ಭಕ್ತಿಯಿಂದ ಭಜಿಸಿದರೆ ಭಗವಂತನ ಸಾಕ್ಷಾತ್ಕಾರ ಸಾಧ್ಯ
ಲೋಕದರ್ಶನ ವರದಿ
ದೇವರಹಿಪ್ಪರಗಿ 11: ಭಕ್ತಿಯಿಂದ ಭಜಿಸಿದರೆ ಭಗವಂತನ ಸಾಕ್ಷಾತ್ಕಾರ ಸಾಧ್ಯ ಎಂಬ ನಿದರ್ಶನಕ್ಕೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನ ಚರಿತಾರ್ಥವೆ ಸಾಕ್ಷಿ’ ಎಂದು ದೇವರಹಿಪ್ಪರಗಿ ಪಟ್ಟಣದ ಜಡಿ ಮಠದ ಷ.ಬ್ರ.ಶ್ರೀ ಜಡಿ ಸಿದ್ದೇಶ್ವರ ಶಿವಾಚಾರ್ಯರು ಹೇಳಿದರು.ತಾಲೂಕಿನ ಡೋಣಿ ಕಡಕೋಳ ಗ್ರಾಮದ ಶ್ರೀ ಮಡಿವಾಳೇಶ್ವರ ಗದ್ದುಗೆ ಹಿರೇಮಠದಲ್ಲಿ ನಡೆದ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನ ಮಹಾಪುರಾಣ ಕಾರ್ಯಕ್ರಮದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಜಯಂತ್ಯೋತ್ಸವದಲ್ಲಿ ಮಾತನಾಡಿದ ಅವರು, ಮನುಕುಲದ ಒಳಿತಿಗಾಗಿ ಜನಿಸಿ ಬಂದ ಜಗನ್ಮಾತೆ ಪಾರ್ವತಿ ದೇವಿಯ ಪ್ರತಿರೂಪ ಮಲ್ಲಮ್ಮ. ಧರ್ಮ, ದೇವರು, ಭಕ್ತಿ, ನೀತಿ, ಸಂಸ್ಕಾರ, ಸಂಸ್ಕೃತಿ, ಆಚಾರ, ವಿಚಾರ, ಶ್ರದ್ಧೆ ಮತ್ತು ಸಂಪ್ರದಾಯಗಳ ಶ್ರೇಷ್ಠತೆಯ ಮಹಾತಾಯಿ ಮಲ್ಲಮ್ಮ, ಬದುಕಿನ ಬವಣೆಗಳನ್ನು ಮೆಟ್ಟಿ ನಿಲ್ಲುವ ಮೂಲಕ ಭಕ್ತಿಯ ಮುಕ್ತಿಗೆ ಮುನ್ನುಡಿ ಬರೆದು ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡ ಹೇಮರೆಡ್ಡಿ ಮಲ್ಲಮ್ಮಳ ಬದುಕು ಪ್ರತಿಯೊಬ್ಬ ಮಹಿಳೆಯರಿಗೆ ಆದರ್ಶ ಅನುಕರಣೆಯಾಗಲಿ ಎಂದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಗುರು ಮಠದ ಶ್ರೀ ಮ.ನಿ.ಪ್ರ ಮಡಿವಾಳೇಶ್ವರ ಶ್ರೀಗಳು ವಹಿಸಿದ್ದರು. ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖರು ಗಣ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸುವರು.