ಬಳ್ಳಾರಿ

ಅಕ್ರಮ ಮರಳು ಸಾಗಣೆ: 7ತೆಪ್ಪ ವಶ

ಅಕ್ರಮ ಮರಳು ಸಾಗಣೆ: 7ತೆಪ್ಪ ವಶ

ಹೂವಿನಹಡಗಲಿ 09: ತಾಲೂಕಿನ ಮೈಲಾರ ಬಳಿ ತುಂಗಭದ್ರಾ ನದಿಯಲ್ಲಿ ಕಬ್ಬಿಣದ ತೆಪ್ಪಗಳಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿ ಏಳು ತೆಪ್ಪಗಳನ್ನು ವಶಪಡಿಸಿಕೊಂಡಿದ್ದಾರೆ. 

ಹಿರೇಹಡಗಲಿ ಠಾಣೆ ಪಿಎಸ್‌ಐ ದಾದಾವಲಿ ನೇತೃತ್ವದ ಪೊಲೀಸರ ತಂಡ ದಿಢೀರ ದಾಳಿ ನಡೆಸಿದೆ. ಅಕ್ರಮ ದಂಧೆಯಲ್ಲಿ ಹಾವೇರಿ ಜಿಲ್ಲೆಯ ಗಳಗನಾಥದ ಆನಂದ ಪೂಜಾರ, ರಾಣೆಬೆನ್ನೂರು ತಾಲೂಕಿನ ಚಿಕ್ಕಕುರುವತ್ತಿಯ ವಿವೇಕ ಕಲ್ಲಮ್ಮನವರ್ ಅವರ ಹೆಸರು ,ವಿಳಾಸವನ್ನು ಪೊಲೀಸರು ಪತ್ತೆ ಹಚ್ಚಿ ತನಿಖೆ ಕೈಗೊಂಡಿದ್ದಾರೆ.ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಸುದ್ದಿ ಓದಿ