ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ
ಬಳ್ಳಾರಿ18: ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಪೋಷಕರು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಹೇಳಿದರು.
ನಗರದ ಮಿಲ್ಲರ್ಪೇಟೆಯ ಕಲ್ಯಾಣಸ್ವಾಮಿ ಮಠದಲ್ಲಿ ಶುಕ್ರವಾರರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಚಿಗುರು-2020 ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಚಿಗುರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರತಿಭೆಯನ್ನು ತೋರಿ ಜಿಲ್ಲೆಗೆ ಹೆಮ್ಮೆಯನ್ನು ತರಬೇಕು. ಮುಂದಿನ ದಿನಗಳಲ್ಲಿ ಸಹ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು. ಈ ವೇದಿಕೆಯನ್ನು ಮಕ್ಕಳು ಸದುಪಯೋಗ ಪಡೆದುಕೊಂಡು ಒಳ್ಳೆಯ ಕಲಾವಿದರಾಗಬೇಕು ಎಂದರು.
ಕಮ್ಮರಚೇಡು ಸಂಸ್ಥಾನ ಮಠದ ಪೂಜ್ಯ ಶ್ರೀ ಕಲ್ಯಾಣ ಮಹಾಸ್ವಾಮಿಗಳು ಅವರು ಮಾತನಾಡಿ, ಮಕ್ಕಳು ಎಂತಹ ಪ್ರತಿಭೆ ತೋರಿಸಿದರು ಸಕರ್ಾರದಿಂದ ಬರುವ ಗೌರವ ಬೆಲೆ ಕಟ್ಟಲಾಗದು. ಕಲೆಯ ಪ್ರತಿಭೆಯನ್ನು ತೋರಿಸುವ ಅವಕಾಶವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡುತ್ತಿದ್ದು, ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಂಡು ಪ್ರತಿಭೆಯನ್ನು ತೋರಬೇಕು ಎಂದರು.
ಪತ್ರಕರ್ತ ಕೆ.ಎಂ.ಮಂಜುನಾಥ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೆಶಕರಾದ ಸಿದ್ದಲಿಂಗೇಶ.ಕೆ ರಂಗಣ್ಣವರ ಸ್ವಾಗತಿಸಿದರು.
ಈ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಬಳ್ಳಾರಿಯ ರಾಘವಷರ್ಿಣಿ ಅವರಿಂದ ಕನರ್ಾಟಕ ಸಂಗೀತ, ಜಾನ್ಹವಿ ಅವರಿಂದ ಭರತನಾಟ್ಯ, ಸಂಡೂರು ತಾಲೂಕಿನ ತೋರಣಗಲ್ಲು ಮೌನಿಕ ಅವರಿಂದ ಸುಗಮ ಸಂಗೀತ, ಬಳ್ಳಾರಿ ಅಜಯ್ ಅವರಿಂದ ಏಕ ಪಾತ್ರಾಭಿನಯ, ಷಣ್ಮುಗಂ ಅವರಿಂದ ಜಾನಪದ ಗೀತೆಗಳು, ಧಾರವಾಡ ಜಿಲ್ಲೆಯ ಹಳಿಯಾಳನ ಕೀತರ್ಿ ಕಲಾ ಲೋಕ ಅವರಿಂದ ಮೂಡಲಪಾಯ ಮತ್ತು ಬಳ್ಳಾರಿ ಹೆಚ್.ರಕ್ಷಿತ ಮತ್ತು ತಂಡದಿಂದ ಸಮೂಹ ನೃತ್ಯ ನಡೆದವು.
ಈ ಸಂದರ್ಭದಲ್ಲಿ ಕಲಾವಿದರಾದ ಮಂಜುನಾಥ್, ಸಿರಿಸಿಯ ಮೂಡಲಪಾಯ ಕಲಾವಿದರಾದ ಹೆಚ್.ಗಣೇಶ್, ಸೂರ್ಯಕಲಾ ಟ್ರಸ್ಟ್ನ ಅಧ್ಯಕ್ಷ ಅಭಿಷೇಕ್ ಸೇರಿದಂತೆ ಇತರೆ ಗಣ್ಯವ್ಯಕ್ತಿಗಳು ಇದ್ದರು.