ಮುದ್ದೆಬಿಹಾಲ್

ಅಕ್ರಮ ಮದ್ಯ ಮಾರಾಟ: ಕ್ರಮ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ

ಅಕ್ರಮ ಮದ್ಯ ಮಾರಾಟ: ಕ್ರಮ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ

ಮುದ್ದೇಬಿಹಾಳ ಮುದ್ದೇಬಿಹಾಳ. ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ತಡೆಹಿಡಿಯುವ ಉದ್ದೇಶದಿಂದ ಹಲವಾರೂ ಬಾರಿ ಹೋರಾಟ ಮಾಡಿದರೂ ಸಂಬಂಧಿಸಿದ ಅಭಕಾರಿ ಅಧಿಕಾರಿಗಳು ಜಾಣ ಕುರುಡತನದ ವರ್ತನೆ ಮಾಡುತ್ತಿರುವುದರಿಂದ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಕಾನೂನಿನ ಬಾಹಿರ ಮಾರಾಟ ಮಾಡುವುದು ಎಗ್ಗಿಲ್ಲದೇ ನಡೆಯುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಮಂಜುನಾಥಸ್ವಾಮಿ ಕುಂದರಗಿ ಆರೋಪಿಸಿದರು.  

ತಾಲೂಕಿನ ಬಸರಕೋಡ ಗ್ರಾಮದಲ್ಲಿ ಜಾನಪದ ಸಮ್ಮೇಳನ ಕಾರ್ಯಕ್ರಮದ  ಉದ್ಘಾಟನೆಗಾಗಿ ಆಗಮಿಸಿದ್ದ ಲೋಕಾಯುಕ್ತರಾದ ಬಿ ಎಸ್ ಪಾಟೀಲ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಲ್‌-2 ಸಿಎಲ್‌-7 ಸಿಎಲ್‌-9 ಮಧ್ಯದಂಗಡಿಗಳು ಕಾನೂನಿನ ಬಾಹಿರವಾಗಿ, ಗ್ರಾಮೀಣ ಪ್ರದೇಶದಲ್ಲಿಡಿದುಕೊಂಡು, ನಗರದಲ್ಲಿ  ಹೋಟೇಲ್, ಡಾಬಾಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವದನ್ನು ತಡೆಯಿಡಿಯಬೇಕು. ಮತ್ತು 22ರ ನವಂಬರ್ 2ರಂದು ಸ್ಥಳೀಯ ಅಬಕಾರಿ ಅಧಿಕಾರಿಯಾದ ಜ್ಯೋತಿ ಮೈತ್ರಿ ಮದ್ಯದಂಗಡಿ ಮಾಲಿಕರನ್ನು ಸಭೆ ಕರೆದು ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ   ಮೇಲಾಧಿಕಾರಿಗಳನ್ನಿಡಿದುಕೊಂಡು ಎಲ್ಲರಿಗೂ ಲಂಚ ಕೊಟ್ಟಿದ್ದಿರಿ? ನಮಗ್ಯಾಕೆ ಇನ್ನೂ ಕೊಟ್ಟಿರುವದಿಲ್ಲಾ ಎನ್ನುವ ಸಂಭಾಷಣೆಯ ವಿಡಿಯೋ ವೈರಲ್ ಆಗಿದ್ದನ್ನು ತನಿಖೆ ಮಾಡಿ ತಪಿಸ್ಥ ಅಬಕಾರಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಲೋಕಾಯುಕ್ತ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. 

 

ಸುದ್ದಿ ಓದಿ