ಇಂಡಿ

ಅಕ್ರಮ ಮದ್ಯ ವಶ: ಆರೋಪಿ ಬಂಧನ

ಅಕ್ರಮ ಮದ್ಯ ವಶ: ಆರೋಪಿ ಬಂಧನ


ಇಂಡಿ 18: ಇಂಡಿ ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟ ಅಂದಾಜು 8640 ರೂ, ಮೌಲ್ಯದ 25920 ಲೀಟರ್ ಮದ್ಯವನ್ನು ಶುಕ್ರವಾರ ವಶಡಿಸಿಕೊಂಡಿದ್ದಾರೆ. 

ಮಾವಿನಹಳ್ಳಿ ಗ್ರಾಮದ ಪಾನಶಾಪ ಅಂಗಡಿ ಮೇಲೆ ದಾಳಿಮಾಡಿದ ಅಧಿಕಾರಿಗಳು ಭಾಗಪ್ಪ ಮುತ್ತಪ್ಪ ಪೂಜಾರಿಯನ್ನು ಬಂಧಿಸಿ ಮದ್ಯ ಜಪ್ತುಮಾಡಿದ್ದಾರೆ.  

ಆರೋಪಿತನನ್ನು ದಸ್ತಗಿರ ಮಾಡಿ ನ್ಯಾಯಲಯಕ್ಕೆ ಹಾಜರಪಡಿಸಿ ಅಬಕಾರಿ ಉಪ ನೀರೀಕ್ಷಕ (ಹೆ.ಪ್ರ) ಪರೀನಾ ಖದರಸಾಬ ವನಕ್ಯಾಳ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಸಿಬ್ಬಂದಿಗಳಾದ ಸಂಜಯ ಆರ್ ಕುಲಕರ್ಣಿ, ಮಂಜುನಾಥ ಬಡಿಗೇರ, ಶಿವಶಂಕರ ಗೊಟ್ಯಾಳ ದಾಳಿಯಲ್ಲಿ ಪಾಲ್ಗೊಂಡಿದರು.  


ಸುದ್ದಿ ಓದಿ