ಬೆಳೆಗಳಿಗೆ ರೋಗ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ರೈತರ ನರೆವಿಗೆ ಧಾವಿಸಿ
ಶಾಸಕ ಮಹಾದೇವಪ್ಪ ಯಾದವಾಡ ಸೂಚನೆ: ಸಮಗ್ರ ಕೃಷಿ ಅಭಿಯಾನ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮ
ರಾಮದುರ್ಗ 17: ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಕೃಷಿ ಇಲಾಖೆ ಅಧಿಕಾರಿಗಳು ರೈತರ ಬೆಳೆಗಳಿಗೆ ರೋಗದ ಲಕ್ಷಣಗಳು ಕಂಡು ಬಂದರೆ ತಕ್ಷಣದಲ್ಲಿಯೆ ರೈತರ ನರೆವಿಗೆ ಧಾವಿಸಿ ಸಲಹೆ ನೀಡಿ ಬೆಳೆಗಳು ಉತ್ತಮ ಫಸಲನ್ನು ನೀಡುವಂತೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕೃಷಿ ಇಲಾಖಾಧಿಕಾರಿಗಳಿಗೆ ಶಾಸಕ ಮಹಾದೇವಪ್ಪ ಯಾದವಾಡ ಸೂಚನೆ ನೀಡಿದರು.
ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಕೃಷಿ, ಕಂದಾಯ ಇಲಾಖೆ, ಕೃವಿವಿ ಧಾರವಾಡ ಕೃಷಿ ವಿಜ್ಞಾನ ಕೇಂದ್ರ ಮತಿಕೊಪ್ಪ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರಿ್ಡಸಿದ ಸಮಗ್ರ ಕೃಷಿ ಅಭಿಯಾನ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಉಭಯ ಸರಕಾರಗಳು ರೈತರ ಸಮಗ್ರ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿವೆ ಅವುಗಳ ಪ್ರಯೋಜನ ಪಡೆದುಕೊಂಡು ಆರ್ಥಿಕವಾಗಿ ಸದೃಢವಾಗುವಂತೆ ಅವರು ಕರೆ ನೀಡಿದರು.
ತಾಲೂಕಿನಲ್ಲಿ ನೀರೀಕ್ಷೆಗಿಂತಲೂ ಹೆಚ್ಚಿಗೆ ಮಳೆಯಾಗಿ 42369 ಹೆಕ್ಟರ ಭೂಮಿ ಬಿತ್ತನೆಯಾಗಿ 1 ತಿಂಗಳ ಬೆಳೆಗಳಿವೆ, ಬೆಳೆಗಳಿಗೆ ಕೀಟಗಳ ಭಾದೆಯಾದಲ್ಲಿ ರೈತರು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಿಗೆ ಬೇಟಿ ನೀಡಿ ಮಾಹಿತಿ ಪಡೆಯಬೇಕು ಅಲ್ಲಿ ಕೃಷಿ ವಿಜ್ಞಾನಿಗಳಿಂದಾ ಮಾಹಿತಿ ಪಡೆದು ಸಲಹೆ ನೀಡುತ್ತಾರೆ ಇದರಿಂದಾ ತಕ್ಷಣದಲ್ಲಿಯೇ ರೋಗ ನಿಯಂತ್ರಿಸಲು ಸಾಧ್ಯವಿದೆ ಎಂದು ಯೋಜನಾ ನಿರ್ದೇಶಕರು ಹಾಗೂ ಆತ್ಮ ಹೋಜನೆ ಮತ್ತು ಉಪ ಕೃಷಿ ನಿರ್ದೇಶಕ ಹೆಚ್ ಡಿ ಕೋಳೆಕರ್ ಸಲಹೆ ನೀಡಿದರು.
ಕೀಟಗಳ ಭಾದೆಯಾದಾಗ ಕೃಷಿ ವಿಜ್ಙಾನಿಗಳ ಸಲಹೆಯಂತೆ ಡಿಜಿಟಲ್ ಗೊಗಲ್ ಮುಖಾಂತರ ಜಿಲ್ಲೆಯ ಕೃಷಿ ಓಷದ ವಿತರಕರ ಸಭೆ ಕರೆದು ಇದೆ ಓಷದವನ್ನು ನೀಡಬೇಕು ಇಲ್ಲವಾದರೆ ಅಗಂಡಿಗಳ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ಕೂಡಾ ನೀಡಲಾಗಿದೆ ಎಂದು ತಿಳಿಸಿದರು. ಕೃಷಿಕ ಸಮಾಜದ ಅಧ್ಯಕ್ಷ ವಾಚ್ ಪಾಟೀಲ, ರೈತ ಸಂಘದ ಅಧ್ಯಕ್ಷ ದೇವರಡ್ಡಿ, ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ, ತಾಪಂ ಇಓ ಮುರಳೀದರ ದೇಶಪಾಂಡೆ, ಸಹಾಯಕ ಕೃಷಿ ನಿರ್ದೇಶಕ ಎಸ್ ಎಘ್ ಬೆಳವಟಗಿ, ಎಪಿಎಮ್ ಸಿ ಅಧ್ಯಕ್ಷ ದ್ಯಾವಪ್ಪ ಬೆಳವಟಗಿ, ಹಾಗೂ ರೈತರು ಹಾಜರಿದ್ದರು.