ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ: ಮೂರು ವಾಹನ ಜಪ್ತಿ; 385 ಚೀಲ ವಶ
ಬಳ್ಳಾರಿ 26: ಸಿರುಗುಪ್ಪ ತಾಲ್ಲೂಕು ವ್ಯಾಪ್ತಿಯಲ್ಲಿ ಅರಳಿಗನೂರು ಕಡೆಯಿಂದ ಸಿರುಗುಪ್ಪ ಪಟ್ಟಣದಕಡೆಗೆ ಶನಿವಾರ ಬೆಳಗಿನ ಜಾವಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣಿಕೆ ಮಾಡಿತ್ತಿದ್ದ ಮೂರು ವಾಹನಗಳನ್ನು ಜಪ್ತಿ ಮಾಡಿ, 385 ಅಕ್ಕಿ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿರುಗುಪ್ಪ ತಾಲ್ಲೂಕಿನಆಹಾರ ನೀರೀಕ್ಷಕ ಎಂ.ವಿಜಯ್ಕುಮಾರ್ ತಿಳಿಸಿದ್ದಾರೆ.
ಅಕ್ಕಿಯು ಸರ್ಕಾರದ ವಿವಿಧ ಯೋಜನೆಗಳಡಿ ಬಡ ಕುಟುಂಬಗಳಿಗೆ ಉಚಿತವಾಗಿ ವಿತರಣೆ ಮಾಡುವ ಪಡಿತರಅಕ್ಕಿಯಾಗಿದ್ದು, ಈ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ವಿವಿಧ ಕಾನೂನುಗಳಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿರುಗುಪ್ಪ ಪೊಲೀಸ್ಠಾಣೆಗೆದೂರು ಸಲ್ಲಿಸಲಾಗಿದೆಎಂದು ತಿಳಿಸಿದ್ದಾರೆ.