ಶಿಗ್ಗಾವ್

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ: ಉತ್ತಮ ಸಾಧನೆಯಷ್ಟೆ ಸಮಾನ

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ: ಉತ್ತಮ ಸಾಧನೆಯಷ್ಟೆ ಸಮಾನ


ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ: ಉತ್ತಮ ಸಾಧನೆಯಷ್ಟೆ ಸಮಾನ 


ಶಿಗ್ಗಾವಿ 26 : ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ಹಾಗೂ ಶಿಕ್ಷಣವನ್ನು ನೀಡುವುದರಿಂದ ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುವುದು ಎಂದು ದಿವಾಣಿ ನ್ಯಾಯಾದೀಶೆ ಅಶ್ವಿನಿ ಚಂದ್ರಕಾಂತ ತಿಳಿಸಿದರು. 

      ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾವೇರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಶಿಗ್ಗಾವಿ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಶಿಗ್ಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಅಂತರ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಕಾರ್ಯಕ್ರಮವನ್ನು ಡಾ: ಬಿ ಆರ್ ಅಂಬೇಡ್ಕರ್ ಸರ್ಕಾರಿ ಕಛೇರಿಗಳ ಸಂಕೀರ್ಣ ಶಿಗ್ಗಾವಿ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣವನ್ನು ಕಲಿತಾಗ ಮಾತ್ರ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದರು.  

ಮೇಲ್ವಿಚಾರಕಿ ಶೈಲಜಾ ತಳವಾರ ಪ್ರಸ್ತಾವಿಕವಾಗಿ ಮಾತನಾಡಿ ಅಂತರ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಉದ್ದೇಶ ಹಾಗೂ ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿದರು.  

ನ್ಯಾಯವಾದಿ ಎಮ್ ಎಲ್ ಗೋಣೆಪ್ಪನವರ ಮಾತನಾಡಿ ಹೆಣ್ಣು ಮಕ್ಕಳಿಗೆ ಕಾನೂನಿನಲ್ಲಿರುವ ಸೌಲಭ್ಯಗಳ ಬಗ್ಗೆ ಮತ್ತು ಹೆಣ್ಣು ಕುಟುಂಬದ ಕಣ್ಣು, ಹೆಣ್ಣಿಲ್ಲದ ಕುಟುಂಬದ ಸ್ಥಿತಿಯನ್ನು ಊಹಿಸಿಕೊಳ್ಳಲು ಅಸಾಧ್ಯ ಎಂದು ತಿಳಿಸಿದರು. 

    ತಾಲೂಕ ವೈದ್ಯಾಧಿಕಾರಿ ಸತೀಶ ಮಾತನಾಡಿ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಆಚರಿಸಲು ಮುಖ್ಯ ಕಾರಣ ಸಮಾಜದಲ್ಲಿ ಇರುವ ಅಸಮಾನತೆ ಹೊಗಲಾಡಿಸಲು ಹೆಣ್ಣು ಮಕ್ಕಳನ್ನು ಸುಸಕ್ತ ಮತ್ತು ಸಬಲೀಕರಣ ಮಾಡುವುದು ತಾಯಿ ಗರ್ಬೀಣಿ ಇರುವಾಗಲೇ ಮಗುವಿನ ಆರೋಗ್ಯದ ಬಗ್ಗೆ ಗಮನಹರಿಸಲು ತಿಳಿಸಿದರು. ನ್ಯಾಯವಾದಿ ಎಮ್ ಜಿ ಬಿಜಾಪೂರ ಭ್ರೂಣ ಹತ್ಯೆಯ ಬಗ್ಗೆ ಸವಿಸ್ತಾರವಾಗಿ ಹೇಳಿದರು.  

    ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಣೇಶ ಲಿಂಗನಗೌಡ್ರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಇಲಾಖೆಯಲ್ಲಿ ಹೆಣ್ಣು ಮಕ್ಕಳಿಗೆ ಇರುವ ಯೋಜನೆಗಳು ಮಕ್ಕಳ ಹಕ್ಕುಗಳು ಹೆಣ್ಣು ಮಕ್ಕಳು ತಮ್ಮ ಮೇಲೆ ಆಗುತ್ತಿರುವ ದೌರ್ಜನ್ಯಗಳಿಂದ ರಕ್ಷಣೆ ಮಾಡಿಕೊಳ್ಳುವ ಬಗ್ಗೆ ಮಕ್ಕಳ ಸಹಾಯವಾಣಿ ಬಗ್ಗೆ ಹೆಣ್ಣು ಮಕ್ಕಳ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಗಳ ಸಹಿತ ಎಲ್ಲರ ಮನ ಮುಟ್ಟುವಂತೆ ಮಾಹಿತಿ ನೀಡಿದರು. 

  

  

     ಈ ಕಾರ್ಯಕ್ರಮದಲ್ಲಿ ಕಿಶೋರಿಯರು, ಮಕ್ಕಳ ತಾಯಂದಿರು ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು. ಕುಮಾರಿ ವೇದಾ ಬಡಿಗೇರ ಪ್ರಾರ್ಥಿಸಿದರು,  ಜಯಶ್ರೀ ಕಾವಲಕೊಪ್ಪ ಸ್ವಾಗತಿಸಿದರು, ರಜನಿ ಹುರಳಿಕುಪ್ಪಿ ವಂದಿಸಿದರು.  ಸುಜಾತಾ ಜವಳಗೇರಿ ನಿರೂಪಿಸಿದರು. 


ಸುದ್ದಿ ಓದಿ