ಅಕ್ರಮ ಗಾಂಜಾ ವಶ: ನಾಲ್ವರ ಬಂಧನ
ಮುಂಡಗೋಡ 04: ಅಕ್ರಮವಾಗಿ ಗಾಂಜಾ ವ್ಯವಹಾರ ನಡೆಸುತ್ತಿದ್ದವರ ಮೇಲೆ ಮುಂಡಗೋಡ ಪೊಲೀಸರು ದಾಳಿ ನಡೆಸಿ 20 ಸಾವಿರ ಮೌಲ್ಯದ 628 ಗ್ರಾಂ ಗಾಂಜಾ ಸಮೇತ ನಾಲ್ವರು ಆರೋಪಿಗಳನ್ನು ಬಂಧಿಸಿದ ಘಟನೆ ತಾಲೂಕಿನ ಸಾಲಗಾಂವ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಗಾಂಜಾ ಮಾರಾಟ ಮಾಡಲು ಬಂದಿದ್ದ ಹಾನಗಲ್ ತಾಲೂಕು ನವನಗರ ಗ್ರಾಮದ ಇಮ್ರಾನ್ ಬ್ಯಾಡಗಿ, ಅಕ್ಕಿ ಆಲೂರ ಗ್ರಾಮದ ಮಹ್ಮದ್ ಇರ್ಾನ ತಿಮ್ಮಾಪುರ, ಶೇಖಅಹ್ಮದ ಅಶ್ಪಾಕ್ ಹಾಗೂ ಅದನ್ನು ಖರೀದಿಸುತ್ತಿದ್ದ ಸಾಲಗಾಂವ ಗ್ರಾಮದ ಗಂಗಪ್ಪ ಪರಸಣ್ಣವರ ಈ ನಾಲ್ವರು ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮುಂಡಗೋಡ ಪಿ.ಎಸ್.ಐ ಬಸವರಾಜ ಮಬನೂರ ಹಾಗೂ ಸಿಬ್ಬಂದಿಗಳು ಮಾಲು ಸಮೇತ ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ.