ಶಿಗ್ಗಾವ್

ಅ.16 ರಿಂದ ನ.25ರ ವರಗೆ ಹಾವೇರಿ ಜಿಲ್ಲೆಯಾಧ್ಯಂತ ನೀತಿ ಸಂಹಿತೆ ಜಾರಿ : ಮಹಮ್ಮದ ಖಿಜರ್

ಅ.16 ರಿಂದ ನ.25ರ ವರಗೆ ಹಾವೇರಿ ಜಿಲ್ಲೆಯಾಧ್ಯಂತ ನೀತಿ ಸಂಹಿತೆ ಜಾರಿ :  ಮಹಮ್ಮದ ಖಿಜರ್

ಶಿಗ್ಗಾವಿ 17: ಶಿಗ್ಗಾವಿ-ಸವಣೂರ ವಿಧಾನಸಭಾ ಕ್ಷೇತ್ರದಲ್ಲಿ ತೆರವಾದ ಶಾಸಕ ಸ್ಥಾನಕ್ಕೆ ಚುನಾವಣಾ ಆಯೋಗ ಉಪಚುನಾವಣೆ ಘೋಷಿಸಿದ್ದು ಅ.16 ರಿಂದ ನ.25ರ ವರಗೆ ಹಾವೇರಿ ಜಿಲ್ಲೆಯಾಧ್ಯಂತ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಚುನಾವಣಾ ಅಧಿಕಾರಿಯಾಗಿರುವ ಸವಣೂರ ಉಪ ವಿಭಾಗಾಧಿಕಾರಿ ಮಹಮ್ಮದ ಖಿಜರ್ ಹೇಳಿದರು. 

ಪಟ್ಟಣದ ತಹಶಿಲ್ದಾರ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬಸವರಾಜ ಬೊಮ್ಮಾಯಿ ಅವರು ಹಾವೇರಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಶಿಗ್ಗಾವಿ ಸವಣೂರ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು ಚುನಾವಣಾ ಆಯೋಗ ಉಪಚುನಾವಣೆ ಘೋಷಿಸಿದೆ. 

 ಭಾಕ್ಸ ಸುದ್ದಿ : ಅ.18ರಿಂದ 25 ರ ವರೆಗೆ ನಾಮಪತ್ರ ಸಲ್ಲಿಕೆ, ಅ.28 ನಾಮಪತ್ರ ಪರೀಶೀಲನೆ, ಅ.30 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ನ.13 ರಂದು ಮತದಾನ ನಡೆಯಲಿದ್ದು, ನ.23 ರಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 241 ಮತಗಟ್ಟೆಗಳಿದ್ದು, ಪುರುಷ ಮತದಾರರು 1,21,067. ಮಹಿಳಾ ಮತದಾರರು 1,15,717. ಇತರೆ 6 ಮತದಾರರು ಸೇರಿದಂತೆ ಒಟ್ಟು 2,36,790. ಮತದಾರರು ಮತ ಚಲಾಯಿಸಲಿದ್ದಾರೆ. 85 ವರ್ಷ ಮೇಲ್ಪಟ್ಟ ವಯೋವೃದ್ಧರು ಮತ್ತು ವಿಕಲಚೇತನರಿಗೆ ಮನೆಯಿಂದಲೇ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಚುನಾವಣಾ ಸಿಬ್ಬಂದಿ ಮೂಲಕ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.  

ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಅಭಿವೃದ್ಧಿ ಪರ ಘೋಷಣೆ ಮಾಡುವಂತಿಲ್ಲ. ಕ್ಷೇತ್ರದ ಪಾಣಿಗಟ್ಟಿ, ಕೋಣನಕೆರೆ, ತಡಸ ಮತ್ತು ರಾಮನಕೊಪ್ಪ ಬಳಿ ಚೆಕ್ ಪೋಸ್ಟಗಳನ್ನು ತೆರೆಯಲಾಗಿದ್ದು, ಹೊರ ಹೋಗುವ ಮತ್ತು ಕ್ಷೇತ್ರದ ಒಳಬರುವ ಎಲ್ಲ ವಾಹನಗಳನ್ನು ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ತಪಾಸಣೆ ನಡೆಸಲಿದ್ದಾರೆ. ಎನ್‌ಸಿಸಿ ನೋಡಲ್ ಅಧಿಕಾರಿಗಳು, ಪುರಸಭೆ ಅಧಿಕಾರಿಗಳು, ಮೇಲ್ವಿಚಾರಣಾ ಸಮಿತಿ ಕಾರ್ಯನಿರ್ವಹಿಸಲಿದ್ದು, ರಾಜಕೀಯ ಪಕ್ಷಗಳ ಬ್ಯಾನರ್, ಬಂಟಿಂಗ್ಸ್‌ ಹೋಡಿಂರ್ಗ್‌ಗಳನ್ನು ತಕ್ಷಣ ತೆರವುಗೊಳಿಸಲಾಗುವುದು. 

ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಯಾವುದೇ ದೂರು ಇತರೆ ಮಾಹಿತಿಗಾಗಿ ಸಿವಿಜಿ ಯಾಪ್ ಮೂಲಕ ಅಥವಾ 08378-255044. ಪೋನ್ ಮೂಲಕ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಹೇಳಿದರು. 

ಸುದ್ದಿಗೋಷ್ಠಿಯಲ್ಲಿ  ತಹಶಿಲ್ದಾರ ಸಂತೋಷ ಹಿರೇಮಠ, ಸವಣೂರ ತಹಶಿಲ್ದಾರ ಎಸ್‌.ಎ. ಭರತ್, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ್ ಆರ್ ಇದ್ದರು. 


ಸುದ್ದಿ ಓದಿ