು ಅರ್ಹರಿರುವುದಿಲ್ಲ. ಹೊಸ ಈಋಗಳನ್ನು ಸೃಜನೆ ಮಾಡುವುದಾಗಲಿ ಅಥವಾ ಈಗಾಗಲೇ ಇರುವ ಈಋಗಳಿಗೆ ಲ್ಯಾಂಡ್ ಪಾರ್ಸಲೆಗಳನ್ನು ಅಪ್‌ಡೆಟ್ ಮಾಡಲು ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ/ ತೋಟಗಾರಿಕೆ ಇಲಾಖೆ/ಪಶುಸಂಗೋಪನಾ ಇಲಾಖೆ/ಜನಸೇವಾ ಕೇಂದ್ರಗಳನ್ನು ಸಂಪರ್ಕಿಸಬೇಕು ಎಂದು ಅವರು ತಿಳಿಸಿದ್ದಾರೆ. 


ಸುದ್ದಿ ಓದಿ